w
Headlines
Home » ಮರಳು ಲಾರಿ ಮಾಲೀಕರಿಂದ ಶಾಸಕ ಹರತಾಳು ಹಾಲಪ್ಪರವರಿಗೆ ಕಮಿಷನ್ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ: ಬೇಳೂರು ಗೋಪಾಲಕೃಷ್ಣ

ಮರಳು ಲಾರಿ ಮಾಲೀಕರಿಂದ ಶಾಸಕ ಹರತಾಳು ಹಾಲಪ್ಪರವರಿಗೆ ಕಮಿಷನ್ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ: ಬೇಳೂರು ಗೋಪಾಲಕೃಷ್ಣ

ಹೊಸನಗರ: ಹೊಸನಗರ-ಸಾಗರ ಕ್ಷೇತ್ರದ ಶಾಸಕ ಹಾಗೂ ಎಂಎಸ್ಐಎಲ್ ಅಧ್ಯಕ್ಷ  ಹರತಾಳು ಹಾಲಪ್ಪನವರು ಮರಳು ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದಾರೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ನಾನು ಸಿದ್ಧ, ತಾಕತ್ತಿದ್ದರೆ ಹಾಲಪ್ಪನವರು ಕಮೀಷನ್ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಹೊಸನಗರ ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ  ಬೇಳೂರು ಗೋಪಾಲಕೃಷ್ಣರವರು ಸವಾಲು ಹಾಕಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ  ಅವರು ತಾವು ಪ್ರಾಮಾಣಿಕರು ಮರಳು ಮಾಧ್ಯಮದವರಿಂದ ಒಂದು ರೂಪಾಯಿ ಸಹ ಸ್ವೀಕರಿಸಿಲ್ಲ ಎಂದು ತಮ್ಮ ಬೆಂಬಲಿಗರಿಂದ ಪತ್ರಿಕಾಗೋಷ್ಠಿ ನಡೆಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಶಾಸಕರು ಲಾರಿ ಮಾಲೀಕರನ್ನು ಮನೆಗೆ ಕರೆಸಿ ನೀವು ಬೇಳೂರು ವಿರುದ್ಧ ಪತ್ರಿಕಾ ಹೇಳಿಕೆ ನೀಡದಿದ್ದರೇ ನಿಮಗೆ ಆಕ್ರಮವಾಗಿ ಮರಳು ಹೊಡೆಯಲು ಬೀಡುವುದಿಲ್ಲ ಎಂದು ತಾಕೀತು ಮಾಡಿದ್ದು ಶಾಸಕರಿಗೆ ಹೆದರಿ ಆಕ್ರಮ ಮರುಳು ದಂಧೆ ಮಾಡುವವರು ನನ್ನ ವಿರುದ್ಧ ಪತ್ರಿಕ ಹೇಳಿಕೆ ನೀಡುತ್ತಿದ್ದಾರೆ ಅವರಿವವರ ಮೂಲಕ ಹೇಳಿಕೆ ನೀಡಿಸುವುದರ ಬದಲು ನಾನು ಸಿಗಂದೂರು ದೇವಸ್ಥಾನ ಬಿಟ್ಟು ಬೇರೆ ಯಾವುದೇ ದೇವಸ್ಥಾನದಲ್ಲಿಯಾದರೂ ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದಾರೆ ಎಂದು ಪ್ರಮಾಣ ಮಾಡುತ್ತೇನೆ ಎಂದರು  ಎಂದರು.

 ಸಚಿವ ಈಶ್ವರಪ್ಪ ರವರ ಹೇಳಿಕೆ ಶುದ್ಧ ಸುಳ್ಳು :

ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರಪ್ಪನವರು ಮುಂದಿನ ತಿಂಗಳು ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆ ಘೋಷಣೆಯಾಗಲಿದೆ ಎಂದು ಹೇಳಿದ್ದು ಇದು ಶುದ್ಧ ಸುಳ್ಳು. ಈಶ್ವರಪ್ಪನವರ ಮಾತಿಗೆ ಸರ್ಕಾರದಲ್ಲಿ ಯಾವುದೇ ಕಿಮ್ಮತ್ತಿಲ್ಲ. ಚುನಾವಣೆ ನಡೆದರೆ ಖಂಡಿತ ಸೋಲುತ್ತೇವೆ ಎಂಬ ಭಯದಲ್ಲಿ ಚುನಾವಣೆಗಳನ್ನು ಮುಂದುಡುತ್ತಿದ್ದಾರೆ ಎಂದರು.
ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಆಡಳಿತ ಚುಕ್ಕಾಣಿ ಕುಸಿದಿದೆ ಬಿಜೆಪಿ ಎಂಎಲ್‌ಎಗಳಲ್ಲಿ ಹೊಂದಾಣಿಕೆಯಿಲ್ಲ ಅವರವರೆ ಕಚ್ಚಾಟ ನಡೆಸುತ್ತಿದ್ದಾರೆ ಇನ್ನೂ 6ತಿಂಗಳು ಸರ್ಕಾರ ಉಳಿಯುವುದು ಕಷ್ಟ ಎಂದು ಭವಿಷ್ಯ ನುಡಿದರು.
 ಪತ್ರಿಕಾಗೋಷ್ಠಿಯಲ್ಲಿ  ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎರಗಿ ಉಮೆಶ್, ಚಂದ್ರಮೌಳಿ, ಜಯಶೀಲಪ್ಪ ಗೌಡ, ಪಪಂ ಸದಸ್ಯ ಅಶ್ವಿನಿಕುಮಾರ್, ಸಣ್ಣಕ್ಕಿ ಮಂಜು, ಚೇತನ್ ದಾಸ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.