ಶಿವಮೊಗ್ಗ ಜಿಲ್ಲೆಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಪ್ರೀತಿಸಬೇಕು ಎಂದು ಪಾಗಲ್ ಪ್ರೇಮಿಯೊಬ್ಬ ಹಿಂಸೆ ನೀಡಿದ ಹಿನ್ನಲೆಯಲ್ಲಿ ಶಿವಮೊಗ್ಗ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿನಿ ಕಾಲೇಜಿನ ಬಳಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ, ಆಕೆಯನ್ನು ಅಡ್ಡಗಟ್ಟಿದ ಯುವಕ ಆಕೆಗೆ ಪ್ರೀತಿಸಬೇಕು ಎಂದು ಹಿಂಸೆ ನೀಡಿದ್ದಾನೆ. ಅಲ್ಲದೆ ಪ್ರೀತಿಸದಿದ್ದರೇ ಆಸಿಡ್ ಹಾಕುವುದಾಗಿ ಬೆದರಿಕೆಯನ್ನು ಸಹ ಒಡ್ಡಿದ್ದಾನೆ ಎನ್ನಲಾಗಿದೆ.
ಆಕೆಯ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ತಕ್ಷಣ ಅಲ್ಲಿದ್ದ ಸ್ಥಳೀಯರು ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಜನ ಸೇರುತ್ತಲೇ ಎಸ್ಕೇಪ್ ಆಗಿರುವ ಯುವಕನನ್ನ ಸದ್ಯ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಹುಡುಕುತ್ತಿದ್ದಾರೆ.