ರಿಪ್ಪನ್ ಪೇಟೆ : ಪಟ್ಟಣದ ಸಮೀಪದ ಶರ್ಮಿಣ್ಯಾವತಿ ನದಿಯ (ಗವಟೂರು ಹೊಳೆ) ದಡದಲ್ಲಿ ಲಕ್ಷಾಂತರ ರೂಪಾಯಿ ಮರಳು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಮರಳು ಮಾಫಿಯಾದ ವಿರುದ್ಧ ಭಾನುವಾರ ಪೋಸ್ಟ್ ಮ್ಯಾನ್ ವರದಿ ಮಾಡಿತ್ತು. ಇದನ್ನು ಗಮನಿಸಿದ ಮರಳು ಮಾಫಿಯಾದವರು ಹಾಗೂ ಮರಳು ದಂಧೆಕೋರರು ಮರಳು ಸಂಗ್ರಹಣೆಗಾಗಿ ತಂದಿಟ್ಟಿದ್ದ ಪರಿಕರಗಳನ್ನು ತೆಗೆದುಕೊಂಡು ಕೆಲಸಗಾರರೊಂದಿಗೆ ಎಸ್ಕೇಪ್ ಆಗಿದ್ದಾರೆ.
ರಿಪ್ಪನ್ ಪೇಟೆಯಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಗವಟೂರು ಹೊಳೆಯಲ್ಲಿ ಮರಳು ಮಾಫಿಯಾದವರು ಮರಳು ಸಂಗ್ರಹ ಮಾಡುತ್ತಿರುವ ವಿಷಯ ಕಂದಾಯ,ಅರಣ್ಯ, ಪೊಲೀಸ್,ಭೂ ಮತ್ತು ಗಣಿ ವಿಜ್ಞಾನ ಇಲಾಖೆಯವರಿಗೆ ಗೊತ್ತಿದ್ದರೂ ಸಹ ಕಣ್ಣುಮುಚ್ಚಿ ಕುಳಿತುಕೊಂಡಿದ್ದರು. ಪ್ರತಿ ದಿನ ಲಕ್ಷಾಂತರ ರೂಪಾಯಿಗಳ ಮರಳು ಈ ಹೊಳೆಯ ದಡದಿಂದ ಸಾಗಾಣಿಕೆ ಆಗುತ್ತಿತ್ತು. ಹಾಗೆಯೇ ಕೆಲವು ಅಧಿಕಾರಿಗಳಿಗೆ ಸಂಭಾವನೆಯೂ ದೊರೆಯುತ್ತಿತ್ತು. ಮರಳು ಮಾಫಿಯಾದ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು ಸಹ ಅವರುಗಳು ಯಾವುದೇ ಕ್ರಮವನ್ನೂ ಕೈಗೊಳ್ಳದೇ ಕಣ್ಣು ಮುಚ್ಚಿ ಕುಳಿತುಕೊಂಡಿದ್ದರು.
ಈ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ ಪೋಸ್ಟ್ ಮ್ಯಾನ್ ಭಾನುವಾರ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಇದನ್ನು ಅರಿತ ಮರಳು ಮಾಫಿಯಾದವರು ಗವಟೂರು ಹೊಳೆಯ ದಡದಿಂದ ಎಸ್ಕೇಪ್ ಆಗಲೂ ಕೆಲವು ಅಧಿಕಾರಿಗಳು, ರಾಜಕಾರಣಿಗಳು, ಸಹಕಾರ ನೀಡಿದ್ದಾರೆ.
ಈ ಬಗ್ಗೆ ವರದಿ ಮಾಡದೇ ಇರಲು ಹಣದ ಆಮಿಷವು ಪೋಸ್ಟ್ ಮ್ಯಾನ್ ನ್ಯೂಸ್ ತಂಡಕ್ಕೆ ಬಂದಿದ್ದು ಅದನ್ನು ನಯವಾಗಿ ತಿರಸ್ಕರಿಸಲಾಗಿತ್ತು.
ಡೀಲ್ ಮಗಾ ಡೀಲ್ : ಕಳೆದ ಕೆಲವು ವಾರಗಳಿಂದ ಸದ್ದಿಲ್ಲದೆ ಗವ ಟೂರು ಹೊಳೆಯ ದಡದಲ್ಲಿ ನಡೆಯುತ್ತಿದ್ದ ಮರಳು ಮಾಫಿಯಾದವರಿಗೆ ಕೆಲವು ಅಧಿಕಾರಿಗಳು, ರಾಜಕಾರಣಿಗಳು ಸಾಥ್ ನೀಡುವ ಮೂಲಕ ಡೀಲ್ ಮಗ ಡೀಲ್ ನಲ್ಲಿ ತೊಡಗಿದ್ದರು.
ಸಂಪಾದಕೀಯ :
ಉತ್ತಮ ವರದಿಗಾರಿಕೆಯ ಕನಸಿನಲ್ಲಿ ಹೆಜ್ಜೆ ಇಟ್ಟಿರುವೆ,~ ಸಾಧ್ಯವಾಗದಿದ್ದಲಿ ಈ ಕ್ಷೇತ್ರವೇ ಬಿಡುವೆ ಹೊರತು ವರದಿಗಾರಿಕೆಯಲ್ಲಿ ಹಾದರ ಮಾಡುವುದಿಲ್ಲ.
By ರಫ಼ಿ ರಿಪ್ಪನ್ ಪೇಟೆ