ಕ್ರೈಂ ಸುದ್ದಿ:
ಕಾಡುಕೋಣ ಭೇಟೆಯಾಡಿದ್ದ ಮೂವರ ಬಂಧನ
ಕಾಡುಕೋಣ ಭೇಟೆಯಾಡಿದ್ದ ಮೂವರ ಬಂಧನ ಹೊಸನಗರ : ತಾಲ್ಲೂಕಿನ ನಗರ ವಲಯಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕಾಡುಕೋಣ ಬೇಟೆಯಾಡಿ ಕಾಲು ತಲೆ ಮಾಂಸವನ್ನು ಬಿಡಿಸಿ ಕಾರಿನಲ್ಲಿ ಅಕ್ರಮ ಸಾಗಾಣಿಕೆ ಮಾಡಿರುವ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಅರೋಪಿಗಳು ನಾಪತ್ತೆಯಗಿದ್ದು ಅರೋಪಿಗಳ ಪತ್ತೆ ಹಚ್ಚುವಲ್ಲಿ ನಗರ ವಲಯ ಅರಣ್ಯದಿಕಾರಿಗಳ ತಂಡ ಯಶ್ವಸಿಯಾಗಿದೆ. ಆರೋಪಿಗಳಾದ ಮಹ ಮ್ಮದ್ ಆಶ್ರಫ್ ಮುಂಡಳ್ಳಿ ವಾಸಿ, ಭಟ್ಕಳ ತಾಲ್ಲೂಕು, ಉತ್ತರ ಕನ್ನಡ ಎ೨) ಯಾಸೀನ್, ಹಣಬರಕೇರಿ, ಶಿರೂರು ಗ್ರಾಮ, ಬೈಂದೂರು ತಾಲ್ಲೂಕು, ಉಡುಪಿ ಜಿಲ್ಲೆ…
RIPPONPETE | ಹೃದಯಾಘಾತದಿಂದ 35 ವರ್ಷದ ವ್ಯಕ್ತಿ ಸಾವು
RIPPONPETE | ಹೃದಯಾಘಾತದಿಂದ 35 ವರ್ಷದ ವ್ಯಕ್ತಿ ಸಾವು ರಿಪ್ಪನ್‌ಪೇಟೆ : ಹೃದಯಾಘಾತದಿಂದ 35 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಗವಟೂರು ಗ್ರಾಮದಲ್ಲಿ ನಡೆದಿದೆ. ಗವಟೂರು ಗ್ರಾಮದ ಹಳೂರು ನಿವಾಸಿ ನಾಗೇಶ್ (35) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಶುಕ್ರವಾರ ಬೆಳಗಿನಜಾವ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಆದರೆ ಅಷ್ಟರಲ್ಲಾಗಲೇ ನಾಗೇಶ್ ಮೃತಪಟ್ಟಿದ್ದಾರೆ. ಮೃತರು ಪತ್ನಿ , ಒರ್ವ ಪುತ್ರ , ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ…
ಬೈಕ್ ಅಪಘಾತ – ಯುವಕ ಸಾವು
ಬೈಕ್ ಅಪಘಾತ – ಯುವಕ ಸಾವು ಬೈಕ್ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಸ್ಪಾಡಿ ಬಳಿ ನಡೆದಿದೆ. ತ್ಯಾಗರ್ತಿಯ ಚಿಕ್ಕಬಿಲಗುಂಜಿ ಗ್ರಾಮದ ಪ್ರಜ್ವಲ್ (20) ಮೃತ ಯುವಕ. ತ್ಯಾಗರ್ತಿ ಮಾರಿಕಾಂಬಾ ಜಾತ್ರೆಗೆ ಮನೆಗೆ ಬಂದಿದ್ದ ಸಂಬಂಧಿಕರನ್ನು ಊರಿಗೆ ಬಿಟ್ಟು ವಾಪಾಸ್ ಆಗುವ ಸಂದರ್ಭದಲ್ಲಿ ಕಾಸ್ಪಾಡಿ ಬಳಿ ಬೈಕ್ ಅಪಘಾತಗೊಂಡ ಘಟನೆ ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಕೂಡಲೇ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಸಾಗಿಸುವ…
ನನ್ನ ಪತ್ನಿಗೆ ಯಾಕೆ ಮೆಸೇಜ್ ಮಾಡ್ತೀಯಾ? ಎಂದು ಪ್ರಶ್ನಿಸಿದ್ದಕ್ಕೆ ಖಾರದ ಪುಡಿ ಎರಚಿ ಚಾಕು ಚುಚ್ಚಿದ ಸ್ನೇಹಿತ!
ನನ್ನ ಪತ್ನಿಗೆ ಯಾಕೆ ಮೆಸೇಜ್ ಮಾಡ್ತೀಯಾ? ಎಂದು ಪ್ರಶ್ನಿಸಿದ್ದಕ್ಕೆ ಖಾರದ ಪುಡಿ ಎರಚಿ ಚಾಕು ಚುಚ್ಚಿದ ಸ್ನೇಹಿತ! ಹಾಡಹಗಲೇ ಗೆಳೆಯನೊಬ್ಬ ತನ್ನ ಸ್ನೇಹಿತನ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗದ ಶರಾವತಿ ನಗರದ ಪಾಂಡುರಂಗ ದೇಗುಲದ ಬಳಿ ನಡೆದಿದೆ. ಅರುಣ್ ಎಂಬಾತ ತನ್ನ ಸ್ನೇಹಿತ ಅರುಣ್ ಎಂಬಾತನಿಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ರವಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ತಾಲೂಕಿನ ಕೋಟೆಗಂಗೂರಿನಲ್ಲಿ ಡ್ರೈವರ್ ಕೆಲಸ ಮಾಡುವ ರವಿ (34)…
ಎರಡು ಪ್ರತ್ಯೇಕ ಪ್ರಕರಣ – ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ
ಎರಡು ಪ್ರತ್ಯೇಕ ಪ್ರಕರಣ – ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ ಶಿವಮೊಗ್ಗ,: ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ದಾಳಿ ನಡೆದಿದೆ. ಎರಡು ಪ್ರತ್ಯೇಕ ದಾಳಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಜೆ. ಹೆಚ್. ಪಟೇಲ್ ಬಡಾವಣೆ ತುಂಗಾ ಚಾನಲ್ ದಂಡೆಯಲ್ಲಿ ವ್ಯಕ್ತಿಯೊಬ್ಬನು ದ್ವಿಚ ಕ್ರ ವಾಹನವನ್ನು ನಿಲ್ಲಿಸಿಕೊಂಡು, ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದ್ದು ಗಾಂಜಾ ಮಾರಾಟ ಮಾಡುತ್ತಿದ್ದ ಸಾಗರ ತಾಲೂಕಿನ ಬಿಲಗೋಡಿ ಗ್ರಾಮದ ಪ್ರತಾಪ್ ಎಸ್,…
ವ್ಹೀಲಿಂಗ್ ಮಾಡಿದ ಯುವಕನಿಗೆ 5 ಸಾವಿರ ರೂ. ದಂಡ
ವ್ಹೀಲಿಂಗ್ ಮಾಡಿದ ಯುವಕನಿಗೆ 5 ಸಾವಿರ ರೂ. ದಂಡ ಶಿವಮೊಗ್ಗ: ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆಯೇ ವೀಲಿಂಗ್ ಮಾಡಿ ಸಿಕ್ಕಿಬಿದ್ದ ಸವಾರನಿಗೆ 5 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ. ಶಿವಮೊಗ್ಗ ನಗರದ ಗಾರ್ಡನ್ ಏರಿಯಾದ ಗೌರವ್ಲಾಡ್ಜ್ ಸಮೀಪ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ತಿರುಮಲೇಶ್ ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೈಕ್ ಸವಾರನೋರ್ವ ವೀಲಿಂಗ್ ಮಾಡಿದ್ದನು. ಆತನ ವಿರುದ್ಧ ಪೊಲೀಸರು ನೋಟೀಸ್ ನೀಡಿದ್ದು, ಇದೀಗ ಶಿವಮೊಗ್ಗದ ಜಿಲ್ಲಾ…
ಅಕ್ರಮ ಮರಳು ಅಡ್ಡೆ ಮೇಲೆ ದಿಡೀರ್ ದಾಳಿ
ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ದಿಡೀರ್ ದಾಳಿ ಅಕ್ರಮವಾಗಿ ಮರಳು (Sand) ಸಾಗಣೆ ಮಾಡುತ್ತಿದ್ದ ಆರೋಪದ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಳೆದ ರಾತ್ರಿ ದಿಢೀರ್ ದಾಳಿ ನಡೆಸಿದ್ದಾರೆ. ಈ ಸಂದರ್ಭ ಅಧಿಕಾರಿಗಳನ್ನು ಕಂಡು ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ನಿಲ್ಲಿಸದೆ ಪರಾರಿಯಾಗಿದ್ದಾನೆ. ಆದರೆ ಜೆಸಿಬಿಯೊಂದು ಸಿಕ್ಕಿಬಿದ್ದಿದೆ. ಶಿವಮೊಗ್ಗ ತಾಲೂಕು ಹಾಡೋನಹಳ್ಳಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ನದಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆ ಗಣಿ ಮತ್ತು ಭೂ…
ನದಿಯ ದಡದಲ್ಲಿ ರುಂಡವಿಲ್ಲದ ಶವ ಪತ್ತೆ
ನದಿಯ ದಡದಲ್ಲಿ ರುಂಡವಿಲ್ಲದ ಶವ ಪತ್ತೆ ಶಿವಮೊಗ್ಗ: ತಲೆಯಿಲ್ಲದ ಅನಾಮಧೇಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಬೇಡರಹೊಸಹಳ್ಳಿಯ ತುಂಗ ನದಿಯ ದಡದಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಪತ್ತೆಯಾದ ಮೃತದೇಹದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಬೇಡರಹೊಸಹಳ್ಳಿಯ ಬಸರಾಜ ಗೌಡರ ಅಡಿಕೆ ತೋಟದ ಹಿಂಭಾಗದಲ್ಲಿ ಹರಿಯುವ ತುಂಗ ನದಿಯ ದಡದಲ್ಲಿ ಕಲ್ಲು ಮಣ್ಣಿನ ದಿಣ್ಣೆಯಲ್ಲಿ ಪತ್ತೆಯಾಗಿದೆ. ಸಾರ್ವಜನಿಕರು ನೋಡಿ ತೋಟದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಅನಾಮಧೇಯ ಶವದ ಬಗ್ಗೆ ಹಲವು ಶಂಕೆಗಳನ್ನ ವ್ಯಕ್ತಪಡಿಸಲಾಗಿದೆ ಈ…
ಕೆಲಸದ ಆಮಿಷವೊಡ್ಡಿ ಲಾಡ್ಜ್ ನಲ್ಲಿ ಮಹಿಳೆಯ ಅಕ್ರಮ ಬಂಧನ
ಕೆಲಸದ ಆಮಿಷವೊಡ್ಡಿ ಲಾಡ್ಜ್ ನಲ್ಲಿ ಮಹಿಳೆಯ ಅಕ್ರಮ ಬಂಧನ ಶಿವಮೊಗ್ಗ: ಜಿಲ್ಲೆಯ ಮಹಿಳೆಯೊಬ್ಬರಿಗೆ ಕೆಲಸ ಕೊಡಿಸುವುದಾಗಿ ವಂಚಿಸಿದ್ದಷ್ಟೆ ಅಲ್ಲದೆ ಆಕೆಯನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ ಆರೋಪವೋಂದು ಉಡುಪಿಯಲ್ಲಿ ಕೇಳಿಬಂದಿದೆ. ಪ್ರಕರಣದಲ್ಲಿ ಲಾಡ್ಜ್‌ವೊಂದರಿಂದ ಬಂಧಿಯಾಗಿದ್ದ ಸಂತ್ರಸ್ತೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಉಡುಪಿಯ ಕಿನ್ನಿಮುಲ್ಕಿ ಎಂಬಲ್ಲಿ ಲಾಡ್ಜ್‌ವೊಂದರಲ್ಲಿಯಲ್ಲಿ ಮಹಿಳೆಯೊಬ್ಬಳನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿತ್ತು. ಅಲ್ಲದೆ ಆಕೆಯನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಶಿವಮೊಗ್ಗ ಮೂಲದ ಮಹಿಳೆಯನ್ನು, ಕೆಲಸ ಕೊಡಿಸುವ ನೆಪದಲ್ಲಿ ಇಲ್ಲಿಕೆ ಕರೆತಂದಿದ್ದ ವ್ಯಕ್ತಿಯು ಆಕೆಯನ್ನ ವೇಶ್ಯಾವಾಟಿಕೆಗೆ ತಳ್ಳಲು ಮುಂದಾಗಿದ್ದ. ಈ…
ಸಾಲಬಾಧೆಗೆ ಬೇಸತ್ತು ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ
ಸಾಲಬಾಧೆಗೆ ಬೇಸತ್ತು ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ ರಿಪ್ಪನ್‌ಪೇಟೆ : ಸಾಲಬಾಧೆಗೆ ಬೇಸತ್ತು ರೈತರೊಬ್ಬರು ತಮ್ಮದೇ ಅಡಿಕೆ ತೋಟದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹರತಾಳು ಗ್ರಾಪಂ ವ್ಯಾಪ್ತಿಯ ಕೆ ಹುಣಸವಳ್ಳಿ ಘನಂದೂರು ಗ್ರಾಮದ ಪುಟ್ಟನಾಯ್ಕ್ (80) ಮೃತ ದುರ್ಧೈವಿಯಾಗಿದ್ದಾರೆ. ಮೃತ ಪುಟ್ಟನಾಯ್ಕ್ ರವರು ಕೃಷಿ ಉದ್ದೇಶದಿಂದ ಸಾಲ ಮಾಡಿದ್ದು ಬೆಳೆ ನಷ್ಟದಿಂದ ಸಾಲ ಕಟ್ಟಲಾಗದೇ ಬ್ಯಾಂಕ್ ಹಾಗೂ ಸಂಘ ಸಂಸ್ಥೆಗಳಲ್ಲಿ ಸಾಲಕ್ಕೆ ಬಡ್ಡಿ ಹೆಚ್ಚಾದ ಕಾರಣ ಬೇಸತ್ತಿದ್ದರು ಎನ್ನಲಾಗಿದೆ. ಇವರಿಗೆ ಕೃಷ್ಣ…