ಹೊಸನಗರ : ಜೇನು ಹುಳುಗಳ ದಾಳಿಯಿಂದ 6 ಜನ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಸಮೀಪದ ಮಳಲಿ ಗ್ರಾಮದಲ್ಲಿ ನಡೆದಿದೆ.
ಕೋಣಂದೂರು ಮೂಲದ ಒಂದೇ ಕುಟುಂಬದ 9 ಜನ ಮಳಲಿ ಗ್ರಾಮದಲ್ಲಿ ಫಿಶಿಂಗ್ ಮಾಡಲು ತೆರಳಿದ್ದಾರೆ.ಮಧ್ಯಾಹ್ನ ಕೆರೆಯ ಏರಿಯ ಮೇಲೆ ಊಟ ಮಾಡುತ್ತಿರುವಾಗ ಏಕಾಏಕಿ ಜೇನುನೊಣಗಳು ದಾಳಿ ಮಾಡಿದ್ದು ಆರು ಜನರಿಗೆ ಗಂಭೀರ ಗಾಯಗಳಾಗಿವೆ.
ಕೋಣಂದೂರಿನ ಫಯಾಜ್ ಮತ್ತು ಇಂತಿಯಾಜ್ ಕುಟುಂಬ ಭಾನುವಾರವಾದ ಹಿನ್ನಲೆಯಲ್ಲಿ ಕುಟುಂಬದೊಂದಿಗೆ ಮಳಲಿ ಗ್ರಾಮದಲ್ಲಿ ಫಿಶಿಂಗ್ ಮಾಡಲು ತೆರಳಿದ್ದರು ಎನ್ನಲಾಗುತ್ತಿದೆ.
ಗಾಯಾಳುಗಳನ್ನು ಹೊಸನಗರ ಆಸ್ಪತ್ರೆಯಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಯಿತು.