ರಿಪ್ಪನ್ ಪೇಟೆ ಯಲ್ಲಿ ಜನ ಶಿಕ್ಷಣ ಸಂಸ್ಥೆಯಿಂದ ಮಹಿಳೆಯರಿಗೆ ವಿವಿಧ ವೃತ್ತಿ ಕೌಶಲ್ಯ ತರಬೇತಿ ಶಿಬಿರ :

ರಿಪ್ಪನ್ ಪೇಟೆ : ಮಹಿಳೆಯರು ಮತ್ತು ಯುವತಿಯರು ಬದುಕು ಕಟ್ಟಿಕೊಳ್ಳಲು ಮತ್ತು ಸಾವಲಂಬಿಯಾಗಿ ಸಮಾಜದಲ್ಲಿ ಜೀವನ ನಡೆಸಲು ವೃತ್ತಿ ಕೌಶಲ್ಯದ ಸ್ವಯಂ ಉದ್ಯೋಗದ   ತರಬೇತಿ ಪಡೆದುಕೊಳ್ಳುವುದು ಅವಶ್ಯಕ ಎಂದು ಲೀಲಾ ಶಂಕರ್ ಹೇಳಿದರು.

 ಪಟ್ಟಣದ ತೀರ್ಥಳ್ಳಿ ರಸ್ತೆಯ ಭವನದಲ್ಲಿ ಜನ ಶಿಕ್ಷಣ ಸಂಸ್ಥೆಯಿಂದ ಪ್ರಾರಂಭಿಸಲಾಗಿರುವ ಟೈಲರಿಂಗ್. ಬ್ಯೂಟಿಷಿಯನ್ ಸೇರಿದಂತೆ ವಿವಿಧ ವೃತ್ತಿ ಕೌಶಲ್ಯ ತರಬೇತಿ ಶಿಬಿರದಲ್ಲಿ  ಅಜಾದ್ ಕಿ ಅಮೃತಮಹೋತ್ಸವ ಅಂಗವಾಗಿ ಮಹಿಳೆಯರಿಗೆ ಮತ್ತು ಯುವತಿಯರಿಗಾಗಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದವರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಯುವತಿಯರು  ತಮ್ಮ ಬಿಡುವಿನ ವೇಳೆಯಲ್ಲಿ ವಿವಿಧ ವೃತ್ತಿ ಕೌಶಲ್ಯ ತರಬೇತಿಯನ್ನು ಪಡೆಯುವುದರ ಮೂಲಕ ಸಾವಲಂಬಿಯಾಗಿ ಬದುಕುವುದರ ಜೊತೆಗೆ ಆರ್ಥಿಕ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಹೇಳಿದರು.


 ಜನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ  ಪ್ರೊ. ಎಸ್. ಬಿ. ಕಮಲಾಕರ್  ಹಾಗೂ ಉದ್ದೇಶ ಕರಾದ ಎಸ್ ವೈ ಅರುಣ ದೇವಿಯವರ ಮಾರ್ಗದರ್ಶನ ಮತ್ತು ಸಹಕಾರದಿಂದ ರಿಪ್ಪನ್ ಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ 75ಕ್ಕೂ ಅಧಿಕ ಯುವತಿಯರು ಮತ್ತು ಮಹಿಳೆಯರು ವಿವಿಧ ವೃತ್ತಿ ಕೌಶಲ್ಯ ತರಬೇತಿಯನ್ನು ಪಡೆದುಕೊಂಡಿದ್ದಾರೆ. ವೃತ್ತಿಕೌಶಲ್ಯ ತರಬೇತಿಯು ಮೂರು ತಿಂಗಳ ಶಿಬಿರ ವಾಗಿದ್ದು. ಮಹಿಳೆಯರು ಮತ್ತು ಯುವತಿಯರು ತಮ್ಮ ಬಿಡುವಿನ ವೇಳೆಯಲ್ಲಿ ತರಬೇತಿಯನ್ನು ಪಡೆಯಲು ಅನುಕೂಲವಾಗುವಂತೆ ಸಮಯವನ್ನು  ಸಹ ನಿಗದಿಪಡಿಸಲಾಗಿದೆ.


ಮುಂದಿನ ದಿನಗಳಲ್ಲಿ ರಿಪ್ಪನ್ ಪೇಟೆ ಪಟ್ಟಣದಲ್ಲಿ ವೃತ್ತಿ ಕೌಶಲ್ಯ ಪಡೆದ ಮಹಿಳೆಯರಿಗೆ ಮತ್ತು ಯುವತಿಯರಿಗೆ ಉದ್ಯೋಗ ಅವಕಾಶಕ್ಕಾಗಿ  ಗಾರ್ಮೆಂಟ್ಸ್  ತೆ ರೆಯುವುದರ ಮೂಲಕ  ಸಹಕಾರ ನೀಡಬೇಕೆಂದು ಶಾಸಕರಾದ ಹರತಾಳು ಹಾಲಪ್ಪ. ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ  ಮತ್ತು ಲೋಕಸಭಾ ಸದಸ್ಯರಾದ ಎಸ್ ವೈ ರಾಘವೇಂದ್ರ ರವರಿಗೆ ಶೀಘ್ರದಲ್ಲೇ ಮನವಿ ಸಲ್ಲಿಸಲಾಗುವುದು ಎಂದರು.

 ಕಾರ್ಯಕ್ರಮದಲ್ಲಿ. ಗೀತಾ.ಶ್ವೇತಾ ಅಂಬಿಕಾ. ಅಮಿತಾ .ಇನ್ನಿತರರು ಇದ್ದರು

Leave a Reply

Your email address will not be published. Required fields are marked *