ಶಿವಮೊಗ್ಗದ ಆರ್‌ಎಸ್‌ಎಸ್ ಕಚೇರಿ ಮಧುಕೃಪಾದಲ್ಲಿ ಆಕಸ್ಮಿಕ ಬೆಂಕಿ
ಶಿವಮೊಗ್ಗ: ನಗರದ ಪಂಚವಟಿ ಕಾಲೋನಿಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಚೇರಿ ಮಧು ಕೃಪಾ ಕಟ್ಟಡದ ಕೊನೆಯ ಮಹಡಿಯಲ್ಲಿ ಇಂದು ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.
ಅಗ್ನಿ ಅವಘಡದಿಂದ ಕಚೇರಿಯಲ್ಲಿದ್ದ ಕೆಲವು ವಸ್ತುಗಳು ಸುಟ್ಟು ಹೋಗಿವೆ. ಪ್ರಮುಖವಾಗಿ ಹಾಸಿಗೆ ಮತ್ತು ಕುರ್ಚಿಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.