Headlines

ಶ್ರೀಗಂಧ ಕಳ್ಳರ ಬಂಧನ – ಪೊಲೀಸ್ ನಾಯಿಯ ಸಹಾಯದಿಂದ ಕಳ್ಳನ ಬಂಧನ

ಶ್ರೀಗಂಧ ಕಳ್ಳರ ಬಂಧನ – ಪೊಲೀಸ್ ನಾಯಿಯ ಸಹಾಯದಿಂದ ಕಳ್ಳನ ಬಂಧನ

ಶಿಕಾರಿಪುರ, ಆ. 12 – ತಾಲ್ಲೂಕಿನ ಕೆಂಗಟ್ಟೆ ಶ್ರೀಗಂಧ ಮೀಸಲಿನಲ್ಲಿ ಶ್ರೀಗಂಧ ಮರ ಕಳ್ಳತನಕ್ಕೆ ಯತ್ನಿಸಿದವರ ವಿರುದ್ಧ ವಲಯ ಅರಣ್ಯಾಧಿಕಾರಿ ರೇವಣಸಿದ್ಧಯ್ಯ ಬಿ. ಹಿರೇಮಠ್ ಹಾಗೂ ತಂಡ ಶೀಘ್ರ ಕಾರ್ಯಾಚರಣೆ ನಡೆಸಿ ಒಬ್ಬ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಶಿವಮೊಗ್ಗದ ಇಂದಿರಾನಗರ ಮೂಲದ ಆರು ಮಂದಿ ಆರೋಪಿಗಳು ರಾತ್ರಿ ವೇಳೆ, ವಿಶೇಷವಾಗಿ ಮಳೆಯ ಸಮಯವನ್ನು ಸದುಪಯೋಗಪಡಿಸಿಕೊಂಡು, ಬೇಲಿ ಕತ್ತರಿಸಿ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿದ್ದರು. ಅವರು ಶ್ರೀಗಂಧ ಮರವನ್ನು ಕಡಿಯಲು ಸಜ್ಜಾಗುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿ ಓರ್ವನನ್ನು ಬಂಧಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಮುಧೋಳ್ ಜಾತಿಯ ವಿಶೇಷ ತರಬೇತಿ ಪಡೆದ ಪೊಲೀಸ್ ನಾಯಿಯನ್ನು ಬಳಸಿ, ಕಳ್ಳರ ಹಾದಿಯನ್ನು ಪತ್ತೆಹಚ್ಚಿ ಒಬ್ಬನನ್ನು ಬಂಧಿಸಲಾಯಿತು. ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ಶೋಧ ಮುಂದುವರೆಸಿದೆ.