w
Headlines
Home » ಇಬ್ಬರ ಅಪಪ್ರಚಾರ : ಮೂರು ಜೀವಗಳು ಬಲಿ

ಇಬ್ಬರ ಅಪಪ್ರಚಾರ : ಮೂರು ಜೀವಗಳು ಬಲಿ

ಮಹಿಳೆಯಿಂದ ಲಕ್ಷಾಂತರ ರೂ ಹಣ ಪಡೆದು ಹಣ ವಾಪಾಸ್ ಕೊಡದೆ ಸತಾಯಿಸುತ್ತಿದ್ದವನು ಹಣ ವಾಪಾಸ್ ಪಡೆಯಲು ಬಂದ ಮಹಿಳೆಯ ವಿರುದ್ಧ ಬೇರೆಯವರ ಜೊತೆ ಅನೈತಿಕ ಸಂಬಂಧವಿದೆ ಎಂದು ಅಪಪ್ರಚಾರ ಮಾಡಿದ್ದರ ಪರಿಣಾಮ ಬೇಸತ್ತ ಮಹಿಳೆ ಇಬ್ಬರು ಮಕ್ಕಳೊಂದಿಗೆ  ಭದ್ರಾ ಚಾನೆಲ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ನಡೆದಿದೆ.

ಸಂತೋಷ್ ಅರಹತೊಳಲು ಎಂಬಾತನು ಈ ಹಿಂದೆ ಯಡೇಹಳ್ಳಿ ವೀಣಾ (32) ಎಂಬುವರಿಂದ 8 ಲಕ್ಷ ರೂ.ಹಣ ಸಾಲವಾಗಿ ಪಡೆದಿದ್ದನು. ಹಣ ವಾಪಾಸ್ ಕೇಳಲು ಹೋದ  ಸಂತೋಷ್ ಅರಹತೊಳಲು ಹಾಗೂ ಆಶಾ ಎಂಬುವರು ಸೇರಿ ವೀಣಾರಿಗೆ ಬೇರೆಯವರೊಂದಿಗೆ ಅನೈತಿಕ ಸಂಬಂಧವಿದೆ ಎಂದು ಅಪಪ್ರಚಾರ ಮಾಡಿದ್ದಾರೆ.

ಇಬ್ಬರ ಮಾತಿಗೆ ಮಾನಸಿಕವಾಗಿ ಕುಗ್ಗಿಹೋದ ವೀಣ ಈ ಬಗ್ಗೆ ಮನನೊಂದಿದ್ದರು. ಜ.13 ರಂದು ಸಂಕ್ರಾತಿ ಹಬ್ಬಕ್ಕೆ ಹೊಳಲೂರಿನಲ್ಲಿರುವ ತವರು ಮನೆಗೆ ಮಕ್ಕಳೊಂದಿಗೆ ಹೋಗುವುದಾಗಿ ಹೇಳಿ ಹಂಚಿನ ಸಿದ್ದಾಪುರದ ಬಳಿ 7 ವರ್ಷ ಮತ್ತು ಒಂದು ವರ್ಷದ ಹೆಣ್ಣುಮಕ್ಕಳೊಂದಿಗೆ ಭದ್ರಾ ಚಾನೆಲ್ ಗೆ ಹಾರಿದ್ದಾರೆ.



ವೀಣಾಳ ಮೃತ ದೇಹವು ಹೊನ್ನಾಳಿ ತಾಲ್ಲೂಕಿನ ಯಕ್ಕನಹಳ್ಳಿಯ ಹತ್ತಿರ ದೊರೆತಿದೆ. 7 ವರ್ಷದ ಮಗಳ ಮೃತದೇಹವು ಚನ್ನಗಿರಿಯ ನಲ್ಲೂರಿನ ಬಳಿ ಪತ್ತೆಯಾಗಿದೆ. ಎರಡೂ ಮೃತದೇಹವು ಭದ್ರಾ ಚಾನೆಲ್ ನಲ್ಲಿ ದೊರೆತಿದೆ. ಒಂದು ವರ್ಷದ ಮಗುವಿನ  ಮೃತದೇಹದ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ. ಮೃತ ವೀಣಾರವರ ಪತಿ ಸಂತೋಷ್ ರವರ ಹೇಳಿಕೆ ಮೇಲೆ ದೂರು ದಾಖಲಿಸಿಕೊಂಡಿರುವ ಹೊಳೆಹೊನ್ನೂರು ಪೊಲೀಸರು ಅಪಪ್ರಚಾರ ಮಾಡಿರುವ ಸಂತೋಷ್ ಅರಹತೊಳಲು ಇವರನ್ನ ಬಂಧಿಸಿದ್ದಾರೆ.

ಸಾಯುವ ವೇಳೆ ವೀಣಾರವರು ಡೆತ್ ನೋಟ್ ಬರೆದಿಟ್ಟಿದ್ದು  ನನ್ನ ಸಾವಿಗೆ ಸಂತೋಷ್ ಅರಹತೊಳಲು ಅವರ ಅಪಪ್ರಚಾರ, ಮಾನಸಿಕ ಕಿರುಕುಳದಿಂದ ಬೇಸತ್ತು ಸಾವನ್ನಪ್ಪುತ್ತಿದ್ದು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬರದಿಟ್ಟಿದ್ದಾರೆ. ಒಟ್ಟಿನಲ್ಲಿ ಅಪಪ್ರಚಾರಕ್ಕೆ ಮೂರು ಜೀವ ಬಲಿಯಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.