ಇಲ್ಲಿನ ಸಾಗರ ರಸ್ತೆಯ ಕುಕ್ಕಳಲೆ ಸಂಪರ್ಕ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ನೆನಪಿಗಾಗಿ ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು. ಆದರೆ ಕೆಲ ವಿಕೃತ ಕಿಡಿಗೇಡಿಗಳು ಮಧ್ಯರಾತ್ರಿಯಲ್ಲಿ ಪುನೀತ್ ರಾಜಕುಮಾರ್ ಹೆಸರಿಗೆ ಬಿಳಿ ಬಣ್ಣವನ್ನು ಬಳಿದು ವಿಕೃತಿ ಮೆರೆದಿದ್ದರು.
ನಂತರ ಪುನೀತ್ ನಾಮಫಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಹಲವಾರು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.ಆದರೆ ಇಲ್ಲಿಯವರೆಗೂ ಯಾವುದೇ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ.
ನಂತರ ರಿಪ್ಪನ್ ಪೇಟೆ ಗ್ರಾಮಾಡಳಿತ ಮಧ್ಯ ಪ್ರವೇಶಿಸಿ ಪುನೀತ್ ರಾಜಕುಮಾರ್ ಹೆಸರನ್ನು ಪುನರ್ ಬರೆಸುವುದಾಗಿ ಭರವಸೆ ನೀಡಿ ಸಂಪೂರ್ಣ ಬಿಳಿ ಬಣ್ಣ ಬಳಿದಿತ್ತು.
ಆದರೆ ಬಿಳಿ ಬಣ್ಣ ಬಳೆದು ತಿಂಗಳು ಕಳೆದರೂ ಸಹ ಗ್ರಾಮಾಡಳಿತ ಯಾವುದೇ ಹೆಸರನ್ನು ಬರೆಯಿಸಲು ಹೋಗದೆ ಜಾಣ ಕುರುಡು ಪ್ರದರ್ಶಿಸುತ್ತಿರುವುದರಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ರಾಜ್ಯ ಕಂಡ ಅಪ್ರತಿಮ ನಟನಿಗೆ ಅಗೌರವ ತೋರಿದ ಗ್ರಾಮ ಪಂಚಾಯಿತಿ ವ್ಯವಸ್ಥೆಗೆ ಹಾಗೂ ಚುನಾಯಿತ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಇತ್ತಕಡೆ ಗ್ರಾಮಪಂಚಾಯಿತಿಯ ಆಡಳಿತ ವ್ಯವಸ್ಥೆಯು ಯಾರದೋ ಮುಲಾಜಿಗೆ ಒಳಗಾಗಿ ಇದೆಯೋ ಅಥವಾ ಪ್ರಭಾವಿಗಳ ಒತ್ತಡಕ್ಕೆ ಮಣಿದು ಪುನೀತ್ ರಾಜಕುಮಾರ್ ಹೆಸರನ್ನು ಬರೆಸಲು ಸಾಧ್ಯವಾಗಲಿಲ್ಲದಿರುವುದು ಇವರ ಇಚ್ಚಾ ಶಕ್ತಿಯ ಕೊರತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.
ಇನ್ನಾದರೂ ಗ್ರಾಮಾಡಳಿತ ಎಚ್ಚೆತ್ತುಕೊಂಡು ಪುನೀತ್ ರಾಜಕುಮಾರ್ ನಾಮ ಫಲಕಕ್ಕೆ ಅವರ ಹೆಸರನ್ನು ಪುನರ್ ಬರೆಯಿಸಿ ಕರ್ನಾಟಕ ರತ್ನ ಡಾ|| ಪುನೀತ್ ರಾಜ್ ಕುಮಾರ್ ರವರಿಗೆ ಗೌರವ ಸೂಚಿಸಬೇಕಾಗಿದೆ.
- ಈ ಘಟನೆಯ ಸಂಪೂರ್ಣ ವೀಡಿಯೋ ಇಲ್ಲಿದೆ ವೀಕ್ಷಿಸಿ 👇👇👇