ಓವರ್ ಟೇಕ್ ಮಾಡಿದ್ದಕ್ಕೆ KSRTC ಬಸ್ ಚಾಲಕನ ಮೇಲೆ ಹಲ್ಲೆ- ಇಬ್ಬರ ಬಂಧನ
KSRTC bus driver assaulted for overtaking – both arrested
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಬಸ್ ನಿಲ್ದಾಣದಲ್ಲಿ ಕೆ ಎಸ್ ಆರ್ ಟಿ ಸಿ ಚಾಲಕನ ಮೇಲೆ ಹಲ್ಲೆ ನಡೆಸಿದ ಹಿನ್ನಲೆ ಇಬ್ಬರನ್ನು ಬಂಧನಕ್ಕೆ ಒಳಪಡಿಸಲಾಗಿದೆ.
ಸಾಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಮೋಹನ್ ಎಂಬುವರ ಮೇಲೆ ಬಸ್ ಓವರ್ ಟೆಕ್ ಮಾಡುತ್ತಿದ್ದೀರಾ ಎಂದು ಆನಂದಪುರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಹಲ್ಲೆ ಮಾಡಿದ್ದಾರೆ ಎಂದು ಚಾಲಕ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಪ್ರವೀಣ್ ( 31 ) ಜಗದೀಶ್ (31)ಎಂಬುವರನ್ನು ಬಂದಿಸಲಾಗಿದೆ.
KSRTC bus driver assaulted for overtaking – both arrested