w
Headlines
Home » ರಿಪ್ಪನ್‌ಪೇಟೆ : ತಾವರೆಕೆರೆ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವನ ಸ್ಥಿತಿ ಗಂಭೀರ – ಐವರು ಗಾಯಾಳು ಮೆಗ್ಗಾನ್ ಗೆ|accident

ರಿಪ್ಪನ್‌ಪೇಟೆ : ತಾವರೆಕೆರೆ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವನ ಸ್ಥಿತಿ ಗಂಭೀರ – ಐವರು ಗಾಯಾಳು ಮೆಗ್ಗಾನ್ ಗೆ|accident

ರಿಪ್ಪನ್ ಪೇಟೆ : ಇಲ್ಲಿನ ಹೊಸನಗರ ರಸ್ತೆಯ ತಾವರೆಕೆರೆ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.




ರಿಪ್ಪನ್‌ಪೇಟೆ ಕಡೆಯಿಂದ ಬಿಳಿಕಿ ಗ್ರಾಮಕ್ಕೆ ತೆರಳುತಿದ್ದ ಬೈಕ್ ಹಾಗೂ ಜೇನಿ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಬೈಕ್ ನಡುವೆ ತಾವರೆಕೆರೆ ಸಮೀಪದಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ.

ಈ ರಸ್ತೆ ಅಪಘಾತದಲ್ಲಿ ಪಟ್ಟಣದ ಸಮೀಪದ ಬಿಳಿಕಿ ಗ್ರಾಮದ ರಾಕೇಶ್ ಎಂಬ ವ್ಯಕ್ತಿಯ ತಲೆಗೆ ತೀವ್ರವಾದ ಪೆಟ್ಟಾಗಿದ್ದು ಕಾಲು ಮುರಿದು ಸ್ಥಿತಿ ಗಂಭೀರವಾಗಿದೆ.




ಅದೇ ಬೈಕಿನಲ್ಲಿದ್ದ ಕೆದಲುಗುಡ್ಡೆ ನಿವಾಸಿ ಪ್ರೇಮಚಂದ್ರ ಎಂಬಾತನಿಗೆ ಕಾಲು ಮುರಿದಿದ್ದು ಮತ್ತೊಬ್ಬ ಬಿಳಿಕಿ ಗ್ರಾಮದ ಷಣ್ಮುಖ ಎಂಬಾತನಿಗೆ ಬೆನ್ನು ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿದೆ.ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿದೆ

ಎದುರು ಬೈಕ್ ನಲ್ಲಿ ಬರುತಿದ್ದ ಚಿಕ್ಕ ಜೇನಿ ಗ್ರಾಮದ ಗಣೇಶ್ವರಪ್ಪ ಗೌಡ ಹಾಗೂ ವೀರೇಂದ್ರ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.




ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.