ರಿಪ್ಪನ್ ಪೇಟೆ : ಪಟ್ಟಣದ ಸಮೀಪದ ಗವಟೂರು ಶ್ರೀ ಸಿದ್ಧೇಶ್ವರ ದೇವಸ್ಥಾನದ ಪಾರ್ಶ್ವದಲ್ಲಿರುವ ನದಿ ಪಾತ್ರದಲ್ಲಿ ಎಗ್ಗಿಲ್ಲದೇ ಮರಳು ದಂಧೆ ನಡೆಸುವುದು ಅಕ್ರಮ ಮರಳು ದಂಧೆಕೋರರಿಗೆ ದಿನಪ್ರತಿಯ ಕಸುಬಾಗಿದೆ.
ಶರ್ಮಣ್ಯಾವತಿ (ಗವಟೂರು ಹೊಳೆ) ನದಿಯಿಂದ ಮರಳೆತ್ತುವ ಕಾರ್ಯದಲ್ಲಿ ಹೊರರಾಜ್ಯ ಬಿಹಾರದ ಹತ್ತಾರು ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ಟ್ಯೂಬ್, ಬಕೇಟ್, ಬುಟ್ಟಿಯನ್ನು ಉಪಯೋಗಿಸಿಕೊಂಡು ಹಗಲು ಹೊತ್ತಿನಲ್ಲಿ ನದಿ ಮಧ್ಯದಿಂದ ಮರಳನ್ನು ತೆಗೆದು ಸಂಗ್ರಹಿಸಿಟ್ಟುಕೊಂಡು ರಾತ್ರಿಯಾಗುತ್ತಿದ್ದಂತೆ ವಾಹನಗಳೊಂದಿಗೆ ಬೇರೆ ಬೇರೆ ತಾಲೂಕುಗಳಿಗೆ ಮರಳು ಸರಬರಾಜು ಮಾಡುವ ವಹಿವಾಟು ನಡೆಸಲಾಗುತ್ತಿದೆ
ಇಲ್ಲಿ ಅರಣ್ಯ ಪ್ರದೇಶಕ್ಕೆ ಅನ್ಯರಿಗೆ ಅವಕಾಶವಿಲ್ಲದಂತೆ ಕಂದಕವನ್ನು ನಿರ್ಮಿಸಿಕೊಂಡಿದ್ದರೂ ಕಂದಕವನ್ನು ಮುಚ್ಚಿ ರಸ್ತೆ ನಿರ್ಮಿಸಿಕೊಂಡ ದಂಧೆಕೋರರು ರಾಜಾರೋಷವಾಗಿ ತಮ್ಮ ಸಾಮ್ರಾಜ್ಯ ವಿಸ್ತರಿಸಿ ಕೊಂಡಿದ್ದಾರೆ. ದೇವಸ್ಥಾನಕ್ಕೆ ಪ್ರವೇಶಿಸುವ ರಸ್ತೆಗೆ ಗೇಟ್ ಅಳವಡಿಸಿ ಬೀಗ ಹಾಕಲಾಗಿದ್ದರೂ ನಿರಂತರವಾಗಿ ಅಕ್ರಮ ಮರಳು ವಹಿವಾಟು ನಡೆಯುತ್ತಿರುವ ಬಗ್ಗೆ ದೇವಸ್ಥಾನ ಸಮಿತಿಯವರು ಗಮನಹರಿಸದಿರುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.
ಸರ್ಕಾರಿ ಕಾಮಗಾರಿಗೆ ಬಳಸುವ ಉದ್ದೇಶದಿಂದ ಮರಳು ಸಂಗ್ರಹಿಸಲಾಗುತ್ತಿದೆ ಎಂಬುದು ಕೂಲಿಕಾರ್ಮಿಕನ ಅಭಿಪ್ರಾಯವಾಗಿತ್ತು. ಇದಕ್ಕೆ ಸಾಗರ ಮೂಲದ ಖಾಸಗಿ ವ್ಯಕ್ತಿಯೊಬ್ಬ ಕಿಂಗ್ ಪಿನ್ ಆಗಿದ್ದಾರೆ ಎಂದು ಇಲ್ಲಿ ಮರಳು ತೆಗೆಯುವ ವ್ಯಕ್ತಿಯ ಹೇಳುತ್ತಾನೆ.
ಸರ್ಕಾರಕ್ಕೊಂದು ನಿಯಮ ಜನಸಾಮಾನ್ಯರಿಗೊಂದು ನಿಯಮ ಮರಳು ನೀತಿಯಲ್ಲಿ ಅಳವಡಿಸಲಾಗಿದೆ ಎಂಬುದು ಗೊಂದಲಕ್ಕೆ ಎಡೆಮಾಡಿದೆ ಸರ್ಕಾರದ ಕೋಟ್ಯಂತರ ರೂಪಾಯಿ ರಾಜಧನವನ್ನು ನಷ್ಟಗೊಳಿಸಿ ಗುತ್ತಿಗೆದಾರರು ಲಾರಿ ಮಾಲೀಕರು ದಂಧೆಕೋರರು ಲಾಭ ಗಳಿಸಿಕೊಳ್ಳುತ್ತಿದ್ದಾರೆ ಅಕ್ರಮ ವ್ಯವಹಾರದಲ್ಲಿ ಮೌನ ಸಮ್ಮತಿ ನೀಡಿರುವ ಆಡಳಿತ ವ್ಯವಸ್ಥೆಯಿಂದ ಅಪಾರ ಪ್ರಮಾಣದ ಸಂಪತ್ತು ನಾಶವಾಗುತ್ತಿದೆ.
ಸ್ವಾಭಾವಿಕ ಖನಿಜ ಸಂಪತ್ತನ್ನು ಸಂರಕ್ಷಿಸುವ ಬೇಕಾಗಿದ್ದ ಗಣಿ ಮತ್ತು ಭೂವಿಜ್ಞಾನ, ಲೋಕೋಪಯೋಗಿ, ಕಂದಾಯ, ಅರಣ್ಯ, ಪೊಲೀಸ್ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳು ದಂಧೆಯನ್ನು ನಿಯಂತ್ರಿಸುವಲ್ಲಿ ಅಸಮರ್ಥರೋ ಅಥವಾ ಅಸಹಾಯಕರೋ ಎಂಬ ಜಿಜ್ಞಾಸೆ ಜನರಲ್ಲಿ ಮೂಡಿದ್ದು ಅಧಿಕಾರಿಗಳ ಗಮನದಲ್ಲಿ ಇದ್ದೆ ಅಕ್ರಮ ಮರಳು ದಂಧೆ ನಡೆಯುತ್ತಿದೆ ಆದ್ದರಿಂದಲೇ ಅಧಿಕಾರಸ್ಥರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಈ ಭಾಗದ ನಾಗರಿಕರು ಮಾಹಿತಿ ನೀಡುತ್ತಾರೆ.
ಚುನಾವಣಾ ಸಂದರ್ಭದಲ್ಲಿ ಅಕ್ರಮ ಮರಳು ಸಾಗಣೆ ಒಂದು ದೊಡ್ಡ ದೊಡ್ಡ ವಿಷಯವಾಗಿ ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪಗಳಿಗೆ ಎಡೆ ಮಾಡುವ ರಾಜಕಾರಣಿಗಳು ಇತರ ದಿನದಲ್ಲಿಯೂ ದಕ್ಷತೆ ಪ್ರದರ್ಶಿಸಿ ಪರಿಸರ ರಕ್ಷಣೆಗೆ ಮುಂದಾಗಬೇಕಾಗಿದೆ.
ಈ ಬಗ್ಗೆ ಉಪ ತಹಶಿಲ್ದಾರ್ ಹುಚ್ಚುರಾಯಪ್ಪ ಅವರ ಬಳಿ ಪ್ರಶ್ನಿಸಿದಾಗ ಅಕ್ರಮ ಮರಳು ಸಾಗಣೆ ನಿಯಂತ್ರಣಕ್ಕಾಗಿ ಟಾಸ್ಕ್ ಪೋರ್ಸ್ ರಚಿಸಲಾಗಿದ್ದು ಸೋಮವಾರದಿಂದ ಗಸ್ತು ತಿರುಗುವ ಮೂಲಕ ಅಕ್ರಮ ಸಾಗಣೆಗೆ ಕಡಿವಾಣ ಹಾಕಲಾಗುವುದು ಎಂದು ಹೇಳುವ ಮೂಲಕ ಕೋಟೆ ಲೂಟಿ ಆದ ನಂತರ ಕೋಟೆ ಬಾಗಿಲು ಹಾಕಿದ ಕಥೆಯನ್ನು ನೆನಪಿಸಿದ್ದಾರೆ.
ರಾಜಾರೋಷವಾಗಿ ಮರಳು ತೆಗೆಯುವ ವೀಡಿಯೋ ನೋಡಿ 👇👇👇👇👇👇👇