w
Headlines
Home » ಶ್ರೀಗಂಧದ ತುಂಡು ಮಾರುತ್ತಿದ್ದ ಇಬ್ಬರ ಬಂಧನ

ಶ್ರೀಗಂಧದ ತುಂಡು ಮಾರುತ್ತಿದ್ದ ಇಬ್ಬರ ಬಂಧನ

Images 2025 08 09T201551.140

ಶ್ರೀಗಂಧದ ತುಂಡು ಮಾರುತ್ತಿದ್ದ ಇಬ್ಬರ ಬಂಧನ

Two arrested for selling sandalwood

ಶಿವಮೊಗ್ಗ: ಶ್ರೀಗಂಧದ ಮರ ಕಡಿದು ಸಣ್ಣ ತುಂಡುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ದೊಡ್ಡಪೇಟೆ ಪೊಲೀಸರು ಅಶೋಕನಗರ ಚಾನಲ್ ಬಳಿ  ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ೧೫ ಸಾವಿರ ರೂ.ಮೌಲ್ಯದ ೩ ಕೆ.ಜಿ ೫೨೦ ಗ್ರಾಂ ತೂಕದ ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

ಸಾದಿಕ್ ಬೇಗ್ (೪೬) ಮತ್ತು ನಿಜಾಮುದ್ದಿನ್ (೫೨) ಬಂಧಿತರು.

ಅಶೋಕ ನಗರ ಚಾನಲ್ ಬಳಿ ಆರೋಪಿಗಳು ಮರದ ತುಂಡುಗಳನ್ನು ಚೀಲದಲ್ಲಿ ಇಟ್ಟುಕೊಂಡಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.

ದಾಳಿ ನಡೆಸಿದ ಪೊಲೀಸರು ಚೀಲವನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅದರಲ್ಲಿ ಶ್ರೀಗಂಧದ ತುಂಡುಗಳಿದ್ದವು. ವಿಚಾರಣೆ ಮಾಡಿದಾಗ ಶರಾವತಿ ನಗರದ ಖಾಲಿ ನಿವೇಶನದಲ್ಲಿದ್ದ ಶ್ರೀಗಂಧದ ಮರವನ್ನು ಕಡಿದು, ಸಣ್ಣ ತುಂಡುಗಳಾಗಿ ಕತ್ತರಿಸಿ ಮಾರಾಟ ಮಾಡುತ್ತಿದ್ದುದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Two arrested for selling sandalwood

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.