Headlines

ಆತ್ಮಸಾಕ್ಷಿಗಿಂತ ಮಿಗಿಲಾದ ಸಾಕ್ಷಿ ಬೇರೊಂದು ಇಲ್ಲ :ನ್ಯಾಯಮೂರ್ತಿ ಎಂ ಎಸ್.ಸಂತೋಷ್

ಆತ್ಮಸಾಕ್ಷಿಗಿಂತ ಮಿಗಿಲಾದ ಸಾಕ್ಷಿ ಬೇರೊಂದು ಇಲ್ಲ :ನ್ಯಾಯಮೂರ್ತಿ ಎಂ ಎಸ್.ಸಂತೋಷ್

ರಿಪ್ಪನ್ ಪೇಟೆ : ಆತ್ಮಸಾಕ್ಷಿ ಗಿಂತ ಮಿಗಿಲಾದ ಸಾಕ್ಷಿ ಬೇರೊಂದು ಇಲ್ಲ  ಎಂದು ಹಿರಿಯ ವ್ಯವಹಾರಗಳ ಜಿಲ್ಲಾ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಎಂ.ಎಸ್. ಸಂತೋಷ್ ಹೇಳಿದರು.

ಅಮೃತ(ಗರ್ತಿಕೆರೆ) ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತದಾರ ಸಾಕ್ಷರತಾ ಸಂಘ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾಗಿದ್ದ ಕಾನೂನಿನ ಅರಿವು ಮತ್ತು ಸಂವಿಧಾನ ಪರಿಚಯ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಆತ್ಮಸಾಕ್ಷಿ ಎಂಬುದು ಪ್ರತಿಯೊಬ್ಬರಲ್ಲೂ ಇದೆ ಅದು ಅವರ ನಡೆ-ನುಡಿಯಲ್ಲಿ ಗೋಚರಿಸುತ್ತದೆ, ಆತ್ಮಸಾಕ್ಷಿ ಎಂಬುದು ಪ್ರತಿಯೊಬ್ಬರಲ್ಲೂ ಇರಬೇಕು ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದಅವರು ವಿದ್ಯಾರ್ಥಿಗಳ ಕುರಿತು ಮಾತನಾಡಿ ಪರವಾನಿಗೆ ಇಲ್ಲದೆ ವಾಹನ ಓಡಿಸುವಂತಹ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಂದ ಆಗುವ ಅನಾಹುತಗಳು ಮತ್ತು ತಂದೆ-ತಾಯಿಗಳಿಗೆ ಆಗುವ ಆಘಾತಗಳ ಬಗ್ಗೆ ವಿವರಿಸಿದರು ಅಲ್ಲದೆ, ಕಾನೂನಿನಲ್ಲಿ ಪ್ರತಿಯೊಬ್ಬನು ತಾನು ನಂಬರ್ ಒನ್ ಆಗುವ ಪ್ರಯತ್ನ ಮಾಡುವುದು ಕರ್ತವ್ಯವಾಗಿದೆ  ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ನಜಹತ್ ಉಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಕಾರ್ಯಕ್ರಮದಲ್ಲಿ  ಗರ್ತಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ   ಸಚಿನ್ ಗೌಡ,  ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸೋಮಶೇಖರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹಾಲಪ್ಪ ಸಂಕೂರು, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪ್ರಭಾವತಿ ಹೆಗಡೆ  ಹೆಗಡೆ ಟಿ.ಡಿ, ಸದಾನಂದ ಸೇರಿದಂತೆ ಕಸಾಪ ಕಾರ್ಯದರ್ಶಿ ಕೆ ಜಿ ನಾಗೇಶ್, ಅಶ್ವಿನಿ ಪಂಡಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಲೇಜು ಅಭಿವೃದ್ಧಿ ಸಮಿತಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತದಾರ ಸಾಕ್ಷರತಾ ಸಂಘ ಮತ್ತು ಕಸಾಪ ವತಿಯಿಂದ ನ್ಯಾಯಮೂರ್ತಿ ಎಂ.ಎಸ್.  ಸಂತೋಷ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಹುಂಚ ಹೋಬಳಿ ಕಸಾಪ ಘಟಕದ ಅಧ್ಯಕ್ಷ  ಹೆಚ್.ಎಂ. ಬಷೀರ್ ಅಹಮ್ಮದ್ ಸ್ವಾಗತಿಸಿ, ಉಪನ್ಯಾಸಕ ಫ್ರಾನ್ಸಿಸ್ ಬೆಂಜಮಿನ್ ನಿರೂಪಿಸಿದರು. ಶಂಕರಪ್ಪ ಕೆ ಎಸ್ ವಂದಿಸಿದರು.