Headlines
IMG 20250611 WA0024

ಹೆದ್ದಾರಿಗೆ ಉರುಳಿ ಬಿದ್ದ ಬೃಹತ್ ಆಲದ ಮರ – ವಾಹನ ಸಂಚಾರ ವ್ಯತ್ಯಯ

ಹೆದ್ದಾರಿಗೆ ಉರುಳಿ ಬಿದ್ದ ಬೃಹತ್ ಆಲದ ಮರ – ವಾಹನ ಸಂಚಾರ ವ್ಯತ್ಯಯ ಮರ ಉರುಳುವಾಗ ಅದೃಷ್ಟವಶಾತ್‌ ಆ ಭಾಗದಲ್ಲಿ ಯಾವುದೇ ವಾಹನ ಸಂಚರಿಸುತ್ತಿರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಶಿವಮೊಗ್ಗ : ಜೋರು ಗಾಳಿಗೆ ಸಹಿತ ಮಳೆಯಿಂದಾಗಿ ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಬೃಹತ್‌ ಮರ ಧರೆಗುರುಳಿದೆ. ಶಿವಮೊಗ್ಗ ತಾಲೂಕು ಗಾಜನೂರು ಚೆಕ್‌ ಪೋಸ್ಟ್‌ ಸಮೀಪ ಮರ ಬುಡಮೇಲಾಗಿದೆ. ಚೆಕ್‌ ಪೋಸ್ಟ್‌ನ ಬಳಿಯಿದ್ದ ಬೃಹತ್‌ ಆಲದ ಮರ ಮಧ್ಯಾಹ್ನ ಬೀಸಿದ ಜೋರಿ ಗಾಳಿಗೆ ಧರೆಗುರುಳಿಸಿದೆ. ಇದರಿಂದ…

Read Full News
GridArt 20250611

ಯುವತಿಯ ಮೊಬೈಲ್ ಕಿತ್ತುಕೊಂಡು ಮರವೇರಿದ ಮಂಗ – ನಂತರ ನಡೆದಿದ್ದೇನು..!!?

ಯುವತಿಯ ಮೊಬೈಲ್ ಕಿತ್ತುಕೊಂಡು ಮರವೇರಿದ ಮಂಗ – ನಂತರ ನಡೆದಿದ್ದೇನು..!!? ಹೀಗೆ ಸುಮಾರು 1 ಗಂಟೆಗಳ ಕಾಲ ಮರದ ಕೆಳಗೆ ಮೊಬೈಲ್ಗೆ ಕರೆ ಮಾಡಿ, ಗಲಾಟೆ ಮಾಡಿ, ಬಾಳೆಹಣ್ಣು ನೀಡಿ ಮೊಬೈಲ್ನ್ನು ಹಿಂಪಡೆಯುವ  ಸಾಕಷ್ಟು  ಪ್ರಯತ್ನಗಳು ನಡೆಯಿತು.  ಆದರೆ ಮಂಗ ತನ್ನಷ್ಟಕ್ಕೆ ತಾನು ಮೊಬೈಲ್ ನೋಡುತ್ತಾ ಅದನ್ನು ಕಿವಿಗೆ ಇಟ್ಟುಕೊಂಡು ಸಾಕಷ್ಟು ಚೇಷ್ಟೆ ಮಾಡುತ್ತಿತ್ತು. ಯುವತಿಯೊಬ್ಬರ ಮೊಬೈಲ್​ನ್ನು  ಕಿತ್ತುಕೊಂಡು ಹೋಗಿ ಮರವೇರಿ ಕುಳಿತು ಆಟವಾಡಿಸಿದ ಘಟನೆ ಶಿವಮೊಗ್ಗ ನಗರದ ನಂಜಪ್ಪ ಆಸ್ಪತ್ರೆಯ ಬಳಿಯಲ್ಲಿ ನಡೆದಿದೆ. ನಂಜಪ್ಪ ಆಸ್ಪತ್ರೆಯಲ್ಲಿ ಲ್ಯಾಬ್​ ಟೆಕ್ನಿಷಿಯನ್​ ಕೆಲಸ…

Read Full News
Images (38)

ಶಿವಮೊಗ್ಗ ಜಿಲ್ಲಾದ್ಯಂತ ಮೀನುಗಾರಿಕೆ ನಿಷೇಧ

ಶಿವಮೊಗ್ಗ ಜಿಲ್ಲಾದ್ಯಂತ ಮೀನುಗಾರಿಕೆ ನಿಷೇಧ ಶಿವಮೊಗ್ಗ – ಮುಂಗಾರು ಮಳೆಗಾಲದಲ್ಲಿ ವಂಶಾಭಿವೃದ್ಧಿ ಚಟುವಟಿಕೆ ನಡೆಯುವ ಹಿನ್ನಲೆಯಲ್ಲಿ ಜಿಲ್ಲಾದ್ಯಂತ ಮೀನುಗಾರಿಕೆಯನ್ನು ನಿಷೇದ ಮಾಡಲಾಗಿದೆ ಎಂದು ಮೀನುಗಾರಿಕ ಉಪನಿರ್ದೇಶಕರು ತಿಳಿಸಿದ್ದಾರೆ. ಮುಂಗಾರು ಮಳೆಗಾಲದ ಅವಧಿಯಲ್ಲಿ ಮೀನುಗಾರಿಕೆ (ಮೀನುಗಾರಿಕೆ) ವಂಶಾಭಿವೃದ್ದಿ ಚಟುವಟಿಕೆಗಳು ನಡೆಯವ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ. ಪ್ರತಿ ವರ್ಷದ ಜೂನ್ 1 ರಿಂದ ಜುಲೈ 30 ರವರೆಗೆ ರಾಜ್ಯದ ಎಲ್ಲಾ ಸರ್ವಋತು ಕೆರೆಗಳು, ಜಲಾಶಯಗಳು, ತೊರೆಗಳು, ನದಿಗಳು ಮತ್ತು ನದಿಗಳು ಮೀನು ಹಿಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮೀನುಗಾರಿಕೆ ಉಪ…

Read Full News
GridArt 20250610

ವರ್ಗಾವಣೆಯಾದ ಅಧಿಕಾರಿಗಳಿಗೆ ಅಮೃತ ಗ್ರಾಪಂ ವತಿಯಿಂದ ಬೀಳ್ಕೊಡುಗೆ

ವರ್ಗಾವಣೆಯಾದ ಅಧಿಕಾರಿಗಳಿಗೆ ಅಮೃತ ಗ್ರಾಪಂ ವತಿಯಿಂದ ಬೀಳ್ಕೊಡುಗೆ ರಿಪ್ಪನ್ ಪೇಟೆ : ಸಮೀಪದ ಅಮೃತ ಗ್ರಾಪಂ ವತಿಯಿಂದ ಆಯೋಜಿಸಿದ್ದ ವರ್ಗಾವಣೆ ಹೊಂದಿದ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪಿ ಎಸ್ ಐ ಪ್ರವೀಣ್ ಎಸ್ ಪಿ ಹಾಗೂ ಉಪ ವಲಯ ಅರಣ್ಯಧಿಕಾರಿ ಅಕ್ಷಯ್ ಕುಮಾರ್ ರವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿ ಗೌರವಿಸಿದರು. ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಲ್ಲಾ ಜನರ ಜನ ಮಾನಸದಲ್ಲಿ ಉಳಿದ ದಕ್ಷ ಅಧಿಕಾರಿ ಪ್ರವೀಣ್ ಎಸ್ ಪಿ ಯವರು ಇಂದು ಅವರ…

Read Full News
GridArt 20250610

ಜನಸ್ನೇಹಿ ದಕ್ಷ ಪೋಲಿಸ್‌ ಅಧಿಕಾರಿ ಪಿಎಸ್ ಐ ಪ್ರವೀಣ್ ಎಸ್ ಪಿ

ಜನಸ್ನೇಹಿ ದಕ್ಷ ಪೋಲಿಸ್‌ ಅಧಿಕಾರಿ ಪಿಎಸ್ ಐ ಪ್ರವೀಣ್ ಎಸ್ ಪಿ ರಿಪ್ಪನ್ ಪೇಟೆ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜನಸ್ನೇಹಿ ಪೋಲಿಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ ಶಹಬ್ಬಾಸಗಿರಿ ಪಡೆದು ಆನಂದಪುರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿರುವ ಸನ್ನಡತೆಯ ದಕ್ಷ ಅಧಿಕಾರಿ ಪಿಎಸ್‍ಐ ಪ್ರವೀಣ್ ಮಾದರಿ ಅಧಿಕಾರಿಯಾಗಿದ್ದಾರೆ. ಹೌದು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣದ ಮಾರಿಗುಡ್ಡ ನಿವಾಸಿಯಾಗಿರುವ ಪ್ರವೀಣ್ ಎಸ್ ಪಿ ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸುಧೀರ್ಘವಾಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿಗೊಂಡ ಇವರು ಕರ್ನಾಟಕ…

Read Full News
GridArt 20250609 200055702 wm

RIPPONPETE | ಎಸ್ ಪಿ ಮಿಥುನ್ ಕುಮಾರ್ ನೇತ್ರತ್ವದಲ್ಲಿ ಪೊಲೀಸರಿಂದ ಅಮ್ಮನಘಟ್ಟ ಗುಡ್ಡಕ್ಕೆ ಚಾರಣ (ಟ್ರೆಕ್ಕಿಂಗ್)

ಎಸ್ ಪಿ ಮಿಥುನ್ ಕುಮಾರ್ ನೇತ್ರತ್ವದಲ್ಲಿ ಪೊಲೀಸರಿಂದ ಅಮ್ಮನಘಟ್ಟ ಗುಡ್ಡಕ್ಕೆ ಚಾರಣ (ಟ್ರೆಕ್ಕಿಂಗ್) ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಅಮ್ಮನಘಟ್ಟ ಗುಡ್ಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ನೇತ್ರತ್ವದಲ್ಲಿ ಪೊಲೀಸರು ಚಾರಣ(ಟ್ರೆಕ್ಕಿಂಗ್) ಮಾಡುವ ಮೂಲಕ ಜೇನುಕಲ್ಲಮ್ಮ ದೇವಿ ಆಶೀರ್ವಾದ ಪಡೆದರು. ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ ಪಕ್ಕದಲ್ಲಿರುವ ದೇವಿಯ ಮೂಲ ಸ್ಥಾನವಿರುವ ಗುಡ್ಡಕ್ಕೆ ಪೊಲೀಸ್ ಸಿಬ್ಬಂದಿಗಳು ಚಾರಣ ( ಟ್ರೆಕ್ಕಿಂಗ್) ಮೂಲಕ ಸಾಗಿ ಮೂಲ ದೇವಸ್ಥಾನದ ದರ್ಶನ ಪಡೆದು ಆ ನಂತರ ಶ್ರೀ…

Read Full News
GridArt 20250607

ಹೊಸನಗರದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಬಕ್ರೀದ್ ಆಚರಣೆ

ಹೊಸನಗರದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಬಕ್ರೀದ್ ಆಚರಣೆ HOSANAGARA |  ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್‌ ಹಬ್ಬ ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ರಂಜಾನ್ ನಂತರ ಬರುವ ದೊಡ್ಡ ಹಬ್ಬ ಇದಾಗಿದ್ದು, ತ್ಯಾಗದ ಸಂಕೇತವಾಗಿರುವ ಈ ಹಬ್ಬವನ್ನು ಪ್ರಪಂಚದಾದ್ಯಂತ ಮುಸ್ಲಿಮರು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ. ಪ್ರತಿವರ್ಷ ದುಲ್-ಅಜ್‌-ಹಜ್ಜ್ ತಿಂಗಳಿನ ಹತ್ತನೇ ದಿನದಂದು, ಪ್ರಪಂಚದಾದ್ಯಂತ ಮುಸ್ಲಿಮರು ಈದ್‌-ಉಲ್‌-ಅಧಾ ಅಂದರೆ ಬಕ್ರೀದ್‌ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ದಿನ ಸಾಮಾನ್ಯವಾಗಿ ಕುರಿ, ಮೇಕೆಯನ್ನು ದೇವರಿಗಾಗಿ ಬಲಿ ಕೊಡಲಾಗುತ್ತದೆ ಎಂದು…

Read Full News
GridArt 20250607

ರಿಪ್ಪನ್ ಪೇಟೆಯ ಹರ್ಷಿತರವರಿಗೆ ಗಣಿತಶಾಸ್ತ್ರದಲ್ಲಿ ಪಿಹೆಚ್ ಡಿ  ಪದವಿ

ರಿಪ್ಪನ್ ಪೇಟೆಯ ಹರ್ಷಿತರವರಿಗೆ ಗಣಿತಶಾಸ್ತ್ರದಲ್ಲಿ ಪಿಹೆಚ್ ಡಿ  ಪದವಿ ರಿಪ್ಪನ್‌ಪೇಟೆ : ಪಟ್ಟಣದ ವಿದ್ಯಾರ್ಥಿನಿ ಹರ್ಷಿತ.ಎ. ಗಣಿತ ಶಾಸ್ತ್ರದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. ಹರ್ಷೀತ.ಎ.ಸಲ್ಲಿಸಿದ  ಗಣಿತ ಶಾಸ್ತ್ರದಲ್ಲಿನ `ಎ ಸ್ಟಡಿ ಆನ್  ಡಾಮಿನೇಷನ್. ಸ್ಟ್ರೈಕಾಮ್ ಹ್ಯಾಮಿಂಗ್  ಅಂಡ್ ಟೋಪಾಲಾಜಿಕಲ್  ಇಂಡಿಸಸ್’ ಎಂಬ ಸಂಶೋಧನ ಮಹಾ ಪ್ರಬಂಧಕ್ಕೆ ಮಣಿಪಾಲ್ ಆಕಾಡೆಮಿ ಆಫ್ ಹೈಯರ್ಎಜುಕೇಷನ್ ಪಿಹೆಚ್‌ಡಿ ಪದವಿ ನೀಡಿದೆ. ಮಣಿಪಾಲ್ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಗಣಿತ ಪ್ರಾಧ್ಯಾಪಕಿ ಡಾ.ಸಬಿತಾರವರ ಮಾರ್ಗದರ್ಶನದಲ್ಲಿ ಸಂಶೋಧನೆಕೈಗೊಂಡಿದ್ದರು. ಪಟ್ಟಣದ ಸಾಗರ ರಸ್ತೆಯ ನಿವಾಸಿ  ಮತ್ತು ಸಾಗರದ ಸರ್ಕಾರಿ…

Read Full News
Images (37)

ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಪಿಎಸ್‌ಐ ಗಳ ವರ್ಗಾವಣೆ

ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಪಿಎಸ್‌ಐ ಗಳ ವರ್ಗಾವಣೆ ರಿಪ್ಪನ್ ಪೇಟೆಯ ಜನಸ್ನೇಹಿ ಪಿಎಸ್‌ಐ ಪ್ರವೀಣ್ ಎಸ್ ಪಿ ಆನಂದಪುರ ಠಾಣೆಗೆ ವರ್ಗಾವಣೆ – ನೂತನ ಪಿಎಸ್‌ಐ ಯಾರು ಗೊತ್ತಾ.!? ಈ ಸುದ್ದಿ ನೋಡಿ ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಾದ ಬಿ ಆರ್ ರವಿಕಾಂತೇ ಗೌಡ ಆದೇಶ ಹೊರಡಿಸಿದ್ದಾರೆ. ರಿಪ್ಪನ್ ಪೇಟೆಯ ಜನಸ್ನೇಹಿ ಪಿಎಸ್‌ಐ ಪ್ರವೀಣ್ ಎಸ್ ಪಿ ಯವರನ್ನು ಅನಂದಪುರ ಪೊಲೀಸ್…

Read Full News
GridArt 20250607

RIPPONPETE | ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಬಕ್ರಿದ್ ಆಚರಣೆ

RIPPONPETE | ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಬಕ್ರಿದ್ ಆಚರಣೆ ರಿಪ್ಪನ್ ಪೇಟೆ : ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಅತ್ಯಂತ  ಸಂಭ್ರಮದಿಂದ ಬಕ್ರಿದ್ ಹಬ್ಬವನ್ನು ಆಚರಿಸಿದರು. ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮೆಕ್ಕಾ ಮಸೀದಿ, ಮದೀನಾ ಮಸೀದಿ ಗಳಲ್ಲಿ ಮುಸಲ್ಮಾನ ಭಾಂಧವರು ಬಕ್ರೀದ್ ಪ್ರಾರ್ಥನೆ ಸಲ್ಲಿಸಿದರು. ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್  ಸಖಾಫೀ ಮಾತನಾಡಿ,  ಪ್ರತಿಯೊಂದು ಧರ್ಮವನ್ನು ಗೌರವಿಸುವ ಮೂಲಕ  ಸಹೋದರತ್ವದಿಂದ ಬಾಳ್ವೆ ನಡೆಸಬೇಕು .ಯಾವುದೇ ಧರ್ಮವನ್ನು ಅವಹೇಳನ ಮಾಡುವುದನ್ನು ಇಸ್ಲಾಂ ಖಂಡಿಸುತ್ತದೆ ಎಂದರು. ರಿಪ್ಪನ್ ಪೇಟೆಯಲ್ಲಿ…

Read Full News
IMG 20250605

ಶಾಂತಿ ಕದಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ – ಪಿಎಸ್‌ಐ ಪ್ರವೀಣ್ ಎಸ್ ಪಿ ಖಡಕ್ ವಾರ್ನಿಂಗ್

ಶಾಂತಿ ಕದಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ – ಪಿಎಸ್‌ಐ ಪ್ರವೀಣ್ ಎಸ್ ಪಿ ಖಡಕ್ ವಾರ್ನಿಂಗ್ ರಿಪ್ಪನ್‌ಪೇಟೆ : ಕಾನೂನು ಎಲ್ಲರಿಗೂ ಒಂದೇ ಅದನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕಾಗುವುದೆಂದು ಪಿಎಸ್‌ಐ ಎಸ್.ಪಿ.ಪ್ರವೀಣ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದರು. ಪಟ್ಟಣದ ಠಾಣೆಯಲ್ಲಿ ಇಂದು ಬಕ್ರೀದ್ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪದೇಪದೆ ಅಪರಾಧ ಎಸಗುವವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆಗೆ…

Read Full News
GridArt 20250605

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ 15 ಅಂಶ ಅನುಷ್ಠಾನ ಸಮಿತಿಗೆ ಅಮೀರ್ ಹಂಜಾ ನೇಮಕ

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ 15 ಅಂಶ ಅನುಷ್ಠಾನ ಸಮಿತಿಗೆ ಅಮೀರ್ ಹಂಜಾ ನೇಮಕ ರಿಪ್ಪನ್ ಪೇಟೆ : ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಮೀರ್ ಹಂಜಾ ರವರನ್ನು ನಾಮನಿರ್ದೇಶನಗೊಳಿಸಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ಆದೇಶಿಸಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಅಮೀರ್ ಹಂಜಾರವರನ್ನು ಈ ಕೂಡಲೇ  ಜಾರಿಗೆ ಬರುವಂತೆ ಪ್ರಧಾನಮಂತ್ರಿಗಳ 15 ಅಂಶ ಅನುಷ್ಠಾನ ಸಮಿತಿಗೆ ಜಿಲ್ಲಾ…

Read Full News
Screenshot 2025 06 05 21 48 40 149 com.whatsapp edit

ಹೊಸನಗರದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ | ವಿದ್ಯುತ್ ಸಮಸ್ಯೆ ಬಗೆಹರಿಸಲು ತುರ್ತು ಕ್ರಮ ಕೈಗೊಳ್ಳಿ ; ಶಾಸಕ ಬೇಳೂರು ಗೋಪಾಲಕೃಷ್ಣ

ಹೊಸನಗರದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ | ವಿದ್ಯುತ್ ಸಮಸ್ಯೆ ಬಗೆಹರಿಸಲು ತುರ್ತು ಕ್ರಮ ಕೈಗೊಳ್ಳಿ ; ಶಾಸಕ ಬೇಳೂರು ಗೋಪಾಲಕೃಷ್ಣ ಹೊಸನಗರ ; ತಾಲೂಕಿನಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯ ಆಗುತ್ತಿದೆ. ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಇಂತಹ ತಂತ್ರಜ್ಞಾನದ ಬೆಳವಣಿಗೆಯ ಕಾಲದಲ್ಲಿಯೂ ವಿದ್ಯುತ್ ಇಲ್ಲದೇ ಜನರು ಪರದಾಡುವಂತಾಗಿರುವುದು ವಿಪರ‍್ಯಾಸ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಮೆಸ್ಕಾಂ ಕಾರ‍್ಯವೈಖರಿ ಕುರಿತು ಅಸಮಧಾನ ವ್ಯಕ್ತಪಡಿಸಿದರು. ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ,ಹೊಸನಗರಕ್ಕೆ…

Read Full News
GridArt 20250605

ಪ್ರಕೃತಿಯ ಕೊಡುಗೆಗಳನ್ನು ಎಣಿಸಲು ಸಾಧ್ಯವಿಲ್ಲ – ಕೆ ಟಿ ಈಶ್ವರ್

ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ “ಪ್ರಕೃತಿಯ ಕೊಡುಗೆಗಳನ್ನು ಎಣಿಸಲು ಸಾಧ್ಯವಿಲ್ಲ” – ಕೆ ಟಿ ಈಶ್ವರ್ ರಿಪ್ಪನ್ ಪೇಟೆ :ಪ್ರಕೃತಿಯ ಕೊಡುಗೆಗಳನ್ನು ಎಣಿಸಲು ಸಾಧ್ಯವಿಲ್ಲ. ಮರಗಳು ಉಸಿರಾಟಕ್ಕೆ ಆಮ್ಲಜನಕ ನೀಡುತ್ತವೆ, ನದಿಗಳು ನಮಗೆ ನೀರು ನೀಡುತ್ತವೆ, ಮಣ್ಣು ಆಹಾರ ಬೆಳೆಸುತ್ತದೆ. ಆದರೆ ಇಂದಿನ ಜಗತ್ತಿನಲ್ಲಿ ನಾವು ಈ ಸಂಪತ್ತುಗಳನ್ನು ದುರ್ಬಳಕೆ ಮಾಡುತ್ತಿದ್ದೇವೆ. ಎಂದು ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರದ ಉಪನ್ಯಾಸಕ  ಕೆ. ಟಿ.ಈಶ್ವರ್ ಹೇಳಿದರು. ಪಟ್ಟಣದ…

Read Full News
GridArt 20250603

ಅಮ್ಮನಘಟ್ಟ ಶ್ರೀಜೇನುಕಲ್ಲಮ್ಮ ದೇವಸ್ಥಾನ – 108 ಮೆಟ್ಟಿಲುಗಳ ನಿರ್ಮಾಣಕ್ಕೆ ಸಂಸದರಿಂದ ಶಿಲನ್ಯಾಸ

ಅಮ್ಮನಘಟ್ಟ ಶ್ರೀಜೇನುಕಲ್ಲಮ್ಮ ದೇವಸ್ಥಾನ – 108 ಮೆಟ್ಟಿಲುಗಳ ನಿರ್ಮಾಣಕ್ಕೆ ಸಂಸದರಿಂದ ಶಿಲನ್ಯಾಸ ದೇವಸ್ಥಾನದ ಅಭಿವೃದ್ದಿಗೆ ಮಾತೃಶ್ರೀ ಹೆಸರಿನಲ್ಲಿ ವೈಯಕ್ತಿಕ 10 ಲಕ್ಷ ದೇಣಿಗೆ ನೀಡಿದ ಬಿವೈಆರ್ ರಿಪ್ಪನ್ ಪೇಟೆ : ಇತಿಹಾಸ ಪ್ರಸಿದ್ದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ 108 ಮೆಟ್ಟಿಲು ನಿರ್ಮಾಣಕ್ಕೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ದೇಣಿಗೆ ನೀಡುವ ಮೂಲಕ ಶಿಲನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವಿಯ ದರ್ಶನಕ್ಕೆ ಭಕ್ತರು ಮೆಟ್ಟಿಲ ಮೇಲೆ ನಡೆದು ಬರುವಾಗ ಸಂಸದರ ಹೆಸರು ನೆನಪು ಮಾಡಿಕೊಳ್ಳುತ್ತಾ ನಮಗೆ…

Read Full News
GridArt 20250601

ತಳಲೆ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೆ ವಿ ಗಣಪತಿ ರವರಿಗೆ ಆತ್ಮೀಯ ಬೀಳ್ಕೊಡುಗೆ

ತಳಲೆ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೆ ವಿ ಗಣಪತಿ ರವರಿಗೆ ಆತ್ಮೀಯ ಬೀಳ್ಕೊಡುಗೆ ರಿಪ್ಪನ್ ಪೇಟೆ : : ಗುರುಗಳು ವಿದ್ಯಾರ್ಥಿಗಳಿಗೆ ಅಕ್ಕರೆ ತೋರಿದರೆ ಸಕ್ಕರೆಯ ಜೀವನ ಅವರದಾಗುತ್ತದೆ. ಇದರಿಂದ ಗುರು, ಶಿಷ್ಯರ ಸಂಬಂಧ ಪರಿ ಶುದ್ಧವಾಗಿ, ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಭವಿಷ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಹೇಳಿದರು. ತಳಲೆ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ 33 ವರ್ಷ ಸುದೀರ್ಘ ಸೇವೆ ಸಲ್ಲಿಸಿ…

Read Full News
GridArt 20250601

ಅಪರಿಚಿತ ವಾಹನ ಡಿಕ್ಕಿಯಾಗಿ ಕಾಡುಕೋಣ ಸಾವು

ಅಪರಿಚಿತ ವಾಹನ ಡಿಕ್ಕಿಯಾಗಿ ಕಾಡುಕೋಣ ಸಾವು ತೀರ್ಥಹಳ್ಳಿ: ರಾಮಕೃಷ್ಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಪಾಲ್ ಮಜರೆ ಗ್ರಾಮದಲ್ಲಿ ಶುಕ್ರವಾರ ನಡೆದ ಅಪಘಾತದಲ್ಲಿ 15 ವರ್ಷದ ಗಂಡು ಕಾಡುಕೋಣ ಮೃತಪಟ್ಟಿದೆ. ತೀರ್ಥಹಳ್ಳಿ- ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನವೊಂದು ರಸ್ತೆ ದಾಟುತ್ತಿದ್ದ ಕಾಡುಕೋಣಕ್ಕೆ ಡಿಕ್ಕಿ ಹೊಡೆದಿತ್ತು. ತಲೆ, ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ಪ್ರತ್ಯಕ್ಷದರ್ಶಿ ಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕಾಡುಕೋಣಕ್ಕೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಮೇಗರವಳ್ಳಿ ವಲಯಾರಣ್ಯಾಧಿಕಾರಿ ಕಚೇರಿಗೆ ಸ್ಥಳಾಂತರಿಸಿದ್ದರು….

Read Full News
GridArt 20250601 180243145 wm

ಜೂನ್4 ರಂದು ಇತಿಹಾಸ ಪ್ರಸಿದ್ದ ಅಮ್ಮನಘಟ್ಟಶ್ರೀ ಜೇನುಕಲ್ಲಮ್ಮದೇವಸ್ಥಾನದ ನೂತನ ಶಿಲಾಮಯ ದೇವಸ್ಥಾನ ಲೋಕಾರ್ಪಣೆ

ಜೂನ್4 ರಂದು ಇತಿಹಾಸ ಪ್ರಸಿದ್ದ ಅಮ್ಮನಘಟ್ಟಶ್ರೀ ಜೇನುಕಲ್ಲಮ್ಮದೇವಸ್ಥಾನದ ನೂತನ ಶಿಲಾಮಯ ದೇವಸ್ಥಾನ ಲೋಕಾರ್ಪಣೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಅಮ್ಮನಘಟ್ಟಜೇನುಕಲ್ಲಮ್ಮದೇವಸ್ಥಾನ ಸುಮಾರು 5 ಕೋಟಿ ರೂ ವೆಚ್ಚದ  ನೂತನ ಶಿಲಾಮಯ ದೇವಸ್ಥಾನ ಕಟ್ಟಡ ಜೂನ್೪ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಆಧ್ಯಕ್ಷ ಬಿ.ಸ್ವಾಮಿರಾವ್ ಹೇಳಿದರು. ಅಮ್ಮನಘಟ್ಟದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಲೆನಾಡಿನ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜನಕಲಮ್ಮ ಶಿಲಾಮಯ ದೇವಸ್ಥಾನ  ಜೂನ್ 4ರಂದು ಲೋಕಾರ್ಪಣೆಗೊಳ್ಳಲಿದೆ. ಲೋಕಾರ್ಪಣೆ ಮತ್ತು ಧರ್ಮಸಭೆಯ ದಿವ್ಯ ಸಾನಿಧ್ಯವನ್ನು…

Read Full News
Images (31)

ಶಿವಮೊಗ್ಗದಲ್ಲಿ ಆರಂಭವಾಗಲಿದೆ  ಪೈಲಟ್ ತರಬೇತಿ ಕೋರ್ಸ್

ಶಿವಮೊಗ್ಗದಲ್ಲಿ ಆರಂಭವಾಗಲಿದೆ  ಪೈಲಟ್ ತರಬೇತಿ ಕೋರ್ಸ್ ಶಿವಮೊಗ್ಗ/ಬೆಂಗಳೂರು : ಕರ್ನಾಟಕ ಸರ್ಕಾರವು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಟ್ರೈನಿಂಗ್ ಆರ್ಗನೈಸೇಶನ್ (FTO) ಸ್ಥಾಪಿಸಲು ನಿರ್ಧರಿಸಿದೆ. ಇದು ರಾಜ್ಯದ ಮೊದಲ ಸರ್ಕಾರಿ ಫ್ಲೈಟ್ ತರಬೇತಿ ಸಂಸ್ಥೆಯಾಗಿದ್ದು, ವಿಮಾನ ಚಾಲಕರ ತರಬೇತಿಗೆ ಅವಕಾಶ ಮಾಡಿಕೊಡಲಿದೆ.  ಈ ಯೋಜನೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (KSIIDC) ಕಾರ್ಯಗತಗೊಳಿಸಲಿದೆ. ಈ ಮೂಲಕ ಪ್ರದೇಶವು ವಿಮಾನಯಾನ ಶಿಕ್ಷಣದ ಕೇಂದ್ರವಾಗಲಿದೆ. ಈ ತರಬೇತಿ ಸಂಸ್ಥೆಯು ವಾಣಿಜ್ಯ ವಿಮಾನ ಚಾಲಕರ ತರಬೇತಿ…

Read Full News
GridArt 20250529

ಕೊಟ್ಟಿಗೆಯಲ್ಲಿ ಅವಿತು ಕುಳಿತಿದ್ದ  12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ಕೊಟ್ಟಿಗೆಯಲ್ಲಿ ಅವಿತು ಕುಳಿತಿದ್ದ  12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ ಹೊಸನಗರ : ರಾಮಚಂದ್ರಾಪುರ ಮತ್ತು ವಾರಂಬಳ್ಳಿ ಗ್ರಾಮದ ನಗರ ಅರಣ್ಯ ವ್ಯಾಪ್ತಿಯಲ್ಲಿ ಕೊಟ್ಟಿಗೆಯಲ್ಲಿ ಅಡಗಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯವರು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಎರಡು ದಿನಗಳಿಂದ ವಾರಂಬಳ್ಳಿ ಗ್ರಾಮದ  ಈಶ್ವರಪ್ಪ ಎಂಬುವವರ ಮನೆಯಲ್ಲಿ ಕಾಳಿಂಗ ಸರ್ಪ ಇತ್ತು.  ಈ ಹಿನ್ನೆಲೆ ಈಶ್ವರಪ್ಪ ಕಾಳಿಂಗ ಸರ್ಪವನ್ನು ಹಿಡಿಯಲು ಉರಗ ತಜ್ಞ ಅಜಯ್​ಗಿರಿಯವರಿಗೆ ಕರೆ ಮಾಡಿದ್ದಾರೆ. ನಂತರ  ಅವರ ನೇತೃತ್ವದಲ್ಲಿ…

Read Full News
JPEG 20250529 212801 1361191309244223608 wm (1)

RIPPONPETE | ಪೊಲೀಸ್ ಠಾಣೆಯಲ್ಲಿ ರೌಡಿ ಪರೇಡ್ – ಪರಿವರ್ತನೆಯಾಗುವಂತೆ ಖಡಕ್ ವಾರ್ನಿಂಗ್ ನೀಡಿದ ಪಿಎಸ್‌ಐ

RIPPONPETE | ಪೊಲೀಸ್ ಠಾಣೆಯಲ್ಲಿ ರೌಡಿ ಪರೇಡ್ – ಪರಿವರ್ತನೆಯಾಗುವಂತೆ ಖಡಕ್ ವಾರ್ನಿಂಗ್ ನೀಡಿದ ಪಿಎಸ್‌ಐ RIPPONPETE | ಪೊಲೀಸ್ ಠಾಣೆಯಲ್ಲಿ ರೌಡಿ ಪರೇಡ್ – ಪರಿವರ್ತನೆಯಾಗುವಂತೆ ಖಡಕ್ ವಾರ್ನಿಂಗ್ ನೀಡಿದ ಪಿಎಸ್‌ಐ RIPPONPETE | ಪೊಲೀಸ್ ಠಾಣೆಯಲ್ಲಿ ರೌಡಿ ಪರೇಡ್ – ಪರಿವರ್ತನೆಯಾಗುವಂತೆ ಖಡಕ್ ವಾರ್ನಿಂಗ್ ನೀಡಿದ ಪಿಎಸ್‌ಐ ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸ್ ಠಾಣಾ ಆವರಣದಲ್ಲಿ ಪ್ರವೀಣ್ ಎಸ್ ಪಿ ನೇತೃತ್ವದಲ್ಲಿಂದು ರೌಡಿ ಪರೇಡ್…

Read Full News
GridArt 20250529

ಕೆಂಚನಾಲ ಗ್ರಾ.ಪಂ.ಅಧ್ಯಕ್ಷರಾಗಿ ಮಹಮ್ಮದ್ ಷರೀಫ್ ಅವಿರೋಧ ಆಯ್ಕೆ

ಕೆಂಚನಾಲ ಗ್ರಾ.ಪಂ.ಅಧ್ಯಕ್ಷರಾಗಿ ಮಹಮ್ಮದ್ ಷರೀಫ್ ಅವಿರೋಧ ಆಯ್ಕೆ ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಮ ಪಂಚಾಯತಿಯಲ್ಲಿ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಆಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಮಹಮ್ಮದ್ ಷರೀಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಂಚನಾಲ ಗ್ರಾಪಂ ಅಧ್ಯಕ್ಷರಾಗಿದ್ದ ಉಬೇದುಲ್ಲಾ ಷರೀಫ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಮಹಮ್ಮದ್ ಷರೀಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 9 ಸದಸ್ಯರನ್ನು ಹೊಂದಿರುವ ಕೆಂಚನಾಲ ಗ್ರಾಮ ಪಂಚಾಯ್ತಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಮಹಮ್ಮದ್ ಷರೀಫ್ ನಾಮಪತ್ರ ಸಲ್ಲಿಸಿದ್ದರು.ನಿಗದಿತ…

Read Full News
GridArt 20250529

ಹೊಂಬುಜ ಶ್ರೀಗಳಿಂದ ನವೋದಯ, ಏಕಲವ್ಯ ಮತ್ತು ಮೊರಾರ್ಜಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಆಶೀರ್ವಚನ

ಹೊಂಬುಜ ಶ್ರೀಗಳಿಂದ ನವೋದಯ, ಏಕಲವ್ಯ ಮತ್ತು ಮೊರಾರ್ಜಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಆಶೀರ್ವಚನ ಹುಂಚ ಕ್ಷೇತ್ರದ ಪರಮ ಪೂಜ್ಯ ಗುರುಗಳಾದ – ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ, ನವೋದಯ ಮತ್ತು ಮೊರಾರ್ಜಿ ಶಿಬಿರ – ಹುಂಚ ಸಂಸ್ಥೆಯಿಂದ ನವೋದಯ, ಏಕಲವ್ಯ ಮತ್ತು ಮೊರಾರ್ಜಿ ಶಾಲೆಗೆ 14 ಮಕ್ಕಳಿಗೆ ಮತ್ತು ಶಿಬಿರದ ಯಶಸ್ಸಿಗೆ ಕಾರಣಕರ್ತರಾದ ಶಿಕ್ಷಕ ವೃಂದಕ್ಕೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕ್ಷೇತ್ರದ ಸ್ವಾಮೀಜಿಯವರು “ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ…

Read Full News
Images (15)

ಬೆಂಗಳೂರಿನಲ್ಲಿ ಮಳೆಯಿಂದ ಕಾರುಗಳಿಗೆ ಹಾನಿ: ಅರ್ಧ ರೇಟ್ ಗೆ ಕಾರು ಮಾರಾಟ ಮಾಡುತ್ತಿರುವ ಮಾಲೀಕರು

ಬೆಂಗಳೂರಿನಲ್ಲಿ ಮಳೆಯಿಂದ ಕಾರುಗಳಿಗೆ ಹಾನಿ: ಅರ್ಧ ರೇಟ್ ಗೆ ಕಾರು ಮಾರಾಟ ಮಾಡುತ್ತಿರುವ ಮಾಲೀಕರು ಗಳೂರು, ಮೇ 28: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಬೆಂಗಳೂರಿನಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ, ಎರಡು ದಿನಗಳ ಹಿಂದೆ ಸುರಿದ ಮಳೆ ಮಹಾನಗರ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿತ್ತು. ರಸ್ತೆಗಳ ಮೇಲೆ ನೀರು ನಿಂತಿತ್ತು. ವಾಹನ ಸವಾರರು ಪರದಾಡಿದ್ದರು. ಮನೆಯೊಳಗೆ ನೀರು ನುಗ್ಗಿತ್ತು. ಮನೆಗಳ ಮುಂದೆ ನಿಲ್ಲಿಸಿದ್ದ ಕಾರು, ಬೈಕ್​ ಸೇರಿದಂತೆ ಹಲವು…

Read Full News
GridArt 20250528

ರಿಪ್ಪನ್ ಪೇಟೆ ಪಟ್ಟಣದ ಸಮಗ್ರ ಅಭಿವೃದ್ದಿಗೆ ಪಣ – ಶಾಸಕ ಬೇಳೂರು ಗೋಪಾಲಕೃಷ್ಣ

ರಿಪ್ಪನ್ ಪೇಟೆ ಪಟ್ಟಣದ ಸಮಗ್ರ ಅಭಿವೃದ್ದಿಗೆ ಪಣ – ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆ : ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ ಆ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದು ಜನರು ಕೊಟ್ಟ ಅಧಿಕಾರದಿಂದ ಯಥೇಚ್ಛವಾಗಿ ಅನುದಾನ ತರಲು ಸಾಧ್ಯವಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು. ಪಟ್ಟಣದ ಗ್ರಾಮ ಪಂಚಾಯತ್ ನಲ್ಲಿ ನಡೆಯುತಿದ್ದ ಸಾಮಾನ್ಯಸಭೆಗೆ ದಿಡೀರ್ ಭೇಟಿ ನೀಡಿದ ಅವರು ಜನಪ್ರತಿನಿಧಿಗಳ ಬಳಿ ಅಹವಾಲು ಕೇಳಿ…

Read Full News
Images (14)

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (29-05-2025) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ…

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (29-05-2025) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ… ರಿಪ್ಪನ್‌ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (29-05-2025) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ… ರಿಪ್ಪನ್‌ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (29-05-2025) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ… ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ…

Read Full News
GridArt 20250527

ಎರಡು ವರ್ಷದ ಪುಟಾಣಿ ಆರ್ಯನ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ

ಎರಡು ವರ್ಷದ ಪುಟಾಣಿ ಆರ್ಯನ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾ.ಪಂ. ವ್ಯಾಪ್ತಿಯ ನಾಗರಹಳ್ಳಿಯ ಒಂದು ವರ್ಷದ ಹನ್ನೊಂದು ತಿಂಗಳಿನ ಪುಟಾಣಿ ಆರ್ಯನ್ ಇಂಡಿಯಾ ಬುಕ್ ಆಫ಼್ ರೆಕಾರ್ಡ್ ಗೆ ಸೇರ್ಪಡೆಯಾಗಿದ್ದಾನೆ. ಹುಂಚ ಗ್ರಾಪಂ ನ ನಾಗರಹಳ್ಳಿ ನಿವಾಸಿ ಚೇತನ್ ಕುಮಾರ್ ಮತ್ತು ದಿವ್ಯ ಅವರ ಪುತ್ರ 1.11 ವರ್ಷದ ಪುಟಾಣಿ ಆರ್ಯನ್ ಎನ್.ಸಿ. 38 ವಿವಿಧ ಬಗೆಯ ವಿಷಯಗಳನ್ನು ಗುರುತಿಸಿ ಜ್ಞಾಪಕ ಶಕ್ತಿಯಲ್ಲಿ ಇಂಡಿಯಾ ಬುಕ್…

Read Full News
GridArt 20250527

ಆಯನೂರಿನಲ್ಲಿ “ಚೈತನ್ಯ ಅನ್ನ” ಕಾರ್ಯಕ್ರಮ

ಆಯನೂರಿನಲ್ಲಿ “ಚೈತನ್ಯ ಅನ್ನ” ಕಾರ್ಯಕ್ರಮ ಶಿವಮೊಗ್ಗ: ನಗರದ ಆಲ್ಕೊಳದಲ್ಲಿರುವ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ(ರಿ) ಹಾಗೂ ಸ್ತ್ರೀಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಆಯನೂರು ಇವರ ಸಹಯೋಗದಲ್ಲಿ ಒಕ್ಕೂಟ ವ್ಯಾಪ್ತಿಯ ಸಂಘಗಳ ಸದಸ್ಯರ ಹುಟ್ಟುಹಬ್ಬದ ಪ್ರಯುಕ್ತ ಆಯನೂರು ಬಸ್ ನಿಲ್ದಾಣದ ಆವರಣದಲ್ಲಿ   ಸಾರ್ವಜನಿಕರಿಗಾಗಿ ಚೈತನ್ಯ ಅನ್ನ ಕಾರ್ಯಕ್ರಮವನ್ನು ನಡೆಸಲಾಯಿತು. ಆಯನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ  ಗಂಗಾ ನಾಯ್ಕ ಮಾತನಾಡಿ, ಹಸಿದವರಿಗಾಗಿ ಅನ್ನ ಕಾರ್ಯಕ್ರಮ ಏರ್ಪಡಿಸಿರುವುದು ವಿನೂತನ ಕಾರ್ಯಕ್ರಮವಾಗಿದೆ. ಬಡಮಹಿಳೆಯರು ಇಂಥ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷವಾಗಿದೆ….

Read Full News
GridArt 20250526

RIPPONPETE | ಬಾರ್ ಮುಂಭಾಗದಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ – ಸಂಚಾರಕ್ಕೆ ಅಡೆತಡೆ

RIPPONPETE | ಬಾರ್ ಮುಂಭಾಗದಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ – ಸಂಚಾರಕ್ಕೆ ಅಡೆತಡೆ ರಿಪ್ಪನ್ ಪೇಟೆ : ಪಟ್ಟಣದ ಸಮಗ್ರ ಅಭಿವೃದ್ದಿಯ ಚಿಂತನೆಯಲ್ಲಿ ಜನಪ್ರತಿನಿಧಿಗಳು ಕೋಟ್ಯಾಂತರ ರೂ ಅನುದಾನವನ್ನು ತಂದು ರಸ್ತೆಗಳನ್ನು ಅಗಲೀಕರಣಗೊಳಿಸುವ ಮೂಲಕ ಪಟ್ಟಣದ ವಾಹನ ಪಾರ್ಕಿಂಗ್ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ. ಆದರೆ ತೀರ್ಥಹಳ್ಳಿ ರಸ್ತೆಯಲ್ಲಿರುವ ಖಾಸಗಿ ಬಾರ್ ಮುಂಭಾಗದಲ್ಲಿ ಮದ್ಯ ಪ್ರಿಯರು ಬೇಕಾಬಿಟ್ಟಿ ವಾಹನ ನಿಲ್ಲಿಸುವ ಮೂಲಕ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದಾರೆ. ಹೌದು ತೀರ್ಥಹಳ್ಳಿ ರಸ್ತೆಯ ಖಾಸಗಿ ಬಾರ್ ಮುಂಭಾಗದಲ್ಲಿ ಮದ್ಯ ಪ್ರಿಯರು…

Read Full News
IMG 20250526 WA0031

ಮುಂಗಾರು ಆರಂಭದಲ್ಲೇ ತುಂಬಿದ ತುಂಗೆ – 5 ಕ್ರಸ್ಟ್ ಗೇಟುಗಳಿಂದ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಮುಂಗಾರು ಆರಂಭದಲ್ಲೇ ತುಂಬಿದ ತುಂಗೆ – ೫ ಕ್ರಸ್ಟ್ ಗೇಟುಗಳಿಂದ  ೨ ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಶಿವಮೊಗ್ಗ: ಮುಂಗಾರುಪೂರ್ವ ಮಳೆಗೆ ತುಂಗಾ ಅಣೆಕಟ್ಟು ಭರ್ತಿಯಾಗಿದ್ದು, ೫ ಕ್ರಸ್ಟ್ ಗೇಟುಗಳ ಮೂಲಕ ನದಿಗೆ ೨ ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಇದು ರಾಜ್ಯದಲ್ಲಿಯೇ ಪ್ರಥಮವಾಗಿ ತುಂಬುವ ಅಣೆಕಟ್ಟಾಗಿದೆ. ಅಣೆಕಟ್ಟೆಗೆ ೭,೫೦೦ ಕ್ಯೂಸೆಕ್ ನೀರು ಒಳ ಹರಿವು ಇರುವ ಕಾರಣ ಐದು ಕ್ರಸ್ಟ್ ಗೇಟ್‌ಗಳ ಮೂಲಕ ೨ ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇನ್ನೂ ಒಂದು ವಾರದಲ್ಲಿ…

Read Full News