ತುಂಗಾ ನದಿ ಸೇತುವೆ ಮೇಲೆ ಬೇರ್ಪಟ್ಟ ಮೈಸೂರು ಇಂಟರ್‌ಸಿಟಿ ರೈಲಿನ ಬೋಗಿಗಳು
ಶಿವಮೊಗ್ಗ: ತುಂಗಾ ನದಿ ಸೇತುವೆ ಮೇಲೆ ಚಲಿಸುತ್ತಿದ್ದಾಗಲೇ ರೈಲಿನ ಬೋಗಿಗಳು ಬೇರ್ಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ.
Mysore Intercity train carriages separated on Tunga river bridge
ತಾಳಗುಪ್ಪ – ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಬೇರ್ಪಟ್ಟು ಆತಂಕ ಮೂಡಿಸಿದ್ದವು. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.ತಾಳಗುಪ್ಪ – ಮೈಸೂರು ಇಂಟರ್‌ಸಿಟಿ ರೈಲು ಸಂಜೆ ೫ ಗಂಟೆ ಹೊತ್ತಿಗೆ ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟಿತ್ತು. ತುಂಗಾ ನದಿ ಸೇತುವೆ ಮೇಲೆ ಚಲಿಸುತ್ತಿದ್ದಾಗ ಎರಡು ಬೋಗಿಗಳ ಮಧ್ಯೆ ಇದ್ದ ಕ್ಲಿಪಿಂಗ್ ಲಾಕ್ ತುಂಡಾಗಿದೆ.
ಸುದ್ದಿ ತಿಳಿದು ರೈಲ್ವೆ ಇಂಜಿನಿಯರಿಂಗ್ ತಂಡ, ಗ್ಯಾರೇಜ್ ಅಂಡ್ ಮೆಕಾನಿಕ್ ಸ್ಟಾಫ್ ಸ್ಥಳಕ್ಕೆ ದೌಡಾಯಿಸಿದರು. ನಂತರ ಲಾಕ್ ಸರಿಪಡಿಸಿ ರೈಲು ಮೈಸೂರಿಗೆ ಪ್ರಯಾಣ ಮುಂದುವರೆಸಿತು.
ಇದರಿಂದ ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಭದ್ರಾವತಿ ನಿಲ್ದಾಣ ತಲುಪಿತು. ನಿಗದಿತ ಸಮಯಕ್ಕಿಂತಲು ಒಂದು ಗಂಟೆ ತಡವಾಗಿ ರೈಲು ಭದ್ರಾವತಿ ತಲುಪಿತು.
ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಡಿ೩ ಮತ್ತು ಡಿ೪ ಬೋಗಿಗಳ ನಡುವಿನ ಕಪ್ಲಿಂಗ್ ಲಾಕ್ ಡೀಕಪ್ಲಿಂಗ್ ಆಗಿತ್ತು. ಲಾಕ್ ತುಂಡಾಗಿದ್ದರಿಂದ ಎರಡು ಬೋಗಿಗಳು ಬೇರ್ಪಟ್ಟಿದ್ದವು. ೨೧ ಬೋಗಿಗಳ ಪೈಕಿ ಗಾರ್ಡ್ ಕೋಚ್ ಸೇರಿದಂತೆ ಆರು ಬೋಗಿಗಳು ತುಂಗಾ ನದಿ ಸೇತುವೆ ಏರುವ ಮೊದಲೇ ಸ್ಟಾಪ್ ಆಗಿದ್ದವು. ಇಂಜಿನ್ ಸೇರಿದಂತೆ ಉಳಿದ ಬೋಗಿಗಳು ತುಂಗಾ ನದಿ ಸೇತುವೆ ಮೇಲೆ ನಿಂತಿದ್ದವು.
ರೈಲಿನ ಬೋಗಿಗಳು ಬೇರ್ಪಟ್ಟಿದ್ದರಿಂದ ರೈಲಿನಲ್ಲಿದ್ದ ಪ್ರಯಾಣಿಕರು ಆತಂಕಕ್ಕೀಡಾದರು. ಸೇತುವೆ ಮೇಲೆ ರೈಲು ನಿಂತಿದ್ದರಿಂದ ಅದರಲ್ಲಿದ್ದ ಪ್ರಯಾಣಿಕರು ಕೆಳಗಿಳಿಯಲು ಸಾಧ್ಯವಾಗದೆ ಪರದಾಡಿದರು.
ರೈಲಿನ ಬೋಗಿಗಳು ಬೇರ್ಪಟ್ಟಿದ್ದನ್ನು ಗಮನಿಸಿದ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದರು. ಕೋಟೆ ಠಾಣೆ ಪೊಲೀಸರು ಮತ್ತು ರೈಲ್ವೆ ಪೊಲೀಸರು ಜನರನ್ನು ನಿಯಂತ್ರಿಸಿದರು. ಕಪ್ಲಿಂಗ್ ಲಾಕ್ ಕಾರ್ಯದ ಬಳಿಕ ರೈಲು ಮೈಸೂರಿನತ್ತ ಸಂಚಾರ ಪುನಾರಂಭಿಸಿತು.
Mysore Intercity train carriages separated on Tunga river bridge