ಶಿವಮೊಗ್ಗ : ಸ್ನೇಹಿತರೊಂದಿಗೆ ನದಿಗೆ ಈಜಲು ತೆರಳಿದ್ದ ಬಾಲಕ ತುಂಗಾ ನದಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಯೂಸಫ್ (14) ಮೃತಪಟ್ಟಿರುವ ಯುವಕನಾಗಿದ್ದಾನೆ.
ಯೂಸುಫ್ ಇಂದು ಮೂವರು ಸ್ನೇಹಿತರೊಂದಿಗೆ ನದಿಗೆ ಈಜಲು ಹೋಗಿ ನೀರು ಪಾಲಾಗಿದ್ದನು,ಆತನ ಸ್ನೇಹಿತರು ಸ್ಥಳೀಯರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಹುಡುಕಾಟ ಆರಂಭಿಸಿದ್ದರು ಸುಮಾರು ಒಂದುವರೆ ಗಂಟೆ ಹುಡುಕಾಟ ನಡೆಸಿದ ನಂತರ ಮೃತದೇಹ ದೊರಕಿದೆ.ತಕ್ಷಣವೇ ಮೆಗ್ಗಾನ್ ಗೆ ಕರೆದೊಯ್ಯಲಾಗಿದೆ. ವೈದ್ಯರು ಆತನ ಸಾವನ್ನ ದೃಢಪಡಿಸಿದ್ದಾರೆ.
ಯುವಕನ ಮೃತದೇಹವನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷಾ ಕೊಠಡಿಯಲ್ಲಿರಿಸಲಾಗಿದೆ.
ನಗರದ ಟಿಪ್ಪು ನಗರ 5ನೇ ಕ್ರಾಸ್ ಕೆಕೆ ಶೆಡ್ ಹತ್ತಿರ ವಾಸವಾಗಿರುವ ಯೂಸುಫ್ (14) 9ನೇ ತರಗತಿಯ ವಿದ್ಯಾರ್ಥಿಯಾಗಿದ್ದನು.
ತುಂಗ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ದೂರು ದಾಖಲಿಸಲಾಗಿದೆ.