ಶಿವಮೊಗ್ಗ : ಒಂದು ವರ್ಷ 2 ತಿಂಗಳ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ಇದು ಆತ್ಮಹತ್ಯೆ ಎಂದು ಗಂಡನ ಮನೆಯ ಕಡೆಯವರು ಹೇಳಿದರೆ ಯುವತಿಯ ತವರು ಮನೆಯವರು ಇದು ಕೊಲೆ ಎಂದು ಆರೋಪಿಸಿದ್ದಾರೆ.
ಸೋಮವಾರ ಸಂಜೆ ನಗರದ ಪ್ರತಿಷ್ಠಿತ ದೇವಸ್ಥಾನಕ್ಕೆ ವಾಲಗ ಊದಲು ಪತಿ ಚಂದ್ರಶೇಖರ್ ಸಿದ್ದರಾಗುತ್ತಿದ್ದು ಆ ವೇಳೆ ಯಾವುದೊ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಸ್ನಾನದ ಮನೆಗೆ ಪತಿ ಹೋದಾಗ ಪತ್ನಿ ಧನ್ಯಶ್ರೀ ನೇಣು ಹಾಕಿಕೊಂಡಿದ್ದಾರೆ ಎಂದು ಗಂಡನ ಮನೆಯವರು ಹೇಳಿದ್ದಾರೆ.
ಧನ್ಯಶ್ರೀ(23) ಎನ್ ಆರ್ ಪುರದ ಯುವತಿ ಆಗಿದ್ದು, ಆರ್ ಎಂಎಲ್ ನಗರದ ಸ್ವಂತ ಮನೆಯಲ್ಲಿ ಈ ಘಟನೆ ನಡೆದಿದೆ. ಬೆಡ್ ರೂಮ್ ನಲ್ಲಿ ಸೀರೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಪತಿಯ ಮನೆಯವರು ತಿಳಿಸಿದ್ದಾರೆ.
ಆದರೆ ಧನ್ಯಶ್ರೀ ತವರು ಮನೆಯವರು ಇದು ಕೊಲೆ ಎಂದು ಬಣ್ಣಿಸಿದೆ. ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರುವುದು ನಮಗೆ ತೋರಿಸಿಲ್ಲ. ಹಾಗಾಗಿ ಇವರ ಮಾನಸಿಕ ಕಿರುಕುಳದಿಂದ ಸಾವನ್ನಪ್ಪಿದ್ದಾಳೆ ಎಂದು ಧನ್ಯಶ್ರೀ ಕುಟುಂಬ ಆಗ್ರಹಿಸಿದೆ.