ರಿಪ್ಪನ್‌ಪೇಟೆ – ಕೊಳೆತ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ|deadbody
ರಿಪ್ಪನ್‌ಪೇಟೆ – ಕೊಳೆತ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ
ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯ ಬೆಟ್ಟಿನಕೆರೆ ಗ್ರಾಮದ ಮನೆಯೊಂದರಲ್ಲಿ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೆಟ್ಟಿನಕೆರೆ ನಿವಾಸಿ ಜೋಸ್ (ಆಲುವ) ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನಲಾಗುತಿದೆ.
ಈತನು ಮನೆಯಲ್ಲಿ ಒಬ್ಬನೇ ವಾಸ ಮಾಡುತಿದ್ದು ಪತ್ನಿ ಮತ್ತು ಮಕ್ಕಳು ಹಲವು ವರ್ಷಗಳ ಹಿಂದೆಯೇ ಈತನನ್ನು ಬಿಟ್ಟು ಹೋಗಿದ್ದರು.
ಮನೆಯಲ್ಲಿ ಒಬ್ಬನೇ ವಾಸ ಮಾಡುತಿದ್ದ ಈತನು ನಾಲ್ಕು ದಿನಗಳ ಹಿಂದೆ ಈತ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ.
ಈತ ಮನೆಮನೆಗೆ ಹಾಲು ವ್ಯಾಪಾರ ಮಾಡುತಿದ್ದನು. ನಾಲ್ಕು ದಿನಗಳಿಂದ ಹಾಲು ಕೊಡದ ಹಿನ್ನಲೆಯಲ್ಲಿ ಇಂದು ಅವರ ಮನೆಗೆ ಹೋಗಿ ನೋಡಿದಾಗ ಮನೆಯ ಒಳಗ ಕೊಳೆತ ಸ್ಥಿಯಲ್ಲಿ ಶವ ಪತ್ತೆಯಾಗಿದೆ.
ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತಿದ್ದಾರೆ.
ಇದು ಸಹಜ ಸಾವೋ ಅಥವಾ ಕೊಲೆಯೋ ಎಂಬುವುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ.


