ರಸ್ತೆ ಅಪಘಾತದಲ್ಲಿ ಮೃತಪಟ್ಟ ಯೋಧ ಪ್ರಜ್ವಲ್ ಅಂತ್ಯಕ್ರಿಯೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜಿಗಳೆಮನೆ ಗ್ರಾಮದಲ್ಲಿ ನೆರವೇರಿತು.
ಗುರುವಾರ ಚಾಮರಾಜನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಅಗ್ನಿವೀರ್ ಯೋಧ ಪ್ರಜ್ವಲ್ ಮೃತಪಟ್ಟಿದ್ದರು. ಇಂದು ಅವರ ಹುಟ್ಟೂರು ಜಿಗಳೆಮನೆ ಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಪ್ರಜ್ವಲ್‌ಗೆ ಅಂತಿಮ ನಮನ ಸಲ್ಲಿಸಲಾಯಿತು
ಅಗಲಿದ ಯೋಧನಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅಂತಿಮ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಸಾಗರ ತಾಲೂಕು ಅಡಳಿತದ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪೊಲೀಸ್ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು, ತಹಶೀಲ್ದಾರ್ ರಶ್ಮೀ ಹಾಲೇಶ್ ಸೇರಿ ಹಲವರು ಉಪಸ್ಥಿತರಿದ್ದರು.
ಅಗ್ನಿವೀರ್ ಪ್ರಜ್ವಲ್ ಅವರ ಪಾರ್ಥೀವ ಶರೀರಕ್ಕೆ ಭಾರತೀಯ ಸೇನೆಯ ಯೋಧರು, ಮಾಜಿ ಸೈನಿಕರು ನಮನ ಸಲ್ಲಿಸಿದರು. ಹೂಗುಚ್ಛವನ್ನ ಇರಿಸಿ, ಸಲ್ಯೂಟ್ ಮಾಡಿ ಅಂತಿಮ ಗೌರವ ಸಲ್ಲಿಸಿದರು. ಇದೇ ವೇಳೆ ಪ್ರಜ್ವಲ್ ತಂದೆ ರಾಮಚಂದ್ರ ಮತ್ತು ತಾಯಿ ರಾಜೇಶ್ವರಿ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಲಾಯಿತು.





