ಮನೆಯ ಗೇಟ್ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ನ ಬರ್ಬರ ಹತ್ಯೆ.!!|crime

ಶಿವಮೊಗ್ಗ: ರೌಡಿ‌ಶೀಟರ್ ಮುಜೀಬ್ (32) ಎಂಬಾತನನ್ನು‌ ಮಾರಕಾಸ್ತ್ರಗಳಿಂದ‌ ಕೊಚ್ಚಿ‌ ಕೊಲೆಗೈದ ಘಟನೆ ಕಳೆದ ರಾತ್ರಿ ಭದ್ರಾವತಿಯಲ್ಲಿ ನಡೆದಿದೆ. ಬೊಮ್ಮನಕಟ್ಟೆ ಬಳಿಯ ಹಳೆ ನಂಜಾಪುರದಲ್ಲಿ ಘಟನೆ ಜರುಗಿದೆ.


ಮುಜೀಬ್ ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ‌ ಆರೋಪಿಯಾಗಿದ್ದ. 

ಇಂದು ಬೆಳಗ್ಗೆ ಸ್ಥಳೀಯರು ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೇಪರ್‌ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಜೀಬ್‌ಗೆ ಎರಡು ಮದುವೆಯಾಗಿದ್ದು, ಮೊದಲನೇ ಪತ್ನಿಗೆ ಇಬ್ಬರು ಮತ್ತು ಎರಡನೇ ಪತ್ನಿಗೆ ಒಂದು‌ ಮಗುವಿದೆ.


ನಿನ್ನೆ ರಾತ್ರಿ 12 ಗಂಟೆ ನಂತರ ಈ ಘಟನೆ ನಡೆದಿದೆ. ರೌಡಿ ಮುಜ್ಜು ರಾತ್ರಿ ತನ್ನ ಮನೆಯಿಂದ ಹೊರಕ್ಕೆ ಬಂದಿದ್ದ ವೇಳೇ ಆತನ ಮೇಲೆ ಅಟ್ಯಾಕ್ ಆಗಿದೆ. ಮನೆಯ ಮುಂದೆಯೇ ಆತನನ್ನ ಹತ್ಯೆ ಮಾಡಲಾಗಿದೆ.

Leave a Reply

Your email address will not be published. Required fields are marked *