50 ಲಕ್ಷ ಹಣಕ್ಕಾಗಿ ಬೆದರಿಕೆ – ಮನೆ ಮತ್ತು ಅಂಗಡಿಗೆ ನುಗ್ಗಿ ವಸ್ತುಗಳ ನಾಶ
50 lakh threat – house and shop broken into, property destroyed
ಶಿವಮೊಗ್ಗ: ನಗರದ ಆರ್.ಎಂ.ಎಲ್. ನಗರದಲ್ಲಿ ಗುಜರಿ ವ್ಯಾಪಾರಿಯೊಬ್ಬರಿಗೆ 50 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿ, ಮನೆಯ ಹಾಗೂ ಅಂಗಡಿಯ ವಸ್ತುಗಳನ್ನು ನಾಶಪಡಿಸಿದ ಆರೋಪದ ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್.ಎಂ.ಎಲ್. ನಗರ ನಿವಾಸಿಯಾಗಿರುವ ಗುಜರಿ ವ್ಯಾಪಾರಿಯೊಬ್ಬರು ಮನೆಯಲ್ಲಿ ಕುಳಿತಿದ್ದಾಗ, ಸುಮಾರು 5-6 ಯುವಕರು ಬಂದು ಅವರ ಅಣ್ಣನೊಂದಿಗೆ ಮಾತನಾಡಲು ಫೋನ್ ನೀಡಿದ್ದಾರೆ. ಫೋನ್ ತೆಗೆದುಕೊಂಡು ಮಾತನಾಡಿದಾಗ, ಆ ವ್ಯಕ್ತಿ ನನಗೆ ನೀನು 50 ಲಕ್ಷ ಹಣ ನೀಡಬೇಕು. ಇಲ್ಲವಾದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಣ ನೀಡಲು ನಿರಾಕರಿಸಿದ ನಂತರ, ಅದೇ ರಾತ್ರಿ ಯುವಕರು ಮತ್ತೆ ಮನೆಗೆ ಬಂದು ಜಗಳ ಮಾಡಿ, ದೂರುದಾರರ ಅಳಿಯನಿಗೂ ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ದೂರುದಾರರು ತಮ್ಮ ಸಂಬಂಧಿಕರ ಮನೆಗೆ ಹೋಗಿ ಉಳಿದುಕೊಂಡಿದ್ದಾರೆ. ಮರುದಿನ ನೆರೆಮನೆಯವರು ಕರೆ ಮಾಡಿ, ಅವರ ಮನೆಯ ವಸ್ತುಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮನೆಗೆ ಬಂದು ನೋಡಿದಾಗ 50 ಸಾವಿರ ಮೌಲ್ಯದ ವಸ್ತುಗಳನ್ನು ಹಾಳು ಮಾಡಿರುವುದು ಕಂಡುಬಂದಿದೆ.
ದೂರುದಾರರ ಅಳಿಯನ ಅಂಗಡಿಯ ಬಳಿಯೂ ಹೋಗಿ, ಹಣ ಕೊಡುವವರೆಗೂ ಅಂಗಡಿಯನ್ನು ತೆರೆಯಲು ಬಿಡುವುದಿಲ್ಲ ಎಂದು ಹೇಳಿ, ಡೆಸ್ಕ್‌ಟಾಪ್ ಸೇರಿದಂತೆ ಇತರ ವಸ್ತುಗಳನ್ನು ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
50 lakh threat – house and shop broken into, property destroyed
ಮೋದಿ ಹುಟ್ಟುಹಬ್ಬ ‘ನಿರುದ್ಯೋಗಿಗಳ ದಿನ’ವಾಗಿ ಆಚರಣೆ; ಯುವ ಕಾಂಗ್ರೆಸ್ ಪ್ರತಿಭಟನೆ Youth Congress and NSUI workers in Shivamogga…
ಶಿವಮೊಗ್ಗ ಲೋಕಾಯುಕ್ತ ಎಸ್‌ಪಿಯಾಗಿ ಆಂಟನಿ ಜಾನ್ ನೇಮಕ Anthony John has been appointed as the new Lokayukta…
ಕಡವೆ ಬೇಟೆ ಮಾಡಿ ಮಾಂಸ ಕತ್ತರಿಸುತ್ತಿದ್ದಾಗಲೇ ದಾಳಿ! ಮೂವರ ಬಂಧನ | 70 ಕೆ.ಜಿ. ಮಾಂಸ , ಬಂದೂಕು ಜಪ್ತಿ…
ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ One-month skill development training on bakery product preparation…
ತೀರ್ಥಹಳ್ಳಿ ಪೊಲೀಸ್ ಠಾಣೆಯ ಗಣಪತಿ ವಿಸರ್ಜನೆ ; ಚಂಡೆ ಸದ್ದಿಗೆ ಡಿವೈಎಸ್‌ಪಿ ಭಾನುಪ್ರಕಾಶ್, ಸಿಪಿಐ ಇಮ್ರಾನ್ ಹೆಜ್ಜೆ Thirthahalli police…
ಕೋಡೂರು ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಲಕ್ಷಾಂತರ ರೂ. ನಷ್ಟ House fire reported at Keelambi…