Headlines

ಹೂವಿನಕೋಣೆ ಶಾಲೆ ವಿಷಪ್ರಾಷಣ ಪ್ರಕರಣ – ತನಿಖೆಯಲ್ಲಿ ಬಹಿರಂಗಗೊಂಡ ಶಾಕಿಂಗ್ ಸತ್ಯ , ಮಕ್ಕಳಾಟ ತಂದ ನಡುಕ

ಹೂವಿನಕೋಣೆ ಶಾಲೆ ವಿಷಪ್ರಾಷಣ ಪ್ರಕರಣ – ತನಿಖೆಯಲ್ಲಿ ಬಹಿರಂಗಗೊಂಡ ಶಾಕಿಂಗ್ ಸತ್ಯ , ಮಕ್ಕಳಾಟ ತಂದ ನಡುಕ

ಹೊಸನಗರ ತಾಲ್ಲೂಕಿನ ಹೂವಿನಕೋಣಿ ಗ್ರಾಮದ ಸರಕಾರಿ ಶಾಲೆಯಲ್ಲಿ ಸಂಭವಿಸಿದ ಕೀಟನಾಶಕ ಘಟನೆ ಮಹತ್ವದ ತಿರುವು ಪಡೆದುಕೊಂಡಿದೆ. ಕೆಲವು ದಿನಗಳ ಹಿಂದೆ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ ಘಟನೆ ರಾಜ್ಯದಾದ್ಯಂತ ಆತಂಕ ಮೂಡಿಸಿತ್ತು.

ಈ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಖುದ್ದಾಗಿ ಟ್ವೀಟ್ ಮಾಡಿ, “ಇದು ಭಯೋತ್ಪಾದನೆಯಿಗಿಂತಲೂ ಭಯಾನಕ,” ಎಂದು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಪೊಲೀಸರ ತಂಡ ಕೂಡ ಜಾಗೃತಗೊಂಡು, ತೀವ್ರ ತನಿಖೆ ಕೈಗೊಂಡಿತ್ತು. ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ರಚನೆಯಾದ ಮೂರು ವಿಶೇಷ ತಂಡಗಳು, ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ಮಾರ್ಗದರ್ಶನದಲ್ಲಿ ತಂತ್ರಜ್ಞಾನ ಆಧಾರಿತ ತನಿಖೆ ನಡೆಸಿದವು.

ಆದರೆ ಯಾರೂ ಊಹಿಸದ ರೀತಿಯಲ್ಲಿ, ಈ ಪ್ರಕರಣದ ಹಿಂದೆ ಐದನೇ ತರಗತಿಯ ವಿದ್ಯಾರ್ಥಿಯಿರುವ ಸುದ್ದಿ ಇದೀಗ ಎಲ್ಲರನ್ನೂ ಶಾಕ್‌ಗೆ ತಳ್ಳಿದೆ. ಮಕ್ಕಳ ಹುಡುಗಾಟದ ಈ ಕೆಲಸ ಎಷ್ಟು ಭಯಾನಕ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದರ ಜ್ವಲಂತ ಉದಾಹರಣೆ ಇದು.

ಇನ್ನೂ ಈ ಬಗ್ಗೆ ಪೊಲೀಸರು ಎಲ್ಲಾ ಆಯಮಗಳಲ್ಲಿ ತನಿಖೆ ಕೈಗೊಂಡು ಸತ್ಯಾಂಶ ಹೊರಹಾಕಿದ್ದಾರೆ ಆದರೆ ಇಲ್ಲಿನ ಮಕ್ಕಳ ಹುಡುಗಾಟ ಇಡೀ ರಾಜ್ಯದ ಪೋಷಕರಲ್ಲಿ ಆತಂಕ ಮೂಡಿಸಿದಂತು ಸತ್ಯ….