Headlines

ಹೃದಯಾಘಾತದಿಂದ 34 ವರ್ಷದ ಯುವಕ ಸಾವು

ಹೃದಯಾಘಾತದಿಂದ 34 ವರ್ಷದ ಯುವಕ ಸಾವು

ಹೃದಯಾಘಾತದಿಂದ 34 ವರ್ಷದ ಯುವಕ ಸಾವು

ಕಂದಮ್ಮನಿಗಾಗಿ ಬಾಳುವ ಆಸೆ ಇತ್ತು… ಆದರೆ ಹೃದಯ ದ್ರೋಹ ಬಗೆದು ಬಡಿತ ನಿಲ್ಲಿಸಿತ್ತು…

ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿ ತಂದೆ ಎಂಬ ಬಿರುದು ಪಡೆದ ಮೇಲೆ ದಿನವೂ ಕಣ್ಣಲ್ಲಿ ಕನಸು ತುಂಬಿಸಿಕೊಂಡಿದ್ದ ಗಿರೀಶ್ ಎಂಬ ಯುವಕ ಕೇವಲ 34ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ.

ಹೊಸನಗರ ತಾಲೂಕಿನ ಹಿರೀಮನೆ ಗ್ರಾಮದ ನಿವಾಸಿ ಗಿರೀಶ್ ಅವರಿಗೆ ನಿನ್ನೆ ರಾತ್ರಿ ಏಕಾಏಕಿ ಎದೆನೋವು ಕಾಣಿಸಿಕೊಂಡಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕುಟುಂಬದವರು ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು. ಆದರೆ ದಾರಿ ಮಧ್ಯೆ ಗಿರೀಶ್ ಕೊನೆಯುಸಿರೆಳೆದರು.

ಇಡೀ ಕುಟುಂಬಕ್ಕಾಗಿ ಇದು ನಂಬಲಾರದ ಶಾಕ್. ಎರಡು ವರ್ಷಗಳ ಹಿಂದಷ್ಟೇ ವಿವಾಹವಾದ ಗಿರೀಶ್ ತಂದೆಯಾಗಿದ್ದ ಖುಷಿಯಲ್ಲಿದ್ದ ಸಂಧರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕುಟುಂಬದ ಮೇಲೆ ಆಘಾತದ ಮೋಡ ಕವಿದಂತಾಗಿದೆ.

ಯುವ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗಿರೀಶ್ ಅವರ ಮರಣ ಮತ್ತೊಂದು ಎಚ್ಚರಿಕೆಯ ಗಂಟೆಯಾಗಿದೆ.