Headlines

ಭೀಕರ ಅಪಘಾತ : ಚಾಲಕನ ಕಾಲು ಮುರಿತ

ಶಿವಮೊಗ್ಗ : ಬೇಡರ ಹೊಸಳ್ಳಿಯ ಕೆರೆಯ ಬಳಿ ಓಮ್ನಿ ಮತ್ತು ಐ 20 ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದ್ದು, ಅಪಘಾತದಲ್ಲಿ ಓಮ್ನಿ ಚಾಲಕನ ಕಾಲು ಮುರಿದಿದೆ. ಜೊತೆಯಲ್ಲಿದ್ದ ಮಹಿಳೆಗೂ ಗಾಯಗಳಾಗಿವೆ. ಬೇಡರ ಹೊಸಳ್ಳಿ ಕೆರೆಯ ಏರಿಯ ಮೇಲೆ ಶಿವಮೊಗ್ಗ ಕಡೆಯಿಂದ ಹೊನ್ನಾಳಿ ಕಡೆಗೆ ಹೋಗುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಹೊನ್ನಾಳಿ ಕಡೆಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಐ20 ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯಲ್ಲಿ ಓಮ್ನಿ ಕಾರು ನುಜ್ಜುಗುಜ್ಜಾಗಿದೆ. ಓಮ್ನಿ ಕಾರಿನ ಚಾಲಕ ಮತ್ತು ಮಹಿಳೆಗೆ ತೀವ್ರವಾದ ರಕ್ತಗಾಯಗಳಾಗಿದೆ….

Read More

SAGARA | ಸಾಗರ ನಗರಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ

SAGARA | ಸಾಗರ ನಗರಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ  ಸಾಗರ : ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಡುವೆ ಮಾತಿನ ಚಕಮಕಿ ನಡೆದಿದೆ.‌ ಸದಸ್ಯರೆಲ್ಲರೂ ಬಾವಿಗಿಳಿದು ಹೋರಾಟ ನಡೆಸಿದ್ದಾರೆ. ನಗರಸಭೆಯ ಆಡಳಿತ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಕುಮಾರಿ ಪಲ್ಲವಿ ಸಾತೇನಹಳ್ಳಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಸಭೆಯಲ್ಲಿ ಭಾಗಿಯಾಗಿದ್ದರು. ಸಾಗರದ ಬಿ.ಹೆಚ್ ರಸ್ತೆಯಲ್ಲಿ ಜಾಗವೊಂದರ ವಿಚಾರದಲ್ಲಿ ಮಾಜಿ ಶಾಸಕರು ಸೇರಿದಂತೆ 14 ಜನರ…

Read More

HOSANAGARA | ಇಬ್ಬರು ಶ್ರೀಗಂಧ ಚೋರರ ಬಂಧನ

HOSANAGARA | ಇಬ್ಬರು ಶ್ರೀಗಂಧ ಚೋರರ ಬಂಧನ ಹೊಸನಗರ : ತಾಲ್ಲೂಕಿನ ಕೆರೆಹಳ್ಳಿ ಹೋಬಳಿ ಹೊಸಳ್ಳಿ ಗ್ರಾಮದ ಸ. ನಂ.18 ರ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಮರವನ್ನು ಅಕ್ರಮವಾಗಿ ಕಡಿತಲೆ ಮಾಡಿ ತುಂಡುಗಳನ್ನಾಗಿ ಪರಿವರ್ತಿಸಿ ಬೈಕಿನಲ್ಲಿ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಶ್ರೀಗಂಧ ಚೋರರನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಶನಿವಾರ ನಡೆದಿದೆ. ಬಂಧಿತರನ್ನು ಹೊಸಕೆಸರೆ ಗ್ರಾಮದ ಸೊಪ್ಪಿನಮಲ್ಲೆ ವಾಸಿ ದಿನೇಶ್ ಅಲಿಯಾಸ್ ವಿಜೇತ (31) ಮತ್ತು ಹಿರಿಯೋಗಿ ಗ್ರಾಮದ ಮಾವಿನಕಟ್ಟೆ ವಾಸಿ ರಾಘವೇಂದ್ರ (32) ಎಂದು ಗುರುತಿಸಲಾಗಿದೆ….

Read More

Ripponpete | ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು – ತಪ್ಪಿದ ಭಾರಿ ಅನಾಹುತ

Ripponpete | ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು – ತಪ್ಪಿದ ಭಾರಿ ಅನಾಹುತ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿ ಉರುಳಿ ಬಿದ್ದಿರುವ ಘಟನೆ ರಿಪ್ಪನ್‌ಪೇಟೆಯ ಹೊಸನಗರ ರಸ್ತೆಯ ತಾವರೆಕೆರೆ ಸಮೀಪದಲ್ಲಿ ನಡೆದಿದೆ. ರಿಪ್ಪನ್‌ಪೇಟೆ ಕಡೆಯಿಂದ ಹೊಸನಗರ ಕಡೆಗೆ ತೆರಳುತಿದ್ದ ಮಾರುತಿ ಸ್ವಿಫ್ಟ್ ಕಾರು ತಾವರೆಕೆರೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಕೆಳಗೆ ಇಳಿದ ಪರಿಣಾಮ ಲೈಟ್ ಕಂಬಕ್ಕೆ ಡಿಕ್ಕಿಯಾಗಿ, ಮೋಟಾರ್ ಪಂಪ್ ಹೌಸ್ ಗೆ ಡಿಕ್ಕಿಯಾಗಿ…

Read More

ಸಿದ್ದರಾಮಯ್ಯನವರು ತನ್ನ ರಾಜಕೀಯ ತೀಟೆಗೋಸ್ಕರ ಬಜೆಟ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ – ಆರಗ ಜ್ಞಾನೇಂದ್ರ|Araga

ಸಿದ್ದರಾಮಯ್ಯನವರು ತನ್ನ ರಾಜಕೀಯ ತೀಟೆಗೋಸ್ಕರ ಬಜೆಟ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ – ಆರಗ ಜ್ಞಾನೇಂದ್ರ  ರಿಪ್ಪನ್ ಪೇಟೆ – ಜು.7 ರಂದು ಸಿದ್ದರಾಮಯ್ಯನವರು ರಾಜ್ಯ ಬಜೆಟ್ ಮಂಡಿಸಿದರು. ಅದು ಬಜೆಟ್ ಪುಸ್ತಕ ಎನ್ನುವುದಕ್ಕಿಂತ ಕೇಂದ್ರ ಹಾಗೂ ರಾಜ್ಯದ ಹಳೆಯ ಬಿಜೆಪಿ ಸರ್ಕಾರವನ್ನು ಟೀಕೆ ಮಾಡುವ ಪುಸ್ತಕ.14 ನೇ ಬಾರಿ ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದ್ರು. ಆದರೆ ತನ್ನ ರಾಜಕೀಯ ತೀಟೆಗೋಸ್ಕರ ಬಜೆಟ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದು ಕೂಡ ಇತಿಹಾಸದಲ್ಲಿ ಸೇರಿರುವ ಘಟನೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು….

Read More

SHIVAMOGGA | ವೈಭವದ ದಸರಾ ಮೆರವಣಿಗೆ

SHIVAMOGGA | ವೈಭವದ ದಸರಾ ಮೆರವಣಿಗೆ ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದೊರೆತಿದೆ. ಸಕ್ರೆಬೈಲು ಬಿಡಾರದ ಆನೆ ಸಾಗರ ನೇತೃತ್ವದಲ್ಲಿ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ. ಶಿವಪ್ಪ ನಾಯಕ ಅರಮನೆ ಸಮೀಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ. ಸುಮಾರು 450 ಕೆಜಿ ತೂಕದ ಬೆಳ್ಳಿಯ ಅಂಬಾರಿ ಹೊತ್ತು ಸಾಗರ ಆನೆ ಸಾಗಿದೆ. ಸಚಿವ ಮಧು ಬಂಗಾರಪ್ಪ ದಂಪತಿ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಬಲ್ಕಿಶ್ ಬಾನು, ಡಾ. ಧನಂಜಯ ಸರ್ಜಿ…

Read More

ಬಸ್ ನಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು | ಆಗುಂಬೆ ಘಾಟ್ ನಲ್ಲಿ ನಡೆದ ಘಟನೆ

ಬಸ್ ನಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು | ಆಗುಂಬೆ ಘಾಟ್ ನಲ್ಲಿ ನಡೆದ ಘಟನೆ ತೀರ್ಥಹಳ್ಳಿ: ಪರ್ಕಳದಿಂದ ತೀರ್ಥಹಳ್ಳಿ ಮಾರ್ಗವಾಗಿ ಕೊಪ್ಪಕ್ಕೆ ಬರುತ್ತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ನಲ್ಲೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ಇಂದು ನಡೆದಿದೆ. ಬಸ್ ನಲ್ಲಿ ಆಗಮಿಸುತ್ತಿದ್ದ ಕೊಪ್ಪದ ಹರೀಶ್ ಬಳ್ಳಾಲ್ ಎನ್ನುವವರಿಗೆ ತೀವ್ರ ಹೃದಯಘಾತ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಬಸ್ ಡ್ರೈವರ್ ಪ್ರಾಥಮಿಕ ಕೇಂದ್ರಕ್ಕೆ ಕರೆ ತಂದಿದ್ದಾರೆ. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಹರೀಶ್ ಪ್ರಾಣ ಬಿಟ್ಟಿದ್ದಾರೆ. ಆಗುಂಬೆ ವೈದ್ಯಾಧಿಕಾರಿಯಾದ ಅನಿಕೇತನ್ ಪರೀಕ್ಷಿಸಿ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ….

Read More

ರಾಜ್ಯಾದ್ಯಂತ ಭರ್ಜರಿ ಪ್ರದರ್ಶನಗೊಳ್ಳುತ್ತಿರುವ ಮಲೆನಾಡಿನ ಯುವ ನಿರ್ದೇಶಕ ಉಮೇಶ್ ನಿರ್ದೇಶನದ ‘ಟಗರು ಪಲ್ಯ’ ಚಿತ್ರ|sandalwood

ಮಲೆನಾಡಿನ ಯುವ ನಿರ್ದೇಶಕ ಉಮೇಶ್ ಕೆ ಕೃಪಾ ನಿರ್ದೇಶಿಸಿರುವ ಟಗರು ಪಲ್ಯ ಚಲನಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತಿದ್ದೆ. ಶಿವಮೊಗ್ಗ ಜಿಲ್ಲೆಯ ಕುಂಸಿ ಗ್ರಾಮದ ಉಮೇಶ್ ಕೆ ಕೃಪಾ ರವರ ತಂದೆ ರೈಲ್ವೆ ನೌಕರರಾದ ಕೃಷ್ಣಪ್ಪ ಹಾಗೂ ತಾಯಿ‌ ಕಾಳಮ್ಮ 45 ವರ್ಷಗಳ ಹಿಂದೆ ರೈಲ್ವೆ ಇಲಾಖೆಯಿಂದ ಕೆಲಸಕ್ಕೆ ಬಂದ ಅವರು ಕುಂಸಿ ಗ್ರಾಮದಲ್ಲಿ ನೆಲೆಸಿದ್ದಾರೆ. ಕೃಷ್ಣಪ್ಪ ಹಾಗೂ ಕಾಳಮ್ಮ ದಂಪತಿಗಳಿಗೆ ಯುವ ನಿರ್ದೇಶಕ ಉಮೇಶ್ ,ರೈಲ್ವೆ ಇಲಾಖೆಯ ಉದ್ಯೋಗಿ ರಂಗಸ್ವಾಮಿ ,ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಪ್ರಕಾಶ್…

Read More

HUMCHA | ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ – ಸ್ವಚ್ಛತಾ ಕಾರ್ಯಕ್ರಮ

HUMCHA | ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ – ಸ್ವಚ್ಛತಾ ಕಾರ್ಯಕ್ರಮ ಅಕ್ಟೋಬರ್‌ 2 ರಂದು ಮಹಾತ್ಮ ಗಾಂಧಿ ಹಾಗೂ ಭಾರತದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಸ್ಮರಿಸುವ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಇದೇ ಅಂಗವಾಗಿ ಇಂದು ಸ್ವಗ್ರಾಮ ಹಿತರಕ್ಷಣಾ ವೇದಿಕೆ ವತಿಯಿಂದ ಹುಂಚ ಭಾಗದಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಕಾರ್ಯಕ್ರಮದ ಭಾಗವಾಗಿ ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರ, ಹುಂಚ ಆಸ್ಪತ್ರೆಯ ಮುಂಭಾಗದ ಬಸ್…

Read More

RIPPONPETE | 22 ವರ್ಷ ರಾಷ್ಟ್ರ ಸೇವೆ ಸಲ್ಲಿಸಿ ತವರಿಗೆ ಹಿಂದಿರುಗಿದ ಹೆಮ್ಮೆಯ ಯೋಧನಿಗೆ ಅದ್ದೂರಿ ಸ್ವಾಗತ

RIPPONPETE | 22 ವರ್ಷದ ರಾಷ್ಟ್ರ ಸೇವೆ ಸಲ್ಲಿಸಿ ತವರಿಗೆ ಹಿಂದಿರುಗಿದ ಹೆಮ್ಮೆಯ ಯೋಧನಿಗೆ ಅದ್ದೂರಿ ಸ್ವಾಗತ ರಿಪ್ಪನ್‌ಪೇಟೆ: ದೇಶರಕ್ಷಣೆಯ ಕರ್ತವ್ಯವನ್ನು 22 ದೀರ್ಘ ವರ್ಷಗಳ ಕಾಲ ನಿರಂತರವಾಗಿ ನಿಭಾಯಿಸಿ ಗೌರವಪೂರ್ವಕ ನಿವೃತ್ತರಾಗಿರುವ ಗಿರೀಶ್ ಅವರು ತಮ್ಮ ಹೆಮ್ಮೆಯ ನಾಡಿಗೆ ಭಾನುವಾರ ಸಂಜೆ ಆಗಮಿಸಿದ್ದು ಗ್ರಾಮಸ್ಥರು ಅದ್ಭುತವಾದ ಗೌರವ ಸಮರ್ಪಣೆಯ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡರು. ಮೆಸ್ಕಾಂನ ನಿವೃತ್ತ ಉದ್ಯೋಗಿ ಮೋಹನ್ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರನಾದ ಗಿರೀಶ್, 2003ರಲ್ಲಿ ಭಾರತೀಯ ಸೇನೆಗೆ ಸೇರಿದ್ದು ದೇಶದ ವಿವಿಧ ಗಡಿಭಾಗಗಳಲ್ಲಿ…

Read More