Headlines

ಆಗುಂಬೆ ಪೊಲೀಸರ ಭರ್ಜರಿ ಕಾರ್ಯಾಚರಣೆ : ಒಂದೂವರೆ ಕ್ವಿಂಟಲ್ ಅಡಿಕೆ ಕದ್ದಿದ್ದ ಆರೋಪಿ ಮಾಲು ಸಮೇತ ಬಂಧನ

ತೀರ್ಥಹಳ್ಳಿ : ಅಡಿಕೆ ಮೂಟೆ ಕದ್ದ ಕಳ್ಳನನ್ನು ಆಗುಂಬೆ ಪೊಲೀಸರು ಬಂಧಿಸಿ ಆತನಿಂದ ಸುಮಾರು ಒಂದೂವರೆ ಕ್ವಿಂಟಲ್ ಅಡಿಕೆ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಸುಧಾಕರ್ ಎಂಬುವವನು ಜನವರಿ ತಿಂಗಳಲ್ಲಿ ಕೌರಿಹಕ್ಕಲು ಬಿಎಸ್ಎನ್ಎಲ್ ವೆಂಕಟೇಶ್ ಎಂಬುವವರ ಮನೆಯಲ್ಲಿ ಒಣಹಾಕಿದ್ದ ಒಂದುವರೆ ಕ್ವಿಂಟಲ್ ಅಡಿಕೆ ಕದ್ದಿದ್ದ. ಈ ಬಗ್ಗೆ ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಡಿವೈಎಸ್ ಪಿ ಶಾಂತವೀರ, ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಪ್ರವೀಣ್ ನೀಲಮ್ಮನವರ್,ಆಗುಂಬೆ ಪಿಎಸ್ ಐ ಶಿವಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ವೀರೇಂದ್ರ, ಸುದರ್ಶನ, ಆದರ್ಶ, ಮಂಜುನಾಥ ಅವರ ಪೊಲೀಸ್ ತಂಡ  ಆರೋಪಿಯನ್ನು ಬಂಧಿಸಿದ್ದಾರೆ.

About The Author

Leave a Reply

Your email address will not be published. Required fields are marked *