RIPPONPETE | ಚಾಲಕನ ನಿಯಂತ್ರಣ ತಪ್ಪಿ ಬೈಕ್ ಅಪಘಾತ – ಓರ್ವ ಸ್ಥಳದಲ್ಲಿಯೇ ಸಾವು

RIPPONPETE | ಚಾಲಕನ ನಿಯಂತ್ರಣ ತಪ್ಪಿ ಬೈಕ್ ಅಪಘಾತ – ಓರ್ವ ಸ್ಥಳದಲ್ಲಿಯೇ ಸಾವು ರಿಪ್ಪನ್ ಪೇಟೆ : ಕರು ತಪ್ಪಿಸಲು ಹೋಗಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ರಿಪ್ಪನ್ ಪೇಟೆ ಸಮೀಪದ ಮೂಗೂಡ್ತಿಯಲ್ಲಿ ನಡೆದಿದೆ. ಮೂಗೂಡ್ತಿ ನಿವಾಸಿ ಅರುಣ್(38) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಮೂಗೂಡ್ತಿ ಅರಣ್ಯ ಇಲಾಖೆಯ ಕಛೇರಿ ಮುಂಭಾಗದಲ್ಲಿ ಎದುರಿಗೆ ಬಂದ ಕರುವನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಲೈಟ್ ಕಂಬಕ್ಕೆ ಡಿಕ್ಕಿಯಾದ…

Read More

ಬೈಕ್‌ ಖರೀದಿಗೆ ಬಂದವನು ಟ್ರಯಲ್‌ ನೋಡಲು ಹೋಗಿ ಬೈಕ್ ನೊಂದಿಗೆ ನಾಪತ್ತೆ 

ಬೈಕ್‌ ಖರೀದಿಗೆ ಬಂದವನು ಟ್ರಯಲ್‌ ನೋಡಲು ಹೋಗಿ ಬೈಕ್ ನೊಂದಿಗೆ ನಾಪತ್ತೆ  ಶಿವಮೊಗ್ಗ: ಬೈಕ್‌ ಖರೀದಿಗೆ ಬಂದವನು ಟ್ರಯಲ್‌ ನೋಡಲು  ಬೈಕ್ ಒಯ್ದ,  ಅದರೊಂದಿಗೆ ನಾಪತ್ತೆಯಾದ ಘಟನೆ ನಗರದಲ್ಲಿ ಸಂಭವಿಸಿದೆ. ಬೈಕ್‌ ಮಾಲೀಕ ಈ ಬಗ್ಗೆ ದೂರು ನೀಡಿರು ಘಟನೆ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸನಗರದ ಪ್ರಮೋದ್‌ ಭಟ್‌  ತಮ್ಮ ಪಲ್ಸರ್‌ ಬೈಕ್‌ ಮಾರಾಟ ಮಾಡಲು ನಿರ್ಧರಿಸಿ ಫೇಸ್‌ಬುಕ್‌ನಲ್ಲಿ ವಿವರ ಪ್ರಕಟಿಸಿದ್ದರು. ಬೆಂಗಳೂರು ವಾಸಿ ನವೀನ್‌  ಇದಕ್ಕೆ ರಿಪ್ಲೆ ಮಾಡಿ, ಬೈಕ್‌ನ ವಿವರ ಪಡೆದುಕೊಂಡಿದ್ದ….

Read More

ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗೆ ಕಠಿಣ ಕಾರಾಗೃಹ ಶಿಕ್ಷೆ

ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗೆ ಕಠಿಣ ಕಾರಾಗೃಹ ಶಿಕ್ಷೆ ಶಿವಮೊಗ್ಗ ಏಪ್ರಿಲ್ 05: : ಭದ್ರಾವತಿ ತಾಲೂಕು ಕಲ್ಲಹಳ್ಳಿ ಗ್ರಾಮದ ಮುರುಗ ಎಲ್. ಬಿನ್ ಲಕ್ಷ್ಮಣ ಎಂಬ ವ್ಯಕ್ತಿ 2021ರಲ್ಲಿ ಓಮಿನಿ ವ್ಯಾನ್ ಮೂಲಕ ಆಂದ್ರದ ರಾಜಮಂಡ್ರಿಯಿಂದ 50 ಕೆ.ಜಿ.430 ಗ್ರಾಂ ತೂಕದ ಒಣ ಗಾಂಜಾವನ್ನು ಕಾನೂನು ಬಾಹಿರವಾಗಿ ಸಾಕಾಣಿಕೆ ಮಾಡುವಾಗ ಸೊರಬ ವಲಯ ಅಬಕಾರಿ ನಿರೀಕ್ಷಕರ ತಂಡವು ಸೆರೆಹಿಡಿದು, ಪ್ರಕರಣ ದಾಖಲಿಸಿಕೊಂಡು ಕಲಂ: 8(ಸಿ), 20(ii)(ಸಿ), 20(ಬಿ), 25 ಎನ್.ಡಿ.ಪಿ.ಎಸ್. ಕಾಯ್ದೆ 1985 ರಡಿಯಲ್ಲಿ…

Read More

ಪೊಲೀಸರ ಎಡವಟ್ಟು: ತಪ್ಪೇ ಮಾಡದ ವ್ಯಕ್ತಿಗೆ ಎರಡು ವರ್ಷ ಜೈಲು ಶಿಕ್ಷೆ!

ಪೊಲೀಸರ ಎಡವಟ್ಟು: ತಪ್ಪೇ ಮಾಡದ ವ್ಯಕ್ತಿಗೆ ಎರಡು ವರ್ಷ ಜೈಲು ಶಿಕ್ಷೆ! ಕೊಲೆಯಾಗಿದ್ದಾಳೆ ಎಂದುಕೊಳ್ಳಲಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ಪತ್ತೆ ಮೈಸೂರು – ಪತ್ನಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಪತಿಯು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವಾಗಲೇ, ಆಕೆ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾರೆ. ಪ್ರಕರಣದಲ್ಲಿ ಎರಡು ವರ್ಷ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದ ಪತಿಯು ಈಚೆಗಷ್ಟೇ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು. ನಾಲ್ಕು ವರ್ಷದ ಹಿಂದೆ ಕೊಲೆಯಾಗಿದ್ದಾರೆ ಎಂದು ಸುದ್ದಿಯಾಗಿದ್ದ ಮಹಿಳೆ ಮಲ್ಲಿಗೆ, ಪ್ರಿಯಕರ ಗಣೇಶ್‌ನೊಂದಿಗೆ ಪತ್ತೆಯಾಗಿದ್ದು, ಜಿಲ್ಲಾ ಸೆಷನ್ಸ್‌ ನ್ಯಾಯಾಲವು ಪ್ರಕರಣದ ಕುರಿತು…

Read More

ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಯುವಕನ ಬಂಧನ

ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಯುವಕನ ಬಂಧನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದ ಬಸ್ ನಿಲ್ದಾಣದ ಬಳಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನಾಗೋಡಿ ಗ್ರಾಮದ ನಿವಾಸಿ ಅಜಿತ್ ಕುಮಾರ್(28) ಬಂಧಿತ ಆರೋಪಿಯಾಗಿದ್ದಾನೆ. ವೈದ್ಯಕೀಯ ಪರೀಕ್ಷೆಯಿಂದ ಆರೋಪಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವ ಹಿನ್ನಲೆಯಲ್ಲಿ ಮಾದಕ ದ್ರವ್ಯ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ. ಘಟನೆಯ ಹಿನ್ನಲೆ : ಗುರುವಾರ ಮಧ್ಯಾಹ್ನ ನಗರ ಪಿಎಸೈ ಶಿವಾನಂದ ಕೆ ಹಾಗೂ ಸಿಬ್ಬಂದಿಗಳು ಗಸ್ತು ಸಂಚರಿಸುತ್ತಿರುವಾಗ…

Read More

ರೈಲಿಗೆ ಸಿಲುಕಿ ರಿಪ್ಪನ್ ಪೇಟೆಯ ಯುವಕ ಸಾವು ಪ್ರಕರಣ – ಸಾವಿನ ಸುತ್ತ ಅನುಮಾನದ ಹುತ್ತ…….!?.

ರೈಲಿಗೆ ಸಿಲುಕಿ ರಿಪ್ಪನ್ ಪೇಟೆಯ ಯುವಕ ಸಾವು ಪ್ರಕರಣ – ಸಾವಿನ ಸುತ್ತ ಅನುಮಾನದ ಹುತ್ತ…….!?. ರಿಪ್ಪನ್ ಪೇಟೆ : ಸಮಾಜದೊಂದಿಗೆ ಬೆರೆತು ಬಾಳಿ ಬದುಕಬೇಕಾದ ಉತ್ಸಾಹಿ ಯುವಕ ರಾಮನಾಥ್ ಮಾರ್ಚ್ 25ರಂದು  ಚನ್ನರಾಯಪಟ್ಟಣದ ಸಮೀಪ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಟ್ಟಿದ್ದಾನೆ ಎಂಬ ಪ್ರಕರಣ ತಿರುವು ಪಡೆದುಕೊಂಡಿದ್ದು ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆಯೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಹೌದು ಮಾರ್ಚ್ 25 ಸೋಮವಾರ ರಾತ್ರಿ ಚೆನ್ನಪಟ್ಟಣ ಮದ್ದೂರು ಮಾರ್ಗ ಮಧ್ಯೆಯ ನಿಡಗುಂಟಿ ಗ್ರಾಮದ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ…

Read More

ಪತ್ನಿ ಮೇಲಿನ ಸಿಟ್ಟಿಗೆ ಮಗಳು, ಅತ್ತೆ, ನಾದಿನಿಯ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪತ್ನಿ ಮೇಲಿನ ಸಿಟ್ಟಿಗೆ ಮಗಳು, ಅತ್ತೆ, ನಾದಿನಿಯ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಚಿಕ್ಕಮಗಳೂರಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದಲ್ಲಿ ಮಂಗಳವಾರ (ಎ.01) ರಾತ್ರಿ ತ್ರಿಬಲ್ ಮರ್ಡರ್ ನಡೆದಿದೆ. ತನ್ನ ಪುಟ್ಟ ಮಗಳ ನೋವಿನ ನುಡಿ ಕೇಳಿ ಕೆರಳಿದ ತಂದೆಯೊಬ್ಬ ಪತ್ನಿಯ ಮೇಲಿನ ಕೋಪದಿಂದ ತನ್ನ ಅತ್ತೆ, ನಾದಿನಿ ಹಾಗೂ ಮಗುವಿನ ಕೊಲೆ ಮಾಡಿದ್ದಾನೆ. ಅತ್ತೆ ಜ್ಯೋತಿ (50), ನಾದಿನಿ ಸಿಂಧು (26) ಹಾಗೂ 7 ವರ್ಷದ ಮಗುವಿನ ಕೊಲೆ ಮಾಡಲಾಗಿದೆ. ಮೃತ ಸಿಂಧು ಗಂಡ…

Read More

ಒಂದು ಕಿಸ್ ಗೆ 50 ಸಾವಿರ – ಸುಂದರಿ ಟೀಚರ್ ನ ಹನಿ ಮನಿ ಕಹಾನಿ,ಪೋಷಕರೇ ಇವಳ ಟಾರ್ಗೇಟ್ , ನಟೋರಿಯಸ್ ಹನಿಟ್ರ್ಯಾಪ್ ಗ್ಯಾಂಗ್ ಬಂಧನ

ಒಂದು ಚುಂಬನಕ್ಕೆ 50 ಸಾವಿರ – ಸುಂದರಿ ಟೀಚರ್ ನ ಹನಿ ಮನಿ ಕಹಾನಿ,ಪೋಷಕರೇ ಇವಳ ಟಾರ್ಗೇಟ್ , ನಟೋರಿಯಸ್ ಹನಿಟ್ರ್ಯಾಪ್ ಗ್ಯಾಂಗ್ ಬಂಧನ ಪ್ರಿ ಸ್ಕೂಲ್​ ನ ಖತರ್ನಾಕ್ ಟೀಚರ್ ಒಬ್ಬಳು ಶಾಲೆಗೆ ಬರುತ್ತಿದ್ದ ಮಕ್ಕಳ ತಂದೆಗೇ ಮುತ್ತು ಕೊಟ್ಟು ಹನಿಟ್ರ್ಯಾಪ್ ಮಾಡಿದ್ದಲ್ಲದೆ, 50 ಸಾವಿರ ರೂ. ಸುಲಿಗೆ ಮಾಡಿದ್ದಾಳೆ. ಮತ್ತೆ ಬೆದರಿಕೆಯೊಡ್ಡಿ ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ವಸೂಲಿ ಮಾಡಿದ್ದಲ್ಲದೆ, ಲಕ್ಷಾಂತರ ರೂ.ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಮತ್ತಷ್ಟು ಹಣ ವಸೂಲಿ ಮಾಡಲು ಮುಂದಾದ…

Read More

ಸ್ನೇಹಿತರಿಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ : ಓರ್ವನ ಕೊಲೆಯಲ್ಲಿ ಅಂತ್ಯ

ಸ್ನೇಹಿತರಿಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ : ಓರ್ವನ ಕೊಲೆಯಲ್ಲಿ ಅಂತ್ಯ ಶಿವಮೊಗ್ಗ: ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಮಿತ್ರರಲ್ಲಿ ಮೂಡಿದ ಸಣ್ಣ ಭಿನ್ನಾಭಿಪ್ರಾಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಇಲ್ಲಿನ ಸಾಗರ ರಸ್ತೆಯಲ್ಲಿರುವ ತ್ಯಾವರೆಕೊಪ್ಪದಲ್ಲಿ ಬುಧವಾರ ಮಧ್ಯಾಹ್ನ ವೇಳೆ  ಸಂಭವಿಸಿದೆ. ಕೊಲೆಯಾದ ವ್ಯಕ್ತಿಯನ್ನು ದೇವರಾಜು ಬಿನ್ ಚಿನ್ನಕುಳಂದೈ (೩೧) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ವೆಂಕಟೇಶ್ ಬಿನ್ ಚಿನ್ನದೊರೈ ನನ್ನು ಬಂಧಿಸಲಾಗಿದೆ. ಇಬ್ಬರೂ ತಮಿಳು ಜನಾಂಗದವರಾಗಿದ್ದು, ಬಾರ್‍ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದರು.  ಇಂದು ಬೆಳಗ್ಗೆ ಕೆಲಸದ ವೇಳೆ…

Read More

ಮಹಿಳೆ ಸ್ನಾನ ಮಾಡುವಾಗ ಇಣುಕಿ ನೋಡಿದ ಕಾಮುಕ ಬಂಧನ

ಮಹಿಳೆ ಸ್ನಾನ ಮಾಡುವಾಗ ಇಣುಕಿ ನೋಡಿದ ಕಾಮುಕ ಬಂಧನ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುವಾಗ ಇಣುಕಿ ನೋಡಿದ ವ್ಯಕ್ತಿಯನ್ನು ಪೊಲೀಸರು ಸೋಮವಾರ ಬಂದಿಸಿದ್ದಾರೆ. ಗೌರಪುರ ನಿವಾಸಿ ಮನೋಜ್(25) ಬಂಧಿತ ಆರೋಪಿ. ಸೋಮವಾರ ಮಧ್ಯಾಹ್ನ ಮಹಿಳೆ ಸ್ನಾನ ಮಾಡುವುದನ್ನು ಇಣುಕಿ ನೋಡುತ್ತಿದ್ದಾಗ ಆಕೆಯ ಪತಿ ಗಮನಿಸಿದ್ದಾನೆ. ಕೂಡಲೇ ಮನೋಜ್ ಅಲ್ಲಿಂದ ಪರಾರಿಯಾಗಿದ್ದಾನೆ. ಹೊಸಮನೆ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮನೋಜ್ ನನ್ನು ಬಂಧಿಸಿದ್ದಾರೆ. ಮನೋಜ್ ವಿರುದ್ಧ ಬೆಂಗಳೂರಿನಲ್ಲಿಯೂ…

Read More