w
Headlines
Home » RIPPONPETE | ಸಿಕ್ಕ ಚಿನ್ನದ ಸರವನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಶಿಕ್ಷಕಿ

RIPPONPETE | ಸಿಕ್ಕ ಚಿನ್ನದ ಸರವನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಶಿಕ್ಷಕಿ

GridArt 20250811 204818430 wm

RIPPONPETE | ಸಿಕ್ಕ ಚಿನ್ನದ ಸರವನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಶಿಕ್ಷಕಿ

ರಿಪ್ಪನ್ ಪೇಟೆ: ಕೋಡೂರು ಬಳಿಯ ಅಮ್ಮನಘಟ್ಟ ಬಸ್ ನಿಲ್ದಾಣದಲ್ಲಿ ಚಿನ್ನದ ಚೈನ್‌ ಸರವೊಂದು ಶಿಕ್ಷಕಿ ಪಾರ್ವತಿಬಾಯಿ ಅವರಿಗೆ ಸಿಕ್ಕಿದ್ದು, ಅವರು ಅದನ್ನು ತಕ್ಷಣವೇ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಪಿಎಸ್‌ಐ ರಾಜುರೆಡ್ಡಿ ಅವರ ಮೂಲಕ ಹಸ್ತಾಂತರಿಸುವ ಮೂಲಕ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ಈ ಚಿನ್ನದ ಸರ ಮಲ್ಲಾಪುರದ ಶಿವಕುಮಾರ್ ಅವರಿಗೆ ಸೇರಿದೆ ಎಂದು ತಿಳಿದುಬಂದಿದ್ದು, ಇಂದು ಠಾಣೆಯಲ್ಲಿ ಸಂಬಂಧಿತ ವಾರಸುದಾರರಿಗೆ ಸರವನ್ನು ಹಿಂತಿರುಗಿಸಲಾಯಿತು.

ಈ ಸಂದರ್ಭದಲ್ಲಿ ಕೋಡೂರು ಗ್ರಾಮ ಪಂಚಾಯಿತ್ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ ಹಾಗೂ ಠಾಣೆಯ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.