ರಿಪ್ಪನ್ ಪೇಟೆ : ಮಂಡಗಟ್ಟ ( ನಗರ ರೋಡ್) ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಜಿ ಎಸ್. ಶಿವ ಕುಮಾರ್ ರವರು ಇಂದು ಸರ್ಕಾರಿ ಸೇವೆಯಿಂದ ನಿವೃತ್ತಿ ಯಾಗಿದ್ದು. ಇವರನ್ನು ರಿಪ್ಪನ್ ಪೇಟೆಯ ಗ್ರಾಮಸ್ಥರು ಮಂಡಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಗೌರವಿಸಿ ಅಭಿನಂದಿಸಿದರು.
ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಸುಮಾರು 28 ವರ್ಷಗಳ ಕಾಲ ಶಿವಮೊಗ್ಗ ಜಿಲ್ಲೆಯಜಿಲ್ಲೆಯ ವಿವಿಧೆಡೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಗ್ರಾಮೀಣ ಪ್ರದೇಶದ ಸಾವಿರಾರು ಮಕ್ಕಳನ್ನು ಜಿಲ್ಲಾಮಟ್ಟ ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಉತ್ತಮ ತರಬೇತಿ ನೀಡಿ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಪ್ರದರ್ಶನ ಮಾಡುವುದರ ಜೊತೆಗೆ ತಾವು ಕಾರ್ಯನಿರ್ವಹಿಸಿದ ಶಾಲೆಗಳಿಗೆ ಗ್ರಾಮಕ್ಕೆ. ಕೀರ್ತಿ ತರಲು ಅನುವು ಮಾಡಿಕೊಟ್ಟ ಜಿ.ಎಸ್ ಶಿವಕುಮಾರ್ ಅವರನ್ನು ಸರಳ ಹೃದಯಸ್ಪರ್ಶಿ ಗೌರವ ಸಮರ್ಪಣೆ ಯೊಂದಿಗೆ ಅಭಿನಂದಿಸಿದರು.
ಜಿ.ಎಸ್. ಶಿವಕುಮಾರ್ ರವರು ಉತ್ತಮ ಕ್ರೀಡಾಪಟುವಾಗಿ ದೈಹಿಕ ಶಿಕ್ಷಕರು ಆಗಿದ್ದರು. ಜಿಲ್ಲಾ.ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ತೀರ್ಪುಗಾರರಾಗಿಯೂ ಸಹ ಕಾರ್ಯನಿರ್ವಹಿಸಿದ್ದರು. ಹಾಗೆಯೇ ಉತ್ತಮ ಗಾಯಕರಾದ ಇವರು ಜಾನಪದ ಗೀತೆ . ಕನ್ನಡ ಹಾಗೂ ಹಿಂದಿ ಚಲನ ಚಿತ್ರಗೀತೆ ಗಳನ್ನು ಹಾಡುವುದರ ಮೂಲಕ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಗಳಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಉತ್ತಮ ಗಾಯಕರೆಂದು ಮನ್ನಣೆ ಗಳಿಸಿದ್ದರು.
ಇಂದು ನಡೆದ ಗೌರವ ಸಮರ್ಪಣ ಕಾರ್ಯಕ್ರಮದಲ್ಲಿ ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪಿ.ರಮೇಶ್. ಹಾಗೂ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಪ್ರತಿಷ್ಠಾಪನ ಸಮಿತಿಯ ಅಧ್ಯಕ್ಷ ಎನ್.ಸತೀಶ್. ಜಿ.ಎಸ್. ವರದರಾಜ್. ವೈ. ಜೆ.ಕೃಷ್ಣ. ಆರ್. ಎಸ್ ನಾಗರಾಜ್ . ಜಿ ಎಸ್ ಶ್ರೀನಿವಾಸ್ ಇನ್ನಿತರರಿದ್ದರು