ರಿಪ್ಪನ್ ಪೇಟೆ : ರೋಟರಿ ಸಂಸ್ಥೆ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು ರೋಟರಿಯ ಮೂಲ ಉದ್ದೇಶ ಸಮಾಜ ಸೇವೆಯಾಗಿದೆ. ಆರೋಗ್ಯ ಶಿಕ್ಷಣ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ರೋಟರಿ ಸಂಸ್ಥೆಯು ಮುಂಚೂಣಿಯಲ್ಲಿದೆ ಎಂದು ರೋಟರಿ 31 82ರ ಜಿಲ್ಲಾ ಗವರ್ನರ್ ಎಂ ಜಿ ರಾಮಚಂದ್ರಮೂರ್ತಿ ಹೇಳಿದರು.
ರಿಪ್ಪನ್ ಪೇಟೆ ಯಲ್ಲಿ ನೂತನವಾಗಿ ನಿರ್ಮಾಣವಾದ ರೋಟರಿ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜಸೇವೆಯ ಮೂಲಕ ಪ್ರತಿಯೊಬ್ಬರೂ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬಹುದು ಎಂಬುದಕ್ಕೆ ರೋಟರಿ ಸಂಸ್ಥೆಯ ಕಾರ್ಯವೈಖರಿಗಳು ಉತ್ತಮ ಉದಾಹರಣೆಗಳಾಗಿವೆ. ಮಾನವ ಜಗತ್ತಿನಿಂದ ಪೋಲಿಯೋ ನಿರ್ಮೂಲನೆ ಮಾಡುವ ಸದುದ್ದೇಶದಿಂದ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಆರ್ಥಿಕ ನೆರವು ನೀಡುವುದರ ಮೂಲಕ ಇಂದು ಇಡೀ ಜಗತ್ತಿನಲ್ಲಿ ಪೋಲಿಯೋ ನಿಯಂತ್ರಣದೊಂದಿಗೆ ನಿರ್ಮೂಲನಕ್ಕೆ ಕಾರಣ ಭೂತವಾಗಿದೆ. ಸಮಾಜ ಸೇವೆಯನ್ನು ಮಾಡುವ ಸದುದ್ದೇಶವನ್ನು ಹೊಂದಿರುವ ಪ್ರತಿಯೊಬ್ಬ ನಾಗರಿಕನಿಗೆ ರೋಟರಿಯ ಮೂಲಕ ಸೇವೆಯನ್ನು ಸಲ್ಲಿಸಲು ಅತ್ಯುತ್ತಮ ಅವಕಾಶ ದೊರೆಯಲಿದ್ದು ಅದರ ಸದುಪಯೋಗ ಪಡೆದುಕೊಳ್ಳುವುದರ ಮೂಲಕ ರೋಟರಿ ಸಂಸ್ಥೆಯೊಂದಿಗೆ ಕೈಜೋಡಿಸಿ ದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ರೋಟರಿ 31 82ರ ಜಿಲ್ಲಾ ಸಹಾಯಕ ಗೌರ್ನರ್ ಎಲ್. ಟಿ.ತಿಮ್ಮಪ್ಪ ಹೆಗಡೆ ಮಾತನಾಡಿ ರಿಪ್ಪನ್ ಪೇಟೆ ರೋಟರಿ ಸಂಸ್ಥೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳಾದ ಆರೋಗ್ಯ.ಶಿಕ್ಷಣದ ಜೊತೆಗೆ ರೈತರಿಗೆ ಅನುಕೂಲವಾಗುವಂತಹ ರೈತರ ಮಿತ್ರದಂತಹ ಅನೇಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಜನಮಾನಸದಲ್ಲಿ ರೋಟರಿ ಸಂಸ್ಥೆ ಅತ್ಯುತ್ತಮ ಸಮಾಜಸೇವೆ ಸಂಸ್ಥೆ ಎಂದು ಮನ್ನಣೆ ಗಳಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಪ್ಪನ್ ಪೇಟೆ ರೋಟರಿ ಕ್ಲಬ್ಬಿನ ಅಧ್ಯಕ್ಷ ನಾಗಭೂಷಣ ವಹಿಸಿದ್ದರು.ರೋಟರಿ ಜಿಲ್ಲೆ 31 82 ವಲಯ 11 ರ ಜೋನಲ್ ಲೆಫ್ಟಿನೆಂಟ್ ಗಣೇಶ್ ಎನ್.ಕಾಮತ್. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕೆತಾರ್ಜಿರಾವ್ ಉಪಾಧ್ಯಕ್ಷೆ ಮಹಾ ಲಕ್ಷ್ಮಿ ಪ್ರವೀಣ್ ಕಾರ್ಯದರ್ಶಿ ಡಾಕಪ್ಪ ಇನ್ನಿತರರಿದ್ದರು.
ರೋಟರಿ ಸಂಸ್ಥೆಯ ಅಧ್ಯಕ್ಷ ನಾಗಭೂಷಣ ಆರ್ ಸ್ವಾಗತಿಸಿ. ಸಬಾಸ್ಟಿನ್ ಮ್ಯಾಥ್ಯೂಸ್ ನಿರೂಪಿಸಿ. ರಾಧಾಕೃಷ್ಣ. ಜೆ.ವಂದಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಭವನದ ನಿರ್ಮಾಣಕ್ಕೆ ಸಹಕಾರ ನೀಡಿದ ಹುಗಡಿ ವರ್ತೆಶ್ ದಂಪತಿಗಳು. ಗಣೇಶ್ ಕಾಮತ್ ದಂಪತಿಗಳು. ಎಂಬಿ ಮಂಜುನಾಥ್ ದಂಪತಿಗಳು ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ರೋಟರಿ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.