ಅಪರೂಪದ ವನ್ಯಜೀವಿ ಪ್ಲಾಪ್ ಶೆಲ್ ಆಮೆ ಅಕ್ರಮ ಮಾರಾಟಕ್ಕೆ ಯತ್ನ – ಮಾಲು ಸಮೇತ ಓರ್ವನ ಬಂಧನ|arrested

ರಿಪ್ಪನ್‌ಪೇಟೆ : ಅಪರೂಪದ ವನ್ಯಜೀವಿ ಪ್ಲಾಪ್ ಶೆಲ್ ಆಮೆಯನ್ನು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.




ಅಪರೂಪದ ವನ್ಯ ಜೀವಿಯಾದ ಭಾರತೀಯ ಫ್ಲಾಪ್‌ಶೆಲ್ ಆಮೆ( ಲಿಸ್ಸೆಮಿಸ್ ಪಂಕ್ಟೇಟ್) ಸರೀಸೃಪವನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಆರೋಪಿ ಚಂದ್ರಹಾಸ್ ಎಂಬಾತನನ್ನು ಆಯನೂರು – ಹಾರನಹಳ್ಳಿ ರಾಜ್ಯ ಹೆದ್ದಾರಿ ಸಮೀಪದಲ್ಲಿ ಬಂಧಿಸಿ ವನ್ಯಜೀವಿಯನ್ನು ರಕ್ಷಿಸಲಾಗಿದೆ.


ಭಾರತೀಯ ಫ್ಲಾಪ್‌ಶೆಲ್ ಆಮೆಯನ್ನು ರಕ್ಷಣೆ (ಲಿಸ್ಸೆಮಿಸ್ ಪಂಕ್ಟೇಟ್)ಮಾಡಿ   ವನ್ಯಜೀವಿ ಸಂರಕ್ಷಣಾ ಕಾಯಿದೆ 1972  ರ  ಪ್ರಕಾರ ಪ್ರಕರಣ ದಾಖಲಿಸಿ ಆರೋಪಿ ಚಂದ್ರಹಾಸ್ ನನ್ನು  ಸೋಮವಾರ ಸಂಜೆ ಬಂಧಿಸಿ ನ್ಯಾಯಲಯದ  ವಶಕ್ಕೆ  ನೀಡಿದ್ದಾರೆ.




ಕಾರ್ಯಾಚರಣೆಯಲ್ಲಿ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್  ಸಬ್ ಇನ್ಸ್ಪೆಕ್ಟರ್ ವಿನಾಯಕ ಮತ್ತು ಸಿಬ್ಬಂದಿಯವರುಗಳಾದ  ಗಣೇಶ್,ಗಿರೀಶ್ ವಿಶ್ವನಾಥ ಕೃಷ್ಣ ಮತ್ತು ದಿನೇಶ, ಮಹೇಶ್  ಚೈತ್ರ ಪಾಲ್ಗೊಂಡಿದ್ದರು.



Leave a Reply

Your email address will not be published. Required fields are marked *