ಸ್ನೇಹಿತರಿಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ : ಓರ್ವನ ಕೊಲೆಯಲ್ಲಿ ಅಂತ್ಯ
ಶಿವಮೊಗ್ಗ: ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಮಿತ್ರರಲ್ಲಿ ಮೂಡಿದ ಸಣ್ಣ ಭಿನ್ನಾಭಿಪ್ರಾಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಇಲ್ಲಿನ ಸಾಗರ ರಸ್ತೆಯಲ್ಲಿರುವ ತ್ಯಾವರೆಕೊಪ್ಪದಲ್ಲಿ ಬುಧವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಕೊಲೆಯಾದ ವ್ಯಕ್ತಿಯನ್ನು ದೇವರಾಜು ಬಿನ್ ಚಿನ್ನಕುಳಂದೈ (೩೧) ಎಂದು ಗುರುತಿಸಲಾಗಿದೆ.
ಕೊಲೆ ಮಾಡಿದ ಆರೋಪಿ ವೆಂಕಟೇಶ್ ಬಿನ್ ಚಿನ್ನದೊರೈ ನನ್ನು ಬಂಧಿಸಲಾಗಿದೆ.
ಇಬ್ಬರೂ ತಮಿಳು ಜನಾಂಗದವರಾಗಿದ್ದು, ಬಾರ್‍ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಕೆಲಸದ ವೇಳೆ ಸಣ್ಣ ವಿಷಯವೊಂದನ್ನೇ ದೊಡ್ಡದನ್ನಾಗಿಸಿ ಇಬ್ಬರೂ ಬೈದಾಡಿಕೊಂಡಿದ್ದರು. ನಂತರ ವೆಂಕಟೇಶ್ ಗುದ್ದಲಿಯಿಂದ ದೇವರಾಜುನ ತಲೆಗೆ ಬಲವಾಗಿ ಹೊಡೆದಿದ್ದರಿಂದ ಆತ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಆರೋಪಿ ವೆಂಕಟೇಶನನ್ನು ಬಂಧಿಸಲಾಗಿದೆ.
ಮೃತನು ಪತ್ನಿ ಮತ್ತು 5 ಹಾಗೂ 3 ವರ್ಷದ ಮಕ್ಕಳನ್ನು ಹೊಂದಿದ್ದಾನೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.