w
Headlines

ರಿಪ್ಪನ್ ಪೇಟೆ : ಪಿಯು ಕಾಲೇಜಿನ 56 ವಿದ್ಯಾರ್ಥಿಗಳ ಕೋವಿಡ್ ವರದಿ ಪ್ರಕಟ :

ರಿಪ್ಪನ್ ಪೇಟೆ : ಪದವಿ ಪೂರ್ವ ಕಾಲೇಜಿನ 56 ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಕೋವಿಡ್ ವರದಿ ನೆಗೆಟಿವ್ ಬಂದಿದ್ದು,ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಇಲ್ಲಿನ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗೆ ಕರೋನ ಸೋಂಕು ತಗುಲಿದ ಹಿನ್ನೆಲೆಯಲ್ಲಿ  ಪದವಿ ಪೂರ್ವ ಕಾಲೇಜಿನ 56 ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಸ್ಲ್ಯಾಬ್ ಪರೀಕ್ಷೆ ನಡೆಸಲಾಗಿತ್ತು. ಎಲ್ಲಾ 56 ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಗಂಟಲು /ಮೂಗಿನ ದ್ರವದ RTPCR ಟೆಸ್ಟ್ ವರದಿ ನೆಗೆಟಿವ್ ಬಂದಿರುತ್ತದೆ ಎಂದು ತಿಳಿದುಬಂದಿದೆ. ಈ ಘಟನೆಯ…

Read Full News

ರಿಪ್ಪನ್ ಪೇಟೆ : ಹೆಲಿಕಾಫ್ಟರ್ ದುರಂತದಲ್ಲಿ ಮೃತಪಟ್ಟ ಸೈನಿಕ ಮುಖ್ಯಸ್ಥರಿಗೆ ಹಾಗೂ ಅಧಿಕಾರಿಗಳಿಗೆ ಶ್ರದ್ಧಾಂಜಲಿ

ರಿಪ್ಪನ್ ಪೇಟೆ : ಬುಧವಾರ ತಮಿಳು ನಾಡಿನ  ಕುನೂರು ಸಮೀಪದಲ್ಲಿ ಹೆಲಿಕಾಫ್ಟರ್ ದುರಂತದಲ್ಲಿ ಮೃತಪಟ್ಟ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಜನರಲ್ ಬಿಪಿನ್ ರಾವತ್ ಹಾಗೂ ಮೃತಪಟ್ಟ ಸೇನಾ ಅಧಿಕಾರಿಗಳಿಗೆ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಶ್ರದ್ದಾಂಜಲಿ ಕಾರ್ಯಕ್ರಮ ನಡೆಸಿ ಸಂತಾಪ ಸೂಚಿಸಲಾಯಿತು.  ಈ ಸಂಧರ್ಭದಲ್ಲಿ  ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ಮಾತನಾದಿ ಬಿಪಿನ್ ರಾವತ್ ಅವರು ಮೂರು ದಶಕಗಳಿಗೂ ಹೆಚ್ಚಿನ ಅವಧಿಗೆ ಭಾರತದ ಸೇವೆ ಮಾಡಿದ್ದಾರೆ. ಇತ್ತೀಚೆಗೆ ಪ್ರಪಂಚದ ಗಮನ…

Read Full News

ವಿಧಿಯಾಟಕ್ಕೆ ಹೊಸ ಟ್ರಾಕ್ಟರ್ ಬಲಿ ಪಡೆಯಿತೇ ಯುವ ರೈತನನ್ನು : ಹೊಸಕೊಪ್ಪದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಸಾವು: ವಿಧಿಯೇ ನೀನೆಷ್ಟು ಕ್ರೂರಿ

ಹೊಸ ಟ್ರಾಕ್ಟರ್ ನಲ್ಲಿ ಹೋಗುವಾಗ ವಿಧಿಯಾಟಕ್ಕೆ ಬಲಿಯಾಗಿ ಹೊಸಕೊಪ್ಪ ಗ್ರಾಮದ ಬಳಿ ಟ್ಯಾಕ್ಟರ್  ಪಲ್ಟಿಯಾಗಿ ಗುಂಡಿಗೆ ಬಿದ್ದಿದ್ದು ಸ್ಥಳದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ  ನಡೆದಿದೆ. ಹೊಸ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಎನ್ ಟಿ ರಸ್ತೆಯಿಂದ ಹೊಸಕೊಪ್ಪದ‌ ಕೆರೆ ಏರಿಗೆ ಬರುವಾಗ ಎದುರುಗಡೆ ಬಂದ ವಾಹನವನ್ನ ತಪ್ಪಿಸಲು ಹೋದ ಚಾಲಕ ನಿಯಂತ್ರಣ ಕಳೆದುಕೊಂಡು ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ. ಟ್ರ್ಯಾಕ್ಟರ್ ನ ಚಾಲಕನ ಪಕ್ಕದಲ್ಲಿ ಕುಳಿತಿದ್ದ ಶಶಿನಾಯ್ಕ್(30) ಎಂಬುವವರು ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಶಶಿನಾಯ್ಕ್ ನ‌ ಮೈ ಮೇಲೆ ಟ್ರ್ಯಾಕ್ಟರ್…

Read Full News

ಶಿವಮೊಗ್ಗ ಕ್ಷೇತ್ರದ ಬಿಜೆಪಿ ವಿಧಾನ ಪರಿಷತ್ ಅಭ್ಯರ್ಥಿ ಡಿ ಎಸ್ ಅರುಣ್ ಗೆಲುವು ನಿಶ್ಚಿತ : ಎಂ ಬಿ ಮಂಜುನಾಥ್

ರಿಪ್ಪನ್ ಪೇಟೆ : ಶಿವಮೊಗ್ಗ ಕ್ಷೇತ್ರದ ಬಿಜೆಪಿ ವಿಧಾನ ಪರಿಷತ್ ಅಭ್ಯರ್ಥಿ ಡಿ ಎಸ್ ಅರುಣ್ ಗೆಲುವು ನಿಶ್ಚಿತವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕೆಲಸಗಳೇ ಡಿ ಎಸ್ ಅರುಣ್ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ವಿರೋಧ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ರಿಪ್ಪನ್ ಪೇಟೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ತಿಳಿಸಿದ್ದಾರೆ. ಅವರು ಪೋಸ್ಟ್ ಮ್ಯಾನ್ ನ್ಯೂಸ್ ತಂಡದೊಂದಿಗೆ ಮಾತನಾಡಿ…

Read Full News

ಅರಸಾಳಿನ ಕಾಂಗ್ರೆಸ್ ಸದಸ್ಯೆ ಬೆಳಿಗ್ಗೆ ಕಮಲ ಹಿಡಿದು ಸಂಜೆ ವೇಳೆಗೆ ಮತ್ತೆ ವಾಪಾಸ್ ಕೈ ಹಿಡಿದ ರೋಚಕ ಘಟನೆ

ರಿಪ್ಪನ್ ಪೇಟೆ : ಇಂದು ಬೆಳಿಗ್ಗೆ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪರವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದ ಅರಸಾಳು ಗ್ರಾಪಂ ಸದಸ್ಯೆ ಪೂರ್ಣಿಮಾ ಸಂಜೆಯಾಗುವಷ್ಟರಲ್ಲಿ ಮತ್ತೆ ಮರಳಿ ಕಾಂಗ್ರೆಸ್ ಗೆ ಸೇರಿದ್ದಾರೆ. ಆಪರೇಶನ್ ಕಮಲದ ಮೂಲಕ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯೆಯನ್ನು ಸೆಳೆದಿದ್ದ ಬಿಜೆಪಿಗೆ ರಿವರ್ಸ್‌ ಆಪರೇಶನ್ ಮಾಡುವ ಮೂಲಕ ಬೇಳೂರು ಗೋಪಾಲಕೃಷ್ಣ ಖಡಕ್ ಉತ್ತರ ನೀಡಿದ್ದಾರೆ. ಇಂದು ಬೆಳಿಗ್ಗೆ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿ ಡಿ…

Read Full News

ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ ಕನೆಕ್ಷನ್ ಇಲ್ಲದೇ ನೇತಾಡುತ್ತಿರುವ ಸಿಸಿ ಕ್ಯಾಮೆರಾಗಳು : ಕಾಟಾಚಾರಕ್ಕೆ ಹಾಕಿದ್ದೀರಾ ಅಧಿಕಾರಿಗಳೇ ????

ರಿಪ್ಪನ್ ಪೇಟೆ: ನಾಲ್ಕೂ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಿಪ್ಪನ್ ಪೇಟೆ ವಿನಾಯಕ ವೃತ್ತದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ  ಸಿಸಿ ಕ್ಯಾಮೆರಾಗಳು ಕನೆಕ್ಷನ್ ಇಲ್ಲದೇ ಕ್ಯಾಮೆರಾಗಳು ವೈರ್ ಗಳ ಜೊತೆ ನೇತಾಡುತ್ತಿವೆ. ಇದನ್ನು ನೋಡಿದರೆ “ನೇತಾಡುತ್ತಿರುವೆವೋ ನಾವು ಜೋತಾಡುತ್ತಿರುವೆವು” ಎಂದು ಯುಗಳ ಗೀತೆ ಹಾಡುತ್ತಿರುವಂತೆ ಭಾಸವಾಗುತ್ತದೆ !!! ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯು ನಾಲ್ಕು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವಂತಹ ಪಟ್ಟಣವಾಗಿದೆ.ಇಲ್ಲಿನ ವಿನಾಯಕ ವೃತ್ತ ದಲ್ಲಿ ಅಧಿಕಾರಿಗಳು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಆದರೆ ಅದೀಗ ಸಂಪೂರ್ಣವಾಗಿ…

Read Full News

ರಿಪ್ಪನ್ ಪೇಟೆ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗೆ ಕರೊನಾ ಪಾಸಿಟಿವ್ : ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಲ್ಲಿ ಆತಂಕ

ರಿಪ್ಪನ್ ಪೇಟೆ : ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿರುವ ಯುವಕನೊರ್ವನಿಗೆ ಕೋವಿಡ್ ಪಾಸಿಟಿವ್ ಬಂದಿದ್ದು,ಯುವಕನನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಡಿ.1 ರಂದು ವಿದ್ಯಾರ್ಥಿ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದ ಹಿನ್ನಲೆಯಲ್ಲಿ ರಿಪ್ಪನ್ ಪೇಟೆಯ ಪಿಹೆಚ್ ಸಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾನೆ ಕೋವಿಡ್ ಪರೀಕ್ಷೆಯ ವರದಿಯು ನಿನ್ನೆ ಪಾಸಿಟಿವ್ ಎಂದು ಬಂದಿದೆ. ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಆರೋಗ್ಯ ಕೇಂದ್ರ ಸಿಬ್ಬಂದಿಗಳು ಇಂದು ವಿದ್ಯಾರ್ಥಿಯ ಮನೆಗೆ ಬಂದಿದ್ದಾರೆ.ಆದರೆ ಆತ ಮನೆಯಲ್ಲಿ ಇರದೇ ರಿಪ್ಪನ್…

Read Full News

ಸಾಗರದ ಗುಡ್ಡೆಕೌತಿ ಬಳಿ ಮೈಸೂರು-ತಾಳಗುಪ್ಪ ರೈಲಿಗೆ ಸಿಲುಕಿ ಯುವತಿ ಸಾವು.!! ಇದು ಆತ್ಮಹತ್ಯೆಯೋ ?ಅಪಘಾತವೋ?

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಗುಡ್ಡೆಕೌತಿ ಬಳಿ ಮಧ್ಯಾಹ್ನ 12:30 ರ ವೇಳೆಗೆ ಮೈಸೂರು- ತಾಳಗುಪ್ಪ ರೈಲಿಗೆ ಅಂದಾಜು 18 ವರ್ಷದ ಯುವತಿ ರೈಲಿಗೆ  ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನ ಸ್ಥಳದಲ್ಲಿ ರೈಲ್ವೆ ಇಲಾಖೆಯ ಪೋಲಿಸ್ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಾಗರ ಗ್ರಾಮಾಂತರ ಪೊಲೀಸರು ಧಾವಿಸಿದ್ದಾರೆ. ಇನ್ನೂ ಯುವತಿಯ ಬಗ್ಗೆ ಮಾಹಿತಿ ತಿಳಿದಿಲ್ಲ ಇದು ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂಬ ಪ್ರಶ್ನೆಗೆ ತನಿಖೆಯಿಂದ ಉತ್ತರ ದೊರೆಯಬೇಕಾಗಿದೆ. ಮೈಸೂರು to ತಾಳಗುಪ್ಪ ಗಾಡಿ ಸಂಖ್ಯೆ 16206 ರೈಲು Runover…

Read Full News

ಬಿ.ಜೆ.ಪಿ ಪಕ್ಷದ ಬೆಂಬಲದಲ್ಲಿ ಗೆದ್ದ ಗ್ರಾಮ ಪಂಚಾಯತಿ ಸದಸ್ಯರಿಗೆ ಮತಯಾಚಿಸುವ ಅಗತ್ಯವಿಲ್ಲ ಅವರೇ ಸ್ವಪ್ರೇರಣೆಯಿಂದ ಅನ್ಯ ಪಕ್ಷದ ಸದಸ್ಯರನ್ನು ಮನವೊಲಿಸಿ ಮತ ಹಾಕಿಸುತ್ತಾರೆ : ಕೆ ಎಸ್ ಈಶ್ವರಪ್ಪ

ರಿಪ್ಪನ್‌ಪೇಟೆಯ : ಬಿ.ಜೆ.ಪಿ ಪಕ್ಷದ ಬೆಂಬಲದಲ್ಲಿ ಗೆದ್ದ ಗ್ರಾಮ ಪಂಚಾಯತಿ ಸದಸ್ಯರಿಗೆ ಮತಯಾಚಿಸುವ ಅಗತ್ಯವಿಲ್ಲ ಅವರೇ ಸ್ವಪ್ರೇರಣೆಯಿಂದ ಅನ್ಯ ಪಕ್ಷದ ಸದಸ್ಯರನ್ನು ಮನವೊಲಿಸಿ ಮತ ಹಾಕಿಸುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ವಿನಾಯಕ ಸರ್ಕಲ್‌ನಲ್ಲಿರುವ ಸತ್ಕಾರ್ ಕಾಂಪ್ಲೆಕ್ಸ್ ನಲ್ಲಿ ಬಿ.ಜೆ.ಪಿ ಕಛೇರಿಯನ್ನು ಉದ್ಘಾಟಿಸಿ ನಂತರ ಗ್ರಾಮ ಪಂಚಾಯತಿ ಸದಸ್ಯ ಮತದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನರೇಗಾ ಮತ್ತು ಜನಜೀವನ ಯೋಜನೆ ಅನುಷ್ಠಾನದಲ್ಲಿ…

Read Full News

ಸಾಗರದ ಕೆ ಎಸ್ ಆರ್ ಟಿಸಿ ಚಾಲಕ ಮತ್ತು ನಿರ್ವಾಹಕನ ನಿರ್ಲಕ್ಷ್ಯ ಆನಂದಪುರದಲ್ಲಿ ಬಸ್ ಹತ್ತುವಾಗ ಕೆಳಗೆ ಬಿದ್ದ ವಿದ್ಯಾರ್ಥಿನಿ!!!!!! ಸಾಗರ ಬಸ್ ಡಿಪೋ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ಬೆಳಿಗ್ಗೆ 9.15 ರ ಸಂದರ್ಭದಲ್ಲಿ ಶಿವಮೊಗ್ಗದಿಂದ ಸಾಗರದ ಕಡೆ ಬಸ್ ಹೊರಟ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬಸ್ ಹತ್ತುತ್ತಿದ್ದರು ಇನ್ನೂ ಹತ್ತು ಜನ ಹುಡುಗರು ಬಸ್ ಹತ್ತುತ್ತಿರುವಂತಹ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿ ಚಾಲಕ ಮತ್ತು ನಿರ್ವಾಹಕನ ನಿರ್ಲಕ್ಷ್ಯತನದಿಂದ ಒಬ್ಬ ವಿದ್ಯಾರ್ಥಿನಿ ಬಸ್  ಹತ್ತುತ್ತಿರುವಾಗಲೇ ಬಸ್ಸನ್ನು ಚಲಾಯಿಸಿದ್ದರಿಂದ  ವಿದ್ಯಾರ್ಥಿನಿಯೊಬ್ಬಳು ಬಸ್ಸಿನಿಂದ ಕೆಳಗೆ ಬಿದ್ದಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ತಕ್ಷಣ ಉಳಿದ ವಿದ್ಯಾರ್ಥಿಗಳು ಆ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ…

Read Full News

ಬಿಜೆಪಿ ಆಡಳಿತ ಈಗಾಗಲೇ ಜನಕ್ಕೆ ವಾಕರಿಕೆ ಬಂದಂತಾಗಿದೆ : ಮಾಜಿ ಶಾಸಕ ಮಧು ಬಂಗಾರಪ್ಪ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ವಿಧಾನಪರಿಷತ್ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಧು ಬಂಗಾರಪ್ಪನವರು  ಆರ್ ಪ್ರಸನ್ನಕುಮಾರ್ ಅತ್ಯುತ್ತಮ ಅಭ್ಯರ್ಥಿಯಾಗಿದ್ದರೆ ಪ್ರಾಮಾಣಿಕವಾಗಿ ಈಗಾಗಲೇ ಕೆಲಸವನ್ನ ಮಾಡಿದ್ದಾರೆ ಹಾಗಾಗಿ ಅವರನ್ನು ಸರ್ವಾನುಮತದಿಂದ ಗೆಲ್ಲಿಸಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಬಿಜೆಪಿಯ ಆಡಳಿತ ಈಗಾಗ್ಲೇ ಜನಕ್ಕೆ ವಾಕರಿಕೆ ಬಂದಂತಾಗಿದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ಕಾರ್ಯಗಳು ನಡಿತಲ್ಲಾ ಮನೆ ಕೊಡದೆ ಇರುವವರು ಹಾಗೂ ಎನರ್ಜಿಯ ಹಣ ಬಿಡುಗಡೆ ಮಾಡದೆ ಇರುವವರು  ಬಿಜೆಪಿಯವರು. ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕನ್ನು ಮೊಟಕು ಗೊಳಿಸಿದ…

Read Full News

ರೈಲ್ವೆ ಲೆವೆಲ್ ಕ್ರಾಸಿಂಗ್ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ:…!

ಶಿವಮೊಗ್ಗ: ಮೂರು ಕಡೆ ರೈಲ್ವೆ ಲೆವೆಲ್ ಕ್ರಾಸಿಂಗ್ ಕಾಮಗಾರಿ ನಡೆಯುತ್ತಿದ್ದು, ವಾಹನ ಸವಾರರು ಈ ಕೆಳಕಂಡ ಪರ್ಯಾಯ ಮಾರ್ಗವನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ. ಶಿವಮೊಗ್ಗ ನಗರ-ಕುಂಸಿ ಸ್ಟೇಷನ್ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.49, 50 ಮತ್ತು 79 ರ ಲೆವೆಲ್ ಕ್ರಾಸಿಂಗ್‍ನಲ್ಲಿ ತಾಂತ್ರಿಕ ಪರಿಶೀಲನೆ ಮಾಡುವುದಕ್ಕಾಗಿ ಗೇಟ್‍ಗಳನ್ನು ಮುಚ್ಚಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಂಡಲಾಗಿದೆ. ಎಲ್‍ಸಿ ನಂ 50,ಶಿವಮೊಗ್ಗ – ಸವಳಂಗಮಾರ್ಗ ಡಿ.06 ರ ರಾತ್ರಿ 10.30…

Read Full News

ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ :

ಶಿವಮೊಗ್ಗ: ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಇಂದು ವಿದ್ಯಾರ್ಥಿ ಸಂಘಟನೆ ವತಿಯಿಂದ ನೆಹರೂಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ನಂತರ ಜಯನಗರ ಪೊಲೀಸ್ ಠಾಣೆಗೆ ಆರಗ ಜ್ಞಾನೇಂದ್ರ ವಿರುದ್ಧ ದೂರು ನೀಡಿದರು. ಪೊಲೀಸರು ಒಂದು ಗಂಟೆ ಖಾಕಿ ಕಳಚಿ ಮನೆ ಸೇರಿಕೊಂಡರೆ ನಿಮ್ಮ ಸಚಿವ ಸ್ಥಾನವೂ ಇರುವುದಿಲ್ಲ. ಸರ್ಕಾರವೂ ಇರುವುದಿಲ್ಲ. ಒಳ್ಳೆಯವರು,ಕೆಟ್ಟವರು ಎಲ್ಲಾ ಇಲಾಖೆಯಲ್ಲೂ ಇದ್ದಾರೆ ಎಂದರು. ಪ್ರತಿಭಟನೆಗೆ ಕರುನಾಡ ಯುವ ಶಕ್ತಿ ಸಂಘಟನೆ ಬೆಂಬಲ ನೀಡಿತ್ತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘಟನೆ…

Read Full News

ಆಲುವಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ವಾಲಿಬಾಲ್ ಪಂದ್ಯಾವಳಿ : ಸೋಲು, ಗೆಲುವು ಮುಖ್ಯವಲ್ಲ. ಸ್ಪರ್ಧಾ ಮನೋಭಾವ ಬೆಳೆಸಿಕೊಂಡು ಭಾಗವಹಿಸುವುದೇ ಮುಖ್ಯ : ವೀರೇಶ್ ಆಲುವಳ್ಳಿ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಆಲುವಳ್ಳಿ ಗ್ರಾಮದಲ್ಲಿ ಶ್ರೀ ಸಿದ್ದಿವಿನಾಯಕ ಗೆಳೆಯರ ಬಳಗ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಹೊಸನಗರ ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ಉದ್ಘಾಟಿಸಿದರು. ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಆಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಸ್ಪರ್ಧಾ ಮನೋಭಾವ ಬೆಳೆಸಿಕೊಂಡು ಭಾಗವಹಿಸುವುದೇ ಮುಖ್ಯ. ಸೋಲು ಗೆಲುವಿನ ಮೊದಲ ಮೆಟ್ಟಿಲು ಎಂಬುದನ್ನು ಅರಿತು ಆಟಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಸಿದ್ದಿ ವಿನಾಯಕ ಗೆಳೆಯರ ಬಳಗಕ್ಕೆ ಈ ಬಾರಿ ಕೊಟ್ಟಂತಹ ಸಲಹೆ ಸಹಕಾರವನ್ನು ಮುಂದಿನ ಬಾರಿಯು ನೀಡುತ್ತೇನೆ…

Read Full News

ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆದಿದ್ದಕ್ಕೆ ಮಸೀದಿ ಅಧ್ಯಕ್ಷ ಸ್ಥಾನದಿಂದ ವಜಾ : ಜಾತ್ಯಾತೀತತೆ ಎಂಬ ಮಾತು ಕೇವಲ ಬಾಯಿ ಮಾತಿಗೆ ಸೀಮಿತವಾಗಿದೆಯಾ ?????

ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆದಿದ್ದಕ್ಕೆ ಮಸೀದಿ ಅಧ್ಯಕ್ಷರನ್ನು ಸ್ಥಾನದಿಂದ ವಜಾ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಸಿ.ಎನ್.ಅಕ್ಮಲ್ ಜಾಮಿಯಾ ಮಸೀದಿಯ ಅಧ್ಯಕ್ಷ ಸ್ಥಾನದಿಂದ ವಜಾಗೊಂಡವರು. ಅಕ್ಮಲ್ ಅವರು ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ಕೂಡ. ಇತ್ತೀಚೆಗೆ ನಗರದ ರಾಮನಹಳ್ಳಿಯಲ್ಲಿ ನೂತನವಾಗಿ ಆರಂಭಗೊಂಡ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗ್ರಾಮಸ್ಥರ ಮನವಿ ಮೇರೆಗೆ ಅನ್ನದಾನ ಏರ್ಪಡಿಸಿದ್ದರು. ಈ ವೇಳೆ ಅಕ್ಮಲ್ ಅವರು ದೇವಸ್ಥಾನಕ್ಕೂ ಹೋಗಿದ್ದರು. ಅಲ್ಲಿ ಪೂಜೆ ಬಳಿಕ ಮಂಗಳಾರತಿ ಪಡೆದಿದ್ದರು. ಈ ಕಾರಣಕ್ಕೆ ಅವರನ್ನು ಜಾಮೀಯ ಮಸೀದಿ ಅಧ್ಯಕ್ಷ ಸ್ಥಾನದಿಂದ…

Read Full News

ರಿಪ್ಪನ್ ಪೇಟೆಯಲ್ಲಿ ನೂತನವಾಗಿ ಶುಭಾರಂಭಗೊಂಡ ಸ್ತ್ರೀ ಮತ್ತು ಮಕ್ಕಳ ಕ್ಲಿನಿಕ್ : ಮಾಜಿ ಶಾಸಕರಿಂದ ಉದ್ಘಾಟನೆ

ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಸ್ತ್ರೀ ಮತ್ತು ಮಕ್ಕಳ ಕ್ಲಿನಿಕ್ ಮತ್ತು ಪರಮೇಶ್ ಮೆಡಿಕಲ್ ಇಂದು ರಿಪ್ಪನ್ ಪೇಟೆಯ ತೀರ್ಥಹಳ್ಳಿ ರಸ್ತೆಯಲ್ಲಿ ಶುಭಾರಂಭಗೊಂಡಿದೆ. ಇಂದು ಬೆಳಿಗ್ಗೆ ಸಾಗರದ ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರು ಉದ್ಘಾಟಿಸಿ ಶುಭ ಹಾರೈಸಿದರು.ಮಾಜಿ ಶಾಸಕ ಹಾಗೂ ವೈದ್ಯಕೀಯ ಕ್ಷೇತ್ರದ ಹಿರಿಯರಾದ ಡಾ ಜಿ ಡಿ ನಾರಾಯಣಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ರಿಪ್ಪನ್ ಪೇಟೆ ಹಾಗೂ ಸುತ್ತ ಮುತ್ತಲ ಭಾಗಗಳ ಜನರಿಗೆ ಅದರಲ್ಲೂ…

Read Full News

ತೀರ್ಥಹಳ್ಳಿಯಲ್ಲಿ ಗೋರಕ್ಷಕರ ಮೇಲೆ ವಾಹನಹತ್ತಿಸಿ ಹತ್ಯೆಗೆ ಯತ್ನಿಸಿದ್ದ ಆರೋಪಿಗಳಾದ ಅಪ್ರೋಜ್ ಮತ್ತು ಇರ್ಫಾನ್ ಬಂಧನ

ತೀರ್ಥಹಳ್ಳಿ : ಗೋರಕ್ಷಣೆ ಮಾಡಲು ತೆರಳಿದ್ದ ಇಬ್ಬರು ಯುವಕರ ಮೇಲೆ ವಾಹನ ಹತ್ತಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಐದು ದಿನಗಳ ಹಿಂದೆ  ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯ ಸಮೀಪ ವಾಹನವೊಂದರಲ್ಲಿ ಅಕ್ರಮವಾಗಿ  ಸಾಗಾಟ ನಡೆಸುತ್ತಿದ್ದ ಗೋವುಗಳನ್ನು ರಕ್ಷಣೆ ಮಾಡಲು ಇಬ್ಬರು ಯುವಕರು ಬೈಕಿನಲ್ಲಿ ತೆರಳಿದ್ದರು. ಈ ಸಂದರ್ಭದಲ್ಲಿ ಅಕ್ರಮ ಗೋಸಾಗಾಟಗಾರರು ಯುವಕರ ಮೇಲೆ ವಾಹನ ಹತ್ತಿಸಿ ಅವರನ್ನು ಗಂಭೀರವಾಗಿ ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದರು. ಘಟನೆಯ ಕುರಿತಾಗಿ ಜಿಲ್ಲೆಯಾದ್ಯಂತ ಹಿಂದೂ ಪರ ಸಂಘಟನೆಗಳು ತೀವ್ರ…

Read Full News

ಹರಿದ್ರಾವತಿ ಸರ್ಕಾರಿ ವೈದ್ಯರನ್ನು ಬದಲಾಯಿಸುವಂತೆ ಬೃಹತ್ ಪ್ರತಿಭಟನೆ : ಪ್ರತಿಭಟನೆಗೆ ಮಣಿದ ತಾಲ್ಲೂಕು ಆರೋಗ್ಯಧಿಕಾರಿ

ಹರಿದ್ರಾವತಿ : ಇಲ್ಲಿನ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಕಳೆದ ಎರಡು ತಿಂಗಳಿನಿಂದ ನಿರಂತರ ಗೈರಾಗಿರುವ ವೈದ್ಯಧಿಕಾರಿಗಳ ಬದಲಿಗೆ ಬೇರೆ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ನಡೆದ ಪ್ರತಿಭಟನೆಗೆ ಸ್ಪಂದಿಸಿರುವ ತಾಲ್ಲೂಕು ವೈದ್ಯಾಧಿಕಾರಿಗಳು ಸೋಮವಾರದಿಂದಲೇ ಬದಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇಂದು ಹರಿದ್ರಾವತಿ ಪ್ರಾಥಮಿಕ ಅರೋಗ್ಯ ಕೇಂದ್ರದ ಎದುರು ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಹಳ್ಳಿ ಬಟ್ಟೆಮಲ್ಲಪ್ಪ -ಆಲಗೇರಿಮಂಡ್ರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಡಾ. ಸುರೇಶ್…

Read Full News

ನ್ಯಾಯಲಯದ ತೀರ್ಪು ಸತ್ಯಕ್ಕೆ ಸಂದ ಜಯವಾಗಿದೆ : ಮಹಾಲಕ್ಷ್ಮಿ ಅಣ್ಣಪ್ಪ

ರಿಪ್ಪನ್‌ಪೇಟೆ: ಕಳೆದ ವರ್ಷ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯ ಸಂದರ್ಭದಲ್ಲಿ ಬರುವೆ 1ನೇ ವಾರ್ಡ್ ನಲ್ಲಿ ನಡೆದ ಮತದಾನದಲ್ಲಿ ಅಕ್ರಮವಾಗಿದೆ ಎಂದು ದಾಖಲಾಗಿದ್ದ ಮೊಕದ್ದಮೆಯನ್ನು ಹೊಸನಗರ ಜೆ ಎಂಎಫ್ ಸಿ ನ್ಯಾಯಾಲಯ ವಜಾ ಮಾಡಿದೆ. ಘಟನೆಯ ಹಿನ್ನಲೆ:  ಒಬ್ಬನೇ ವ್ಯಕ್ತಿ ಎರಡು-ಮೂರು ವಾರ್ಡ್‌ಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಮತದಾನದ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನಕ್ಕೆ ಬರುವೆ 1ನೇ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಪರಾಜಿತ ಅಭ್ಯರ್ಥಿ ಮೆಣಸೆ ಆನಂದ್ ರವರು ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ…

Read Full News

ಸಾಗರ ಬಳಿ ಭೀಕರ ಅಪಘಾತ : ಬೈಕ್ ಸವಾರ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ

ಸಾಗರ: ತಾಳಗುಪ್ಪದ ನಾಯರ್ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಸಂಜೆ ಸುಮಾರಿಗೆ ದ್ವಿಚಕ್ರವಾಹನ ಅಪಘಾತವಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶುಕ್ರವಾರ ಸಂಜೆ ಸಾಗರ ತಾಲೂಕಿನ ತಾಳಗುಪ್ಪದ ನಾಯರ್ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರ ವಾಹನ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.  ಮತ್ತೋರ್ವ ವ್ಯಕ್ತಿಗೆ ಬಲವಾದ ಪೆಟ್ಟು ಬಿದ್ದಿದೆ ಸಾಗರ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತಪಟ್ಟ ವ್ಯಕ್ತಿ ಶಿವಮೊಗ್ಗ ಮೂಲದ…

Read Full News

ಸಂಘದ ಕಾರ್ಯವೈಖರಿಗೆ ಬೇಸತ್ತು ಭಂಡಾರಿ ಸಮಾಜದ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ !!!

ರಿಪ್ಪನ್ ಪೇಟೆ : ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳನ್ನೊಳಗೊಂಡ ಭಂಡಾರಿ ಸಮಾಜದ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದೇವರಾಜ್ ಭಂಡಾರಿ ಬಾಳೂರು ರಾಜಜೀನಾಮೆ ನೀಡಿದ್ದಾರೆ.  ಡಿ,3 ಶುಕ್ರವಾರ ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನ ಸಿದ್ದಪ್ಪನ ಗುಡಿ ದೇವಸ್ಥಾನ ಇಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಸಂಘದ ಕಾರ್ಯವೈಖರಿಗೆ ಬೇಸತ್ತು ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿ ಸಂಘದ ಅಧ್ಯಕ್ಷ ಹಿರಿಯಣ್ಣ ಭಂಡಾರಿ ಯವರಿಗೆ ರಾಜೀನಾಮೆಯನ್ನು ಸಲ್ಲಿಸಿದರು. ಈ ಸಭೆಯಲ್ಲಿ ಭಂಡಾರಿ ಸಮಾಜದ ಮುಖಂಡರಾದ ನಾಗರಾಜ್ ಭಂಡಾರಿ ಅರಸಾಳು,ವಾಸು ಎಂ,ಬಾಲು ದೂನ,ಪಾಂಡುರಂಗ…

Read Full News

ಅಪಘಾತಕ್ಕೀಡಾದ ಕುಟುಂಬದ ನೆರವಿಗೆ ತಕ್ಷಣ ಧಾವಿಸಿ ಉಪಚಾರಗೈದಾ ಸಾಗರದ ಯುವ ಪತ್ರಕರ್ತ ಜಮೀಲ್ ಸಾಗರ್

ಇಂದು ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ರಟ್ಟಿಹಳ್ಳಿ ತಾಲ್ಲೂಕಿನ  ಒಂದು ಕುಟುಂಬದವರು ಸಿಗಂದೂರು ಶ್ರೀಚೌಡೇಶ್ವರಿ ದರ್ಶನಕ್ಕೆ ತೆರಳುತ್ತಿದ್ದ ಮಾರ್ಗ ಮಧ್ಯೆ ಅಪಘಾತ ಸಂಭವಿಸುತ್ತದೆ ತಕ್ಷಣ ಅವರು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಬರುತ್ತಾರೆ.ಇದೇ ಸಮಯಕ್ಕೆ ಸಾಗರದ ಆಸ್ಪತ್ರೆಗೆ ಧಾವಿಸಿದ ಯುವ ಪತ್ರಕರ್ತ ಜಮೀಲ್ ಸಾಗರ್ ರವರು ಮುತವರ್ಜಿ ವಹಿಸಿ ವೈದ್ಯರ ಬಳಿ ಇವರನ್ನು ಕರೆದುಕೊಂಡು ಹೋಗಿ ವಿಶೇಷ ಚಿಕಿತ್ಸೆಯನ್ನು ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಇಬ್ಬರು ಪುಟ್ಟ ಮಕ್ಕಳೊಂದಿಗೆ ವೃದ್ಧರೂ ಆಗಮಿಸಿದಂತಹ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಇವರ ಜೊತೆಗಿದ್ದು ಇವರಿಗೆ ಚಿಕಿತ್ಸೆಯನ್ನು…

Read Full News

ದನಗಳ್ಳರಿಗೆ ಸಹಕರಿಸುವ ಪೊಲೀಸರ ವಿರುದ್ದ ಕಿಡಿಕಾರಿದ ಗೃಹ ಸಚಿವ ಆರಗ ಜ್ಞಾನೇಂದ್ರ :ಸ್ವಪಕ್ಷದ ಕಾರ್ಯಕರ್ತರಿಂದಲೇ ವೈರಲ್ ಆಯ್ತಾ ವಿಡಿಯೋ :

ಕರ್ನಾಟಕ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ತಮ್ಮ ನಿವಾಸದ ಕಚೇರಿಯಿಂದ ಪಕ್ಷದ ಕಾರ್ಯಕರ್ತರ ಎದುರಲ್ಲೇ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧಿಕಾರಿಗೆ ಕರೆ ಮಾಡಿ ದನಕಳ್ಳತನದ ಬಗ್ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.  ಪೊಲೀಸರಿಗೆ ಸರ್ಕಾರದಿಂದ ಕೈ ತುಂಬಾ ಸಂಬಳ ಕೊಡಲಾಗಿದೆ. ಆದರೂ ನಾಯಿ ಎಂಜಲು ಕಾಸನ್ನು ತಿಂದು ಹಾಗೆ ಬಿದ್ದಿರ್ತಾರೆ. ಯೋಗ್ಯತೆ ಇಲ್ಲವೆಂದರೆ ಯೂನಿಫಾರ್ಮ್ ಬಿಚ್ಚಿಟ್ಟು ಮನೆಗೆ ಹೋಗಲಿ. ಮಣ್ಣು ಹೊರಲಿ ಎಂದು ಕೂಗಾಡಿದ್ದಾರೆ. ಪ್ರತಿನಿತ್ಯ ಗೋವು ಸಾಗಾಟ ಮಾಡುವವರು ಯಾರೆಂದು ಪೊಲೀಸರಿಗೆ. ಆದರೂ ಲಂಚ…

Read Full News

ಶಿವಮೊಗ್ಗ ಜಿಲ್ಲೆಯಲ್ಲಿ ಬಹುತೇಕ ಜೆಡಿಎಸ್ ಬೆಂಬಲಿತ ಸದಸ್ಯರು ಕಾಂಗ್ರೆಸ್ ಬಗ್ಗೆ ಒಲವು : ವರಿಷ್ಠರ ಗಮನಕ್ಕೆ ತಂದು ಖಚಿತ ನಿರ್ಧಾರ – ಎಂ ಶ್ರೀಕಾಂತ್

ಶಿವಮೊಗ್ಗ: ಜೆಡಿಎಸ್ ಕಚೇರಿಯಲ್ಲಿ ಇಂದು ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಬೆಂಬಲಿತ ಚುನಾಯಿತ ಜನಪ್ರತಿನಿಧಿಗಳ ಸಭೆ ನಡೆಯಿತು. ಭದ್ರಾವತಿ ಹೊರತುಪಡಿಸಿ ಬೇರೆ ತಾಲೂಕಿನ ಜೆಡಿಎಸ್ ಬೆಂಬಲಿತ ಬಹುತೇಕ ಸದಸ್ಯರು ಕಾಂಗ್ರೆಸ್ ಬೆಂಬಲಿಸಲು ಒಲವು ತೋರಿದ್ದು, ಇನ್ನೂ ಎರಡು ತಾಲೂಕಿನ ಸದಸ್ಯರ ಜೊತೆ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸದಸ್ಯರ ತೀರ್ಮಾನವನ್ನು ವರಿಷ್ಠರ ಗಮನಕ್ಕೆ ತಂದು ಖಚಿತ ನಿರ್ಧಾರ ತೆಗೆದುಕೊಳ್ಳುವುದಾಗಿ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ತಿಳಿಸಿದ್ದಾರೆ. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಎಂ. ಶ್ರೀಕಾಂತ್…

Read Full News

ಆರ್ಯ ಈಡಿಗ ನೌಕರರ ಕ್ರಿಯಾವೇದಿಕೆಯಿಂದ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಆರ್ಥಿಕ ನೆರವು :

ರಿಪ್ಪನ್ ಪೇಟೆ : ಕಳೆದ ಎರಡು ತಿಂಗಳ ಹಿಂದೆ ರಿಪ್ಪನ್ ಪೇಟೆ ಪಟ್ಟಣದ ಮೇರಿ ಮಾತಾ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಭರತ್ ಬೆಳ್ಳಿ (14)ಎಂಬ ವಿದ್ಯಾರ್ಥಿ ಆಕಸ್ಮಿಕವಾಗಿ ಕಾಲುಜಾರಿ ತಮ್ಮ ಮನೆಯ ಸಮೀಪದಲ್ಲಿರುವ ಹಳ್ಳಕ್ಕೆ ಬಿದ್ದು ಮೃತನಾಗಿದ್ದ.  ಮೃತನ ತಂದೆ ವಾಸು ರವರು ರಿಪ್ಪನ್ ಪೇಟೆಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುಟುಂಬಕ್ಕೆ ಹೊಸನಗರ ತಾಲೂಕು ಆರ್ಯ ಈಡಿಗ ನೌಕರರ ಕ್ರಿಯಾ ವೇದಿಕೆಯ ವತಿಯಿಂದ 31 ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ನೀಡಿದರು. …

Read Full News

ಅಪ್ಪು ನಮನ ಕಾರ್ಯಕ್ರಮದಲ್ಲಿ ಇಡೀ ಊರೂರಿಗೆ ಬಾಡೂಟ ಬಡಿಸಿ ಅಭಿಮಾನ ಮೆರೆದ ಚನ್ನಶೆಟ್ಟಿಕೊಪ್ಪ ಗ್ರಾಮಸ್ಥರು :

ಕರ್ನಾಟಕದ ಪವರ್ ಸ್ಟಾರ್ ಅಪ್ಪು ನಮ್ಮನ್ನ ಅಗಲಿ ಈಗಾಗಲೇ ಒಂದೂವರೆ ತಿಂಗಳು ಕಳೆದಿದೆ ಆದರೆ ಅವರ ಸಾಧನೆ ಸಾರ್ಥಕತೆ ಹಾಗೂ ಅವರ ದಾನ ಧರ್ಮದ ಕಾರ್ಯಗಳು ಎಂದು ಕೂಡ ನಮ್ಮ ಹೃದಯದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಕರ್ನಾಟಕದ ದೊಡ್ಮನೆ ಹುಡುಗನ ಹೆಸರಿನಲ್ಲಿ ಇದೀಗ ರಾಜ್ಯಾದ್ಯಂತ ಗಲ್ಲಿಗಲ್ಲಿಗಳಲ್ಲಿ ಸರ್ಕಲ್ ಸರ್ಕಲ್ ಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಅಪ್ಪು ಹೆಸರನ್ನು ನಾಮಕರಣ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಚೆನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ಅಪ್ಪು ಅಭಿಮಾನಿಗಳು ಇದೀಗ ಚನ್ನಶೆಟ್ಟಿಕೊಪ್ಪ ವೃತ್ತಕ್ಕೆ ಪುನೀತ್…

Read Full News

ಸಾಗರದಲ್ಲಿ ಫೀಲ್ಡ್ ಗೆ ಇಳಿದ ನೂತನ ಎಎಸ್ಪಿ ರೋಹನ್ ಜಗದೀಶ್:: ಸಾಗರದಲ್ಲಿ ಗಾಂಜಾ ಮಾಫಿಯಾ ಸಂಪೂರ್ಣ ಫಿನಿಷ್ ಫಿನಿಷ್ !!

ನೂತನ ಸ್ಮಾರ್ಟ್ ಐಪಿಎಸ್ ಆಫೀಸರ್ ರೋಹನ್ ಜಗದೀಶ್  ಇದೀಗ ಸಾಗರಕ್ಕೆ ಬಂದದ್ದೇ ತಡ ಅಪರಾಧಗಳನ್ನು ತಡೆಯುವಲ್ಲಿ ಪ್ರಾಮಾಣಿಕವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಸಾಗರ ತಾಲ್ಲೂಕಿನಲ್ಲಿ ಇಂದು ಗಾಂಜಾ ಸೇವನೆ ಮಾಡುತ್ತಿದ್ದ 3 ಜನರನ್ನು ಹಾಗೂ ಮಾರಾಟ ಮಾಡುತ್ತಿದ್ದ ಇಬ್ಬರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಗರದ ವಿವಿಧೆಡೆ ದಾಳಿ ನಡೆಸಿದ ಎಎಸ್ ಪಿ ತಂಡ 15000 ಸಾವಿರ ರೂ ಹಾಗೂ 250 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದು ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ….

Read Full News

ಬಿಜೆಪಿಯ ಏಜೆಂಟ್ ರೀತಿ ಕಾರ್ಯ ನಿರ್ವಹಿಸುತ್ತಿರುವ ನಾಗೇಶ್ ಡೋಂಗ್ರೆ ಯನ್ನು ಕೂಡಲೇ ವಜಾ ಮಾಡಿ : ಗೋಪಾಲಕೃಷ್ಣ ಬೇಳೂರು

ಶಿವಮೊಗ್ಗ: ಸಹಕಾರ ಕ್ಷೇತ್ರದಲ್ಲಿ ನಾಗೇಶ್ ಡೋಂಗ್ರೆ ಎಂಬ ಭ್ರಷ್ಟ ಅಧಿಕಾರಿ ಸೇರಿಕೊಂಡಿದ್ದು, ಈತನನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ನಾಗೇಶ್ ಡೋಂಗ್ರೆ ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾನೆ. ಡಿಸಿಸಿ ಬ್ಯಾಂಕ್ ನ ನಿರ್ದೇಶಕರನ್ನು ವಜಾ ಮಾಡಲು ಹೊರಟಿದ್ದಾನೆ. ಹಾಲು ಒಕ್ಕೂಟದ ಚುನಾವಣೆಯಲ್ಲಿ ಮಾಡಲೇ ಇಲ್ಲ. ಈ ಹಿಂದೆ ಈತನ ಮೇಲೆ ಭ್ರಷ್ಟಾಚಾರದ ಆರೋಪ ಕೂಡ ಇದೆ. ಮುಂಬಡ್ತಿ…

Read Full News

ಕೇರಳದಿಂದ ಬಂದ 23 ನರ್ಸಿಂಗ್​ ವಿದ್ಯಾರ್ಥಿಗಳಲ್ಲಿ ಕೋವಿಡ್ ಪತ್ತೆ : ನಂಜಪ್ಪ ನರ್ಸಿಂಗ್ ಕಾಲೇಜ್ ಸೀಲ್ ಡೌನ್

ಶಿವಮೊಗ್ಗ: ನಂಜಪ್ಪ ನರ್ಸಿಂಗ್​ ಕಾಲೇಜಿನ 23 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ವಿದ್ಯಾರ್ಥಿಗಳೆಲ್ಲರೂ ಕೇರಳದಿಂದ ವಾಪಸ್ಸಾಗಿದ್ದರು ಎಂದು ತಿಳಿದುಬಂದಿದೆ. ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕೋವಿಡ್​ ಕೇರ್​ ಸೆಂಟರ್​ನಲ್ಲಿ ಇರಿಸಲಾಗಿದೆ. ನಂಜಪ್ಪ ಲೈಫ್ ಕೇರ್ ಹಾಗೂ ನಂಜಪ್ಪ ನರ್ಸಿಂಗ್ ಕಾಲೇಜನ್ನು ಸೀಲ್​ಡೌನ್ ಮಾಡಲಾಗಿದೆ. ಉಳಿದ ವಿದ್ಯಾರ್ಥಿಗಳ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ. ಜಿಲ್ಲೆಯಲ್ಲಿ ಶೂನ್ಯಕ್ಕೆ ಬಂದಿದ್ದ ಕೊರೊನಾ ಪ್ರಕರಣ ಇತ್ತೀಚಿನ ಪ್ರಕರಣಗಳಿಂದ ಏರಿಕೆಯಾಗುತ್ತಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ.

Read Full News

ಶಿವಮೊಗ್ಗದ ಕವಯತ್ರಿ ನಿತ್ಯಶ್ರೀ ಗೆ ಒಲಿದ ರಾಜ್ಯ ಮಟ್ಟದ ಉತ್ತಿಷ್ಟ ಸಾಧಕ ಪ್ರಶಸ್ತಿ :

ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಅನೇಕ ಕವಿ ಸಾಹಿತಿಗಳನ್ನು ನೀಡಿ ಕರ್ನಾಟಕ ರಾಜ್ಯದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದೆ. ಅದರಂತೆ ಶಿವಮೊಗ್ಗದ ಉದಯೋನ್ಮುಖ ಯುವ ಕವಯಿತ್ರಿ ಅಂಕಣಗಾರ್ತಿ, ಲೇಖಕಿ ಹಲವು ಜಿಲ್ಲೆಗಳ ಪತ್ರಿಕೆಯ ಬರಹಗಾರ್ತಿ ಕು. ನಿತ್ಯಶ್ರೀ ಆರ್ ಇವರಿಗೆ ಇತ್ತೀಚಿಗೆ ಬೆಂಗಳೂರಿನಲ್ಲಿ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ “ಉತ್ತಿಷ್ಠ ಸಾಧಕ ರತ್ನ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.   ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಸುಜಾತಾ, ಗೌರಧ್ಯಕ್ಷರು ಶ್ರೀ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.