ಕುವೆಂಪು ವಿಶ್ವವಿದ್ಯಾಲಯ ಸೇರಿದಂತೆ ಇಡೀ ಶಂಕರಘಟ್ಟ ಗ್ರಾಮ ಸೀಲ್ ಡೌನ್ :

ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಕರಘಟ್ಟ ಗ್ರಾಮದ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಹಿನ್ನಲೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್ ಸೋಮವಾರ ಇಡೀ ಗ್ರಾಮವನ್ನು ‘ಕಂಟೈನ್‌ಮೆಂಟ್ ಜೋನ್’ ಎಂದು ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಶಂಕರಘಟ್ಟ ಗ್ರಾಮಕ್ಕೆ ಒಳಪಡಿಸುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಒಟ್ಟು ೨೪ ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಬಿ.ಪಿ ವೀರಭದ್ರಪ್ಪ ೫ ದಿನಗಳ ಕಾಲ ರಜೆ ಘೋಷಿಸಿದ್ದರು. ಈ ನಡುವೆ ಇದೀಗ ತಹಸೀಲ್ದಾರ್‌ರವರು ಸರ್ಕಾರದ ಮಾರ್ಗಸೂಚಿಯಂತೆ ಎನ್‌ಡಿಎಂಎ ಕಾಯ್ದೆಯಡಿ ಇಡೀ ಗ್ರಾಮವನ್ನು ‘ಕಂಟೈನ್‌ಮೆಂಟ್ ಜೋನ್’ ಎಂದು ಘೋಷಿಸಿದ್ದಾರೆ.

ಈ ವ್ಯಾಪ್ತಿಯಲ್ಲಿ ಒಟ್ಟು ೨೧೪ ವಾಸದ ಮನೆಗಳು, ಒಟ್ಟು ೨೫ ಅಂಗಡಿಮುಂಗಟ್ಟು, ಕಛೇರಿಗಳು ಇವೆ. ಒಟ್ಟು ೧೩೪೫ ಜನಸಂಖ್ಯೆಯನ್ನು ಒಳಗೊಂಡಿದೆ. ಕಂಟೈನ್‌ಮೆಂಟ್ ಜೋನ್ ನಿರ್ವಹಣೆ ಅಧಿಕಾರಿಯಾಗಿ ಬಿ.ಆರ್ ಪ್ರಾಜೆಕ್ಟ್ ಸಹಾಯಕ ಇಂಜಿನಿಯರ್(ಎ.ಇ) ರಾಜ್‌ಕುಮಾರ್ ಅವರನ್ನು ನೇಮಕಗೊಳಿಸಿದ್ದು, ಮೊ: ೯೭೪೨೭೬೮೦೯೮ ಸಂಖ್ಯೆ ಕರೆ ಮಾಡಬಹುದಾಗಿದೆ.



ಮಾಹಿತಿ ಕೃಪೆ : @ಸುದ್ದಿಲೈವ್

Leave a Reply

Your email address will not be published. Required fields are marked *