ತೀರ್ಥಹಳ್ಳಿ : ಪಟ್ಟಣದ ಹೊಸ ಕೋರ್ಟ್ ಬಳಿ ಲಾರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ.
4 ದಿನಗಳ ಹಿಂದೆಯೇ ಲಾರಿಯಲ್ಲೇ ಹೃದಯಾಘಾತದಿಂದ ಸಾವನಪ್ಪಿರಬಹುದು ಎಂದು ಹೇಳಲಾಗುತ್ತಿದೆ.
ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯಿಂದ ಲಾರಿಯಲ್ಲಿ ಲೋಡ್ ತುಂಬಿಸಿಕೊಂಡು ಬಂದು ತೀರ್ಥಹಳ್ಳಿಯಲ್ಲಿ ಇಳಿಸಿ ರಾತ್ರಿ ಊಟ ಮಾಡಿ ಲಾರಿಯಲ್ಲಿ ಮಲಗಿದ್ದಾಗ ಹೃದಯಘಾತವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.
ಅಂದಾಜು 50 ವರ್ಷದ ವ್ಯಕ್ತಿ ಎನ್ನಲಾಗುತಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜೆಸಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.