ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಯುವಕನೊಬ್ಬ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದ ಯುವತಿಯೋರ್ವಳನ್ನು ಪ್ರೀತಿಸಿ ನಂಬಿಸಿ ಮೋಸ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ರಾಣೇಬೆನ್ನೂರಿನಿಂದ ನಗರಕ್ಕೆ ಕಬ್ಬಿಣದ ಕೆಲಸಕ್ಕೆ ಬಂದಿದ್ದ ಅಂದಾಜು 28 ವರ್ಷದ ಯುವಕ ನಗರದ 17 ವರ್ಷದ ಯುವತಿಯನ್ನು ಪ್ರೀತಿಸಿ ನಂಬಿಸಿ ಗರ್ಭಿಣಿಯನ್ನಾಗಿ ಮಾಡಿದ್ದಾನೆ.
ನಂತರ ಆಕೆಯನ್ನು ತನ್ನ ಊರಿಗೆ ಕರೆದೋಯ್ದು ಆಸ್ಪತ್ರೆಯಲ್ಲಿ ಮಗು ತೆಗೆಸಲು ಪ್ರಯತ್ನ ಮಾಡಿದ್ದಾನೆ. ಆದರೆ ಅಲ್ಲಿನ ವೈದ್ಯರಿಗೆ ಆಕೆಯ ಬಗ್ಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಈಗಾಗಲೇ ಯುವಕನ ವಿರುದ್ಧ ನಗರದಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರ ಬರಬೇಕಿದೆ.