ನಮಾಜು ಮುಗಿಸಿ ಹಿಂದಿರುಗುವಷ್ಟರಲ್ಲಿ ವಾಹನದಲ್ಲಿದ್ದ ಮೂವತ್ತು ಲಕ್ಷ ಕಳ್ಳತನ.? ಪೊಲೀಸರಿಂದ ಪರಿಶೀಲನೆ
ಶಿವಮೊಗ್ಗದಿಂದ ಮಂಗಳೂರಿಗೆ ಗುಜರಿ ಸಾಮಾನುಗಳನ್ನು ತರಲು ಹೋಗುತ್ತಿದ್ದ ವಾಹನವೊಂದನ್ನು ಎಸ್ಕೇಪ್ ಮಾಡಿ ಬೇರೆಡೆ ನಿಲ್ಲಿಸಿ ಹೋಗಿರುವ ಘಟನೆ ನಡೆದಿದ್ದು ಒಂದೆಡೆಯಾದರೆ ಆ ವಾಹನದಲ್ಲಿ ಇದ್ದ ಹಣವನ್ನು ಕೇಳಿ ಒಮ್ಮೆಲೇ ಎಲ್ಲರೂ ಬೆಚ್ಚಿ ಬೀಳುವ ಪರಿಸ್ಥಿತಿಗೆ ಬಂದಿರುವ ಘಟನೆ ರಂಜದಕಟ್ಟೆಯಲ್ಲಿ ಶುಕ್ರವಾರ ನಡೆದಿದೆ.
ಮುಳಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರಂಜದಕಟ್ಟೆಯ ಮಸೀದಿ ಬಳಿ ಗೂಡ್ಸ್ ವಾಹನವೊಂದನ್ನು ನಿಲ್ಲಿಸಿ ನಮಾಜ್ ಮಾಡಲು ತೆರಳಿದ್ದಾರೆ. ಆ ವಾಹನದಲ್ಲಿ ಬರೋಬ್ಬರಿ 30 ಲಕ್ಷ ಹಣ ಇತ್ತು ಎಂದು ಹೇಳಲಾಗಿದ್ದು ಈಗ ಆ ಹಣವನ್ನು ಯಾರೋ ಎಸ್ಕೇಪ್ ಮಾಡಿದ್ದಾರೆ. ಮಸೀದಿ ಎದುರು ನಿಲ್ಲಿಸಿದ್ದ ವಾಹನವನ್ನೇ ಎಸ್ಕೇಪ್ ಮಾಡಿರುವ ಕಳ್ಳರು ನಂತರ ಆ ವಾಹನವನ್ನು ಕೆಲವೇ ದೂರದಲ್ಲಿರುವ ಬಿಳುಕೊಪ್ಪ ಬಳಿ ವಾಹನ ನಿಲ್ಲಿಸಿ ಹಣವನ್ನು ಕದ್ದೋಯ್ದಿದ್ದಾರೆ ಎನ್ನಲಾಗಿದೆ.
ಅಷ್ಟೊಂದು ಹಣ ನಿಜವಾಗಿಯೂ ವಾಹನದೊಳಗೆ ಇತ್ತಾ? ಅಷ್ಟಕ್ಕೂ ಅಷ್ಟೊಂದು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಿದ್ದು ಯಾಕೆ? ಎಂಬ ಪ್ರೆಶ್ನೆ ಒಂದೆಡೆ ಯಾದರೆ ಹಣ ಇದ್ದ ವಿಚಾರ ತಿಳಿದಂತವರೇ ಯಾರೋ ಈ ಕೆಲಸ ಮಾಡಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ.
ಸ್ಥಳದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.