
ಜಿಲ್ಲಾ ಸುದ್ದಿ:
ಶಿವಮೊಗ್ಗದ ಗೌಸಿಯಾ ಹೋಟೆಲ್ ನಲ್ಲಿ ಮಾರಾಮಾರಿ :
ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಗೌಸಿಯಾ ಹೋಟೆಲ್ ನಲ್ಲಿ ಗ್ಯಾಂಗ್ ವಾರ್ ಮಾರಾಮಾರಿ ನಡೆದಿದೆ. ರಿಯಲ್ ಎಸ್ಟೇಟ್ ನ ಹಣದ ವಿಚಾರದಲ್ಲಿ ಯುವಕರ ನಡುವೆಯೇ ಭರ್ಜರಿ ಕಾಳಗವೇ ನಡೆದಿದೆ ಶಿವಮೊಗ್ಗದ ಬಹುತೇಕ ಮಂದಿಗೆ ಈ ಗೌಸಿಯಾ ಹೋಟೆಲ್ ನೆನಪಿರಬಹುದು, ಹೋಗಲಿ ಮಾಲೀಕ ಮನ್ಸೂರ್ ನೆನಪಿರಬಹುದು. ಹೋಗಲಿ ಅಸಲಿ ಫ್ಲಾಶ್ ಬ್ಯಾಕ್ ಹೇಳಬಿಡುತ್ತೇನೆ. ಬುಡಬುಡಕಿ ಸಾಧಿಕ್ ನ ಮರ್ಡರ್ ಪ್ರಕರಣದಲ್ಲಿ ಅರೊಪಿಯಾಗಿ ಜೈಲಿನಲ್ಲಿರುವ ಮನ್ಸೂರೇ ಈ ಹೋಟೆಲ್ ನ ಮಾಲೀಕ. ಬುಡಬುಡಕಿ ಸಾಧಿಕ್ ನ ಕೊಲೆಯೂ ಇದೇ ರಿಯಲ್ ಎಸ್ಟೇಟ್…
ಪೋಸ್ಟ್ ಮ್ಯಾನ್ ನ್ಯೂಸ್ ವರದಿಗೆ ಬೆಚ್ಚಿಬಿದ್ದ ಮರಳು ಮಾಫಿಯಾದವರು……! ಮರಳು ಸಂಗ್ರಹಿಸುವ ಪರಿಕರಗಳೊಂದಿಗೆ ಗವಟೂರು ಹೊಳೆಯ ದಡದಿಂದ ಎಸ್ಕೇಪ್ …!
ರಿಪ್ಪನ್ ಪೇಟೆ : ಪಟ್ಟಣದ ಸಮೀಪದ ಶರ್ಮಿಣ್ಯಾವತಿ ನದಿಯ (ಗವಟೂರು ಹೊಳೆ) ದಡದಲ್ಲಿ ಲಕ್ಷಾಂತರ ರೂಪಾಯಿ ಮರಳು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಮರಳು ಮಾಫಿಯಾದ ವಿರುದ್ಧ ಭಾನುವಾರ ಪೋಸ್ಟ್ ಮ್ಯಾನ್ ವರದಿ ಮಾಡಿತ್ತು. ಇದನ್ನು ಗಮನಿಸಿದ ಮರಳು ಮಾಫಿಯಾದವರು ಹಾಗೂ ಮರಳು ದಂಧೆಕೋರರು ಮರಳು ಸಂಗ್ರಹಣೆಗಾಗಿ ತಂದಿಟ್ಟಿದ್ದ ಪರಿಕರಗಳನ್ನು ತೆಗೆದುಕೊಂಡು ಕೆಲಸಗಾರರೊಂದಿಗೆ ಎಸ್ಕೇಪ್ ಆಗಿದ್ದಾರೆ. ರಿಪ್ಪನ್ ಪೇಟೆಯಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಗವಟೂರು ಹೊಳೆಯಲ್ಲಿ ಮರಳು ಮಾಫಿಯಾದವರು ಮರಳು ಸಂಗ್ರಹ ಮಾಡುತ್ತಿರುವ ವಿಷಯ ಕಂದಾಯ,ಅರಣ್ಯ, ಪೊಲೀಸ್,ಭೂ…
ಎತ್ತುಗಳ ಮೈ ತೊಳೆಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು:
ಹೊಸನಗರ: ತಾಲೂಕಿನ ನಗರ ವ್ಯಾಪ್ತಿಯ ಬೇಳೂರು ಸಮೀಪದ ಹೆಣ್ಣೆಬೈಲಿನ ಶರಾವತಿ ಹಿನ್ನೀರಿನಲ್ಲಿ ಎತ್ತುಗಳ ಮೈತೊಳೆಯಲು ಹೋದ ವ್ಯಕ್ತಿಯೋರ್ವ ನೀರುಪಾಲಾದ ಘಟನೆ ಶುಕ್ರವಾರ ನಡೆದಿದೆ. ಮೃತನನ್ನು ಬೇಳೂರು ಗ್ರಾಮದ ಸುರೇಶ್ (48) ಎಂದು ಗುರುತಿಸಲಾಗಿದೆ. ಜ.14 ರಂದು ಈತನು ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ ಎತ್ತುಗಳ ಮೈತೊಳೆಯುವ ಸಲುವಾಗಿ ಶರಾವತಿ ಹಿನ್ನೀರು ಪ್ರದೇಶಕ್ಕೆ ಬಂದಾಗ ಈ ಘಟನೆ ನಡೆದಿದೆ. ಗ್ಯಾಂಗ್ರಿನ್ ನಿಂದಾಗಿ ಮೃತ ಸುರೇಶ್ ಅವರ ಒಂದು ಕಾಲನ್ನು ಕತ್ತರಿಸಿ ತೆಗೆಯಲಾಗಿತ್ತು. ಹೀಗಾಗಿ ನೀರಿನಲ್ಲಿ ಬಿದ್ದ ಅವರಿಗೆ ಮೇಲೆ…
ಕುವೆಂಪು ವಿಶ್ವವಿದ್ಯಾಲಯ ಸೇರಿದಂತೆ ಇಡೀ ಶಂಕರಘಟ್ಟ ಗ್ರಾಮ ಸೀಲ್ ಡೌನ್ :
ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಕರಘಟ್ಟ ಗ್ರಾಮದ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಹಿನ್ನಲೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್ ಸೋಮವಾರ ಇಡೀ ಗ್ರಾಮವನ್ನು ‘ಕಂಟೈನ್‌ಮೆಂಟ್ ಜೋನ್’ ಎಂದು ಘೋಷಿಸಿ ಆದೇಶ ಹೊರಡಿಸಿದ್ದಾರೆ. ಶಂಕರಘಟ್ಟ ಗ್ರಾಮಕ್ಕೆ ಒಳಪಡಿಸುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಒಟ್ಟು ೨೪ ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಬಿ.ಪಿ ವೀರಭದ್ರಪ್ಪ ೫ ದಿನಗಳ ಕಾಲ ರಜೆ ಘೋಷಿಸಿದ್ದರು. ಈ ನಡುವೆ ಇದೀಗ ತಹಸೀಲ್ದಾರ್‌ರವರು ಸರ್ಕಾರದ ಮಾರ್ಗಸೂಚಿಯಂತೆ…
ವಿದ್ಯಾರ್ಥಿಗಳಿಗೆ ಹೆಚ್ಚುತ್ತಿರುವ ಕೊರೊನಾ ಸೋಂಕು : ರಿಪ್ಪನ್ ಪೇಟೆಯ ಸರಕಾರಿ ಪದವಿ ಹಾಗೂ ಪಿಯು ಕಾಲೇಜು ಸೀಲ್ ಡೌನ್……!
ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸನಗರ ತಾಲೂಕು ದಂಡಾಧಿಕಾರಿಗಳ ಆದೇಶದ ಮೇರೆಗೆ ರಿಪ್ಪನ್ ಪೇಟೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಎರಡು ಕಾಲೇಜುಗಳನ್ನು ಸೀಲ್ ಡೌನ್ ಮಾಡಿದ್ದಾರೆ. ಕಳೆದ ಒಂದು ವಾರದಲ್ಲಿ ಪದವಿ ಕಾಲೇಜಿನ 12 ವಿದ್ಯಾರ್ಥಿಗಳಿಗೆ ಹಾಗೂ ಪದವಿಪೂರ್ವ ಕಾಲೇಜಿನ 10 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗಲಿದ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ಸೀಲ್ ಡೌನ್ ಮಾಡಲಾಗಿದೆ….
ಪಿಯು ಕಾಲೇಜಿನ 9 ವಿದ್ಯಾರ್ಥಿಗಳಿಗೆ ಕೊವೀಡ್ ಸೋಂಕು ಧೃಡ : ಸೋಮವಾರ ಶಾಲೆಗೆ ರಜೆ ಘೋಷಣೆ
ರಿಪ್ಪನ್‌ಪೇಟೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗಲಿದ್ದು ಸೋಮವಾರ ತರಗತಿಗಳಿಗೆ ರಜೆ ಘೋಷಿಸಲಾಗಿದೆ. ರಿಪ್ಪನ್‌ಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 600ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ವಾಣಿಜ್ಯ ವಿಭಾಗದ ವಿದ್ಯಾರ್ಥಿಯೊಬ್ಬನಿಗೆ ಗುರುವಾರ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ತಪಾಸಣೆ ನಡೆಸಲಾಗಿತ್ತು. ಗುರುವಾರ ರಿಪ್ಪನ್ ಪೇಟೆಯ ಪಿಹೆಚ್ ಸಿ ಯಲ್ಲಿ ಕೊವೀಡ್ ಟೆಸ್ಟಿಂಗ್ ಕಿಟ್ ಕೊರತೆಯ ಹಿನ್ನಲೆಯಲ್ಲಿ ಶುಕ್ರವಾರ ಕೊವೀಡ್ ಪರೀಕ್ಷೆ ನಡೆಸಲಾಗಿತ್ತು. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ…
ಗವಟೂರು ಹೊಳೆಯ ಒಡಲು ಬಗೆಯುತ್ತಿರುವ ಮರಳು ದಂಧೆಕೋರರು : ಈ ಮಾಫ಼ಿಯಾ ತಡೆಯುವಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಸಹಯಕರೋ.. ? ಅಸಮರ್ಥರೋ…?
ರಿಪ್ಪನ್ ಪೇಟೆ : ಪಟ್ಟಣದ ಸಮೀಪದ ಗವಟೂರು ಶ್ರೀ ಸಿದ್ಧೇಶ್ವರ ದೇವಸ್ಥಾನದ ಪಾರ್ಶ್ವದಲ್ಲಿರುವ ನದಿ ಪಾತ್ರದಲ್ಲಿ ಎಗ್ಗಿಲ್ಲದೇ ಮರಳು ದಂಧೆ ನಡೆಸುವುದು ಅಕ್ರಮ ಮರಳು ದಂಧೆಕೋರರಿಗೆ ದಿನಪ್ರತಿಯ ಕಸುಬಾಗಿದೆ. ಶರ್ಮಣ್ಯಾವತಿ (ಗವಟೂರು ಹೊಳೆ) ನದಿಯಿಂದ ಮರಳೆತ್ತುವ ಕಾರ್ಯದಲ್ಲಿ ಹೊರರಾಜ್ಯ ಬಿಹಾರದ ಹತ್ತಾರು ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ಟ್ಯೂಬ್, ಬಕೇಟ್, ಬುಟ್ಟಿಯನ್ನು ಉಪಯೋಗಿಸಿಕೊಂಡು ಹಗಲು ಹೊತ್ತಿನಲ್ಲಿ ನದಿ ಮಧ್ಯದಿಂದ ಮರಳನ್ನು ತೆಗೆದು ಸಂಗ್ರಹಿಸಿಟ್ಟುಕೊಂಡು ರಾತ್ರಿಯಾಗುತ್ತಿದ್ದಂತೆ ವಾಹನಗಳೊಂದಿಗೆ ಬೇರೆ ಬೇರೆ ತಾಲೂಕುಗಳಿಗೆ ಮರಳು ಸರಬರಾಜು ಮಾಡುವ ವಹಿವಾಟು ನಡೆಸಲಾಗುತ್ತಿದೆ ಇಲ್ಲಿ…
ವರದಕ್ಷಿಣೆಗಾಗಿ ಪತ್ನಿಯ ಬೆತ್ತಲೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ : ನಾಲ್ವರ ವಿರುದ್ಧ ಪ್ರಕರಣ ದಾಖಲು
ರಿಪ್ಪನ್ ಪೇಟೆ : ವರದಕ್ಷಿಣೆಗಾಗಿ ಬೆತ್ತಲೆ ವಿಡಿಯೋ ತೆಗೆದು ಬೆದರಿಕೆ ಹಾಕುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ, ಅತ್ತೆ-ಮಾವ ಸೇರಿದಂತೆ ನಾಲ್ವರ ವಿರುದ್ಧ ಮಹಿಳೆಯೊಬ್ಬರು ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶಂಗೇರಿಯ ವೆಲ್ ಕಮ್ ಗೇಟ್‌ನ ಸಂತ್ರಸ್ತೆಯ ಪತಿ ಸಲ್ಮಾನ್, ಅತ್ತೆ ಸಾಹೀರಾ, ಮಾವ ಶೌಕತ್ ಖಾನ್ ಮತ್ತು ನಾದಿನಿ ಸಮೀನಾ ವಿರುದ್ಧ ಪ್ರಕರಣ ದಾಖಲಾಗಿದೆ. ಹೊಸನಗರ ತಾಲೂಕಿನ ಹುಂಚ ಹೋಬಳಿಯ ಗ್ರಾಮವೊಂದರ ಸಂತ್ರಸ್ತೆಗೆ ಮತ್ತು ಶೃಂಗೇರಿ ವೆಲೆ ಕಮ್ ಗೇಟ್‌ನ ಸಲ್ಮಾನ್ ಜೊತೆ ವಿವಾಹ…
ಇಬ್ಬರ ಅಪಪ್ರಚಾರ : ಮೂರು ಜೀವಗಳು ಬಲಿ
ಮಹಿಳೆಯಿಂದ ಲಕ್ಷಾಂತರ ರೂ ಹಣ ಪಡೆದು ಹಣ ವಾಪಾಸ್ ಕೊಡದೆ ಸತಾಯಿಸುತ್ತಿದ್ದವನು ಹಣ ವಾಪಾಸ್ ಪಡೆಯಲು ಬಂದ ಮಹಿಳೆಯ ವಿರುದ್ಧ ಬೇರೆಯವರ ಜೊತೆ ಅನೈತಿಕ ಸಂಬಂಧವಿದೆ ಎಂದು ಅಪಪ್ರಚಾರ ಮಾಡಿದ್ದರ ಪರಿಣಾಮ ಬೇಸತ್ತ ಮಹಿಳೆ ಇಬ್ಬರು ಮಕ್ಕಳೊಂದಿಗೆ ಭದ್ರಾ ಚಾನೆಲ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ನಡೆದಿದೆ. ಸಂತೋಷ್ ಅರಹತೊಳಲು ಎಂಬಾತನು ಈ ಹಿಂದೆ ಯಡೇಹಳ್ಳಿ ವೀಣಾ (32) ಎಂಬುವರಿಂದ 8 ಲಕ್ಷ ರೂ.ಹಣ ಸಾಲವಾಗಿ ಪಡೆದಿದ್ದನು. ಹಣ ವಾಪಾಸ್ ಕೇಳಲು ಹೋದ ಸಂತೋಷ್…
ಮಾನವಿಯತೆ ಮೆರೆದ ಗೃಹ ಸಚಿವ ಆರಗ ಜ್ಞಾನೇಂದ್ರ
ತೀರ್ಥಹಳ್ಳಿ: ಸಚಿವರು ಇಂದು ಬೆಂಗಳೂರಿನಿಂದ ಬರುತ್ತಿರುವಾಗ ಮಾರ್ಗ ಮಧ್ಯದ ಬಿ ಆರ್ ಪಿಯಲ್ಲಿ ಮುತ್ತಿನಕೊಪ್ಪದ ದಂಪತಿಗಳು ಮಗುವಿನೊಂದಿಗೆ ಬೈಕ್ ನಲ್ಲಿ ತೆರಳುವಾಗ ಹಸುವಿಗೆ ಬೈಕ್ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಮಗುವಿಗೆ ಗಾಯವಾಗಿತ್ತು. ಅದೇ ಸಂದರ್ಭಕ್ಕೆ ಅದೇ ಮಾರ್ಗದಲ್ಲಿ ಅಲ್ಲಿಗೆ ಬಂದ ಸಚಿವರು ತಮ್ಮ ಬೆಂಗಾವಲು ವಾಹನದಲ್ಲಿ ಬಿ ಆರ್ ಪಿಯ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮಾನವಿಯತೆ ಮೆರೆದಿದ್ದಾರೆ. ಗೃಹ ಸಚಿವರ ಮಾನವೀಯತೆಯ ಕಾರ್ಯಕ್ಕೆ ಸಾಮಾಜಿಕ ಜಾಲಾತಾಣದಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.