w
Headlines

ಆನಂದಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ !! ವಸತಿ ಶಾಲೆ ಪ್ರಿನ್ಸಿಪಲ್ ಎತ್ತಂಗಡಿ ??

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಇರುವಕ್ಕಿಯ ನಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಗಳು ಬೆಳ್ಳಂಬೆಳಿಗ್ಗೆನೇ ಹಾಸ್ಟೆಲ್ ನಿಂದ ಹೊರ ಬಂದು ಎಡೆಹಳ್ಳಿಯ ಗಣಪತಿ ದೇವಸ್ಥಾನದ ಹತ್ತಿರ ಪ್ರತಿಭಟನೆ ನಡೆಸುತ್ತಿದ್ದರು. ಹಾಸ್ಟೆಲ್ ನ ಪ್ರಿನ್ಸಿಪಾಲ್ ಬಿ ಕೆ ಚಂದ್ರಪ್ಪ ಹಾಗೂ ಕೆಲ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ ನೀಡುತ್ತಿದ್ದು ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿದ್ದು ಬೂಟುಕಾಲಿನಿಂದ ಒದ್ದು ವಿದ್ಯಾರ್ಥಿಗಳಿಗೆ ಹಿಂಸೆ ನೀಡುತ್ತಿದ್ದಾರೆ ಹಾಗೂ ಊಟದಲ್ಲಿ ಹುಳ ಯುಕ್ತ ಆಹಾರವನ್ನು ವಿದ್ಯಾರ್ಥಿಗಳಿಗೆ ಉಣಬಡಿಸುತ್ತಿದ್ದು ಕೇಳಿದರೆ ವಿದ್ಯಾರ್ಥಿಗಳಿಗೆ…

Read Full News

ರೈಲ್ವೆ ಇಲಾಖೆ ಅಧಿಕಾರಿಗಳೇ ಬೇಜಾವಬ್ದಾರಿತನ ಬಿಡಿ:: ಆನಂದಪುರ- ಯಡೇಹಳ್ಳಿ, ಅಂದಾಸುರ ರೈಲ್ವೆ ಲೆವಲಿಂಗ್ ಕ್ರಾಸ್ ಹಂಪ್ಸ್ ನ ಸಮಸ್ಯೆಗಳತ್ತ ಗಮನ ಕೊಡಿ.!!!

ಭಾರತ ಸರ್ಕಾರದ ಬಹುಮುಖ್ಯ ಉದ್ಯಮದಲ್ಲಿ ಭಾರತೀಯ ರೈಲ್ವೆ ಬಹು ಅಗ್ರಸ್ಥಾನವನ್ನು ಪಡೆದಿದೆ.ಸುರಕ್ಷತೆಯಿಂದ ಹಿಡಿದು ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ರೀತಿಯ ಅನುಕೂಲಗಳನ್ನು ರೈಲ್ವೆ ಇಲಾಖೆ ಭಾರತೀಯರಿಗೆ ಮಾಡಿಕೊಟ್ಟಿದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತನವೋ ಅಥವಾ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯತನದಿಂದಲೋ ರಸ್ತೆಯಲ್ಲಿ ಪಯಣಿಸುವ  ಪ್ರಯಾಣಿಕರಿಗೆ  ತೊಂದರೆಯೂ ಆಗುತ್ತಿದೆ. ಇಂತಹದೇ ಸಮಸ್ಯೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ- ಯಡೇಹಳ್ಳಿ ರೈಲ್ವೇ ಲೆವಲಿಂಗ್ ಕ್ರಾಸ್ ನ ಬಳಿ ರೈಲ್ವೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಬಹುದೊಡ್ಡ ಉದ್ದನೆಯ ಹಂಪ್ಸ್ ಗಳನ್ನು ಈ…

Read Full News

ಮಹಾಮಳೆಗೆ ಆನಂದಪುರದಲ್ಲಿ ಮನೆ ಗೋಡೆ ಕುಸಿತ : ಅದೃಷ್ಟಾವಶತ್ ಪ್ರಾಣಾಪಾಯದಿಂದ ಕುಟುಂಬಸ್ಥರು ಪಾರು.

ಮಹಾಮಳೆ ಇದೀಗ ಜನರ ಜನಜೀವನವನ್ನು ಅಸ್ತವ್ಯಸ್ಥಗೊಳಿಸುತ್ತಿದೆ ಅತ್ತ ಕಡೆ ರೈತ ಕೂಡ ಮಹಾಮಳೆಗೆ ಕಂಗಾಲಾಗಿ ದೇವರ ಮೊರೆ ಹೋಗುತ್ತಿದ್ದಾರೆ.ಮಹಾಮಳೆಯ ರೌದ್ರನರ್ತನ ಅಷ್ಟಿಷ್ಟಲ್ಲ ಮಳೆಯಿಂದ ಇದೀಗ ಅನಾಹುತಗಳೇ ಹೆಚ್ಚಾಗುತ್ತಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ಅಶೋಕ ರಸ್ತೆಯ ನಿವಾಸಿ ರಾಮಣ್ಣ ರವರ ಮನೆಯ ಗೋಡೆ ಕುಸಿದಿದ್ದು ಮನೆಯ  ಹೊರಮುಖದಲ್ಲಿ ಗೋಡೆ ಕುಸಿದಿದ್ದು ಕುಟುಂಬಸ್ಥರಿಗೆ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಆರ್ ಶಂಕರ್ ಆಗಮಿಸಿದ್ದು ಸ್ಥಳ ಪರಿಶೀಲಿಸಿ ವರದಿ ಪಡೆದಿರುತ್ತಾರೆ. ವರದಿ : ಪವನ್…

Read Full News

ಆರಗ ಜ್ಞಾನೇಂದ್ರ ವಿರುದ್ಧವೇ ಕೇಸುಗಳಿವೆ, ಈಗ ಅವರೇ ಗೃಹ ಮಂತ್ರಿ!!! ಹೀಗಾದರೆ ನ್ಯಾಯ ಸಿಗುತ್ತಾ? -ಕಿಮ್ಮನೆ ರತ್ನಾಕರ್ ವ್ಯಂಗ್ಯ

ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ನಡೆದ ಎಲ್ಲಾ ಕೋಮುಗಲಭೆಯ ಹಿಂದೆ ಆರಗ ಜ್ಞಾನೇಂದ್ರರ ಪಾತ್ರ ಇದೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್​ಕಾಯಿನ್ ವಿಷಯದಲ್ಲಿ ಗೃಹ ಸಚಿವರು ಬಾಲಿಷವಾಗಿ ಮಾತನಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಬಗ್ಗೆ ಲಘುವಾಗಿ ಹೇಳಿಕೆ ನೀಡುತ್ತಿದ್ದಾರೆ. ಬಿಟ್​ಕಾಯಿನ್ ವಿಷಯದ ಗಂಭೀರತೆ ಅರಿತು ಪ್ರಧಾನಿ ಮೋದಿ ರಾತ್ರೋರಾತ್ರಿ ತರಾತುರಿಯಲ್ಲಿ ಸಭೆ ನಡೆಸಿದ್ದಾರೆ. ಸದ್ಯದ ಮಟ್ಟಿಗೆ ಆರಗ ಜ್ಞಾನೇಂದ್ರ ರಾಜ್ಯಕ್ಕಲ್ಲ, ತೀರ್ಥಹಳ್ಳಿಗೆ ಗೃಹ ಸಚಿವರಾಗಿದ್ದಾರೆ. ತೀರ್ಥಹಳ್ಳಿಯಲ್ಲಿ ನಡೆದ ಎಲ್ಲಾ ಕೋಮುಗಲಭೆಯ…

Read Full News

ಮದುವೆ ಊಟ ಮಾಡಿದ ಭದ್ರಾವತಿಯ ಗ್ರಾಪಂ ಕಾರ್ಯದರ್ಶಿ ಸಾವು: 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಭದ್ರಾವತಿ : ನಾಲ್ಕು ದಿನಗಳ ಹಿಂದೆ ಭದ್ರಾವತಿ ತಾಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಊಟ ಮಾಡಿ ಅಸ್ವಸ್ಥಗೊಂಡ ಹಲವರ ಪೈಕಿ ಇಂದು ದಾಸರಕಲ್ಲಳ್ಳಿ ಗ್ರಾಮಪಂಚಾಯತ್ ಕಾರ್ಯದರ್ಶಿ ಮೃತಪಟ್ಟಿದ್ದಾರೆ. ದಿನೇಶ್ ಸಿಂಗ್ ಮೃತಪಟ್ಟಿರುವ ದುರ್ದೈವಿ. ನಾಗತಿಬೆಳಗಲು ಗ್ರಾಮದ ಕಲ್ಯಾಣಮಂಟಪದಲ್ಲಿ ನಡೆದ ಮದುವೆಯಲ್ಲಿ ಊಟ ಮಾಡಿದ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಈ ಪೈಕಿ  ಚಿಕಿತ್ಸೆ ಫಲಿಸದೆ ದಿನೇಶ್ ಸಿಂಗ್ ಮೃತಪಟ್ಟಿದ್ದಾರೆ. ಅರದೊಟ್ಟು ಗ್ರಾಮದ ನಿವಾಸಿಯೊಬ್ಬರ ಮದುವೆ ನಾಗತಿಬೆಳಗಲು ಗ್ರಾಮದ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಈ ಮದುವೆಯಲ್ಲಿ ಭಾಗಿಯಾಗಿ…

Read Full News

ಶಿವಮೊಗ್ಗದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಭಣ: ಎಲ್ಲಾ ಆಸ್ಪತ್ರೆಗಳು ರೋಗಿಗಳಿಂದ ಹೌಸ್​ಫುಲ್​

ಶಿವಮೊಗ್ಗ: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಭಣಗೊಂಡಿದ್ದು, ಎಲ್ಲಾ ಆಸ್ಪತ್ರೆಗಳು ಹೌಸ್​ಫುಲ್​ ಆಗಿವೆ. ರಾಜ್ಯದಲ್ಲೇ ಅತಿ ಹೆಚ್ಚು ಡೆಂಗ್ಯೂ, ಮಲೇರಿಯಾ ಪ್ರಕರಣಗಳು ಶಿವಮೊಗ್ಗದಲ್ಲಿ ದಾಖಲಾಗಿವೆ. ಜಿಲ್ಲೆಯ ಹಲವೆಡೆ ಜನರು ಶೀತ, ಜ್ವರ, ವಾಂತಿ, ಮೈ-ಕೈ ನೋವಿನಿಂದ ಬಳಲುತ್ತಿದ್ದಾರೆ. ಒಬ್ಬರಿಂದ ಮನೆ ಮಂದಿಗೆಲ್ಲಾ ರೋಗ ಹರಡುತ್ತಿದ್ದು, ಜನರು ಆತಂಕದಲ್ಲಿದ್ದಾರೆ.  ಶಂಕಿತ ಡೆಂಗ್ಯೂ ಪ್ರಕರಣಗಳ ಪತ್ತೆಗೆ ಆರೋಗ್ಯ ಇಲಾಖೆ 3,374 ರಕ್ತದ ಮಾದರಿ ಸಂಗ್ರಹಿಸಿತ್ತು. ಈ ಪೈಕಿ 407 ಜನರಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಶಂಕಿತ ಚಿಕುನ್ ಗುನ್ಯಾ ಪ್ರಕರಣಗಳ ಪತ್ತೆಗೆ 1,927…

Read Full News

ಕನಕದಾಸರ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದಿದೆ : ಕನಕದಾಸ ಜಯಂತಿಯ ಶುಭಾಶಯಗಳು :

ದಾಸರಲ್ಲಿ ಕವಿ, ಕವಿಗಳಲ್ಲಿ ದಾಸರೆಂಬ ಹೆಗ್ಗಳಿಕೆಗೆ ಪಾತ್ರರಾದವರು ಕನಕದಾಸರು. ಕನಕದಾಸರದು ಕನ್ನಡ ಹರಿದಾಸ ಪರಂಪರೆಯಲ್ಲಿ ದಿಟ್ಟ ಹೆಜ್ಜೆ ಇಟ್ಟವರು. ಕೀರ್ತನೆ, ಮುಂಡಿಗೆ, ಉಗಾಭೋಗ, ಸುಳಾದಿ, ದಂಡಕಗಳು ಮಾತ್ರವಲ್ಲದೇ, ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ ಎಂಬ ಕಾವ್ಯಗಳ ಮೂಲಕ ಜೀವನಪರ ಸಂದೇಶ, ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವಂಥ ಉಪದೇಶಗಳನ್ನು ನೀಡಿದವರು. ನವೆಂಬರ್‌ 22ರಂದು ಇವರ ಜನ್ಮದಿನ, ಈ ದಿನದ ನಿಮಿತ್ತ ನಾಡಿನಲ್ಲಿ ಕನಕ ಜಯಂತಿಯನ್ನು ಆಚರಿಸಲಾಗುತ್ತದೆ. ಯಾವುದೇ ಒಂದು ಜಾತಿ, ಧರ್ಮ, ಪ್ರದೇಶ, ಭಾಷೆಗೆ ಸೀಮಿತವಾಗದ ಕನಕದಾಸರ ವಿಶ್ವ ಮಾನವ ಪರಿಕಲ್ಪನೆಯ…

Read Full News

ಕಸಾಪ ಜಿಲ್ಲಾಧ್ಯಕ್ಷರಾಗಿ ಡಿ ಮಂಜುನಾಥ್ ಆಯ್ಕೆ ಹಿನ್ನಲೆ ರಿಪ್ಪನ್ ಪೇಟೆ ಸಾಹಿತ್ಯಾಭಿಮಾನಿಗಳಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ : ಸಾಹಿತ್ಯ ಪೋಷಕರಾದ ಹಿರಿಯ ಪತ್ರಕರ್ತ ಹಾಗೂ ಹಿರಿಯ ಸಾಹಿತಿಗೆ ಸನ್ಮಾನ

ರಿಪ್ಪನ್ ಪೇಟೆ :  ಭಾನುವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಡಿ ಮಂಜುನಾಥ್ ಅವರು ಆಯ್ಕೆಯಾಗಿರುವುದಕ್ಕೆ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ ಕನ್ನಡ ಸಾಹಿತ್ಯ ಅಭಿಮಾನಿಗಳು ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮ ಆಚರಿಸಿದರು ಕನ್ನಡ ನಾಡು-ನುಡಿಗೆ ಅನೇಕ ವಿನೂತನ ಕಾರ್ಯಕ್ರಮವನ್ನು ಅಧಿಕಾರವಿಲ್ಲದೆ  ಡಿ ಮಂಜುನಾಥ್ ಅವರ ಸೇವೆ ಹಾಗೂ ಕಾರ್ಯ ಶ್ಲಾಘನೀಯ ಹಾಗೇಯೆ ಅವರು ಜಿಲ್ಲಾ ಕಸಪಾ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಪಟ್ಟಣದ ಸಾಹಿತ್ಯ ಅಭಿಮಾನಿಗಳು ಸಂತೋಷವನ್ನು ವ್ಯಕ್ತಪಡಿಸಿ ಪಟಾಕಿ ಸಿಡಿಸಿ ಸಂಭ್ರಮ…

Read Full News

ಶಿವಮೊಗ್ಗ ಜಿಲ್ಲಾ ಕಸಾಪ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತಗಳ ವಿವರ :

ಶಿವಮೊಗ್ಗ : ಬಹಳ ಕುತೂಹಲ ಹುಟ್ಟಿಸಿದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಡಿ.ಮಂಜುನಾಥ್ ಜಯಭೇರಿ ಗಳಿಸಿದ್ದಾರೆ. ಇದರಿಂದ 4 ನೇ ಬಾರಿಗೆ ಕಸಾಪ ಜಿಲ್ಲಾಧ್ಯಕ್ಷರಾಗುತ್ತಿದ್ದಾರೆ. ಸುಮಾರು 450 ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಡಿ.ಬಿ.ಶಂಕರಪ್ಪರವರನ್ನ ಸೋಲಿಸಿ ಡಿ ಮಂಜುನಾಥ್ ಗೆಲುವಿನ ನಗೆ ಬೀರಿದ್ದಾರೆ. ತಾಲೂಕುವಾರು ಪಟ್ಟಿ: ಸೊರಬ:ಡಿ. ಮಂಜುನಾಥ್ – 179,ಶಂಕರಪ್ಪ – 129 ಸಾಗರ:ಡಿ ಮಂಜುನಾಥ್ – 391,ಶಂಕರಪ್ಪ – 194 ಶಿವಮೊಗ್ಗ:ಡಿ ಮಂಜುನಾಥ್ – 286,ಶಂಕರಪ್ಪ – 256 ತೀರ್ಥಹಳ್ಳಿ :ಡಿ.ಮಂಜುನಾಥ್…

Read Full News

ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಗಾದಿಗೆ ಚುನಾವಣೆಯಲ್ಲಿ ಡಿ ಮಂಜುನಾಥ್ ಜಯಭೇರಿ :

ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಗಾದಿಗೆ ಚುನಾವಣೆಯಲ್ಲಿ ಡಿ ಮಂಜುನಾಥ್ ಜಯಭೇರಿ ಬಾರಿಸಿದ್ದಾರೆಂದು ತಿಳಿದು ಬಂದಿದೆ. ಇಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಗಾದಿಗೆ ನಡೆದ ಚುನಾವಣೆಯಲ್ಲಿ ಡಿ ಮಂಜುನಾಥ್ ಜಯಭೇರಿ ಬಾರಿಸಿದ್ದಾರೆ. ಡಿ ಮಂಜುನಾಥ್ ಅವರು ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಡಿ.ಬಿ. ಶಂಕರಪ್ಪ ಇವರನ್ನು ಪರಾಭವ ಗೊಳಿಸಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

Read Full News

ಮಳೆಯ ಆರ್ಭಟಕ್ಕೆ ತತ್ತರಿಸಿದ ಮಲೆನಾಡ ರೈತರು : ಕೈಗೆ ಬಂದ ತುತ್ತು ಬಾಯಿಗೆ ಬರದ ಭೀತಿಯಲಿ ಅಡಿಕೆ ಬೆಳೆಗಾರರು !!!

ಶಿವಮೊಗ್ಗ : ಅಕಾಲಿಕ ಮಳೆಗೆ ಶಿವಮೊಗ್ಗ ಜಿಲ್ಲೆಯ ಜನತೆ ತತ್ತರಿಸಿದ್ದು, ಕಳೆದ 20 ದಿನಗಳಲ್ಲಿ 100 ಮಿ.ಮೀಗೂ ಅಧಿಕ ಮಳೆಯಾಗಿದ್ದು ರಾಜ್ಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆ,ಗೆ ನೇರವಾಗಿ ಹೊಡೆತ ರೈತಾಪಿ ವರ್ಗಕ್ಕೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಮಳೆಯ ಕಾರಣದಿಂದ ಸ್ವಲ್ಪ ಬೆಳೆ ಕೊಯ್ಲು ಮಾಡಿ ಕಟಾವು ಆದ ಬೆಳೆಗಳನ್ನು ಒಣಗಿಸಲೂ ಆಗದೆ, ಸಂಸ್ಕರಿಸಲು ಆಗದೆ, ಇತ್ತ ಹೊಲದಲ್ಲೂ ಬೆಳೆಯನ್ನು ಬಿಡಲೂ ಆಗದೆ ಹಾಳಾಗುವ ಪರಿಸ್ಥಿತಿ ರೈತನದ್ದಾಗಿದೆ. ಭಾರೀ ಮಳೆಯಿಂದಾಗಿ ಕಟಾವಿಗೆ ಬಂದ ಅಧಿಕ ಪ್ರಮಾಣದ ಭತ್ತದ ಬೆಳೆಗೆ…

Read Full News

ವಿಧಾನ ಪರಿಷತ್ ಚುನಾವಣೆ : ನಾಮಪತ್ರ ಸಲ್ಲಿಸಿದ ಡಿ ಎಸ್​ ಅರುಣ್

ಶಿವಮೊಗ್ಗ :  ಶಿವಮೊಗ್ಗದಲ್ಲಿ ವಿಧಾನಪರಿಷತ್​ ಚುನಾವಣಾ ಕಣ ರಂಗೇರಿದೆ. ಇಂದು ಬಿಜೆಪಿ ಪಕ್ಷದಿಂದ ಮಾಜಿ ಸಭಾಪತಿ ಡಿ.ಎಸ್.ಶಂಕರಮೂರ್ತಿರವರ ಪುತ್ರ ಡಿ.ಎಸ್.ಅರುಣ್ ರವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷದ ಕಾರ್ಯಕರ್ತನೆಂಬ ಹೆಮ್ಮೆಯಿಂದ ಚುನಾವಣಾ ಕಣಕ್ಕೆ ಇಳಿದಿದ್ದೇವೆ. ಪಕ್ಷದ ಹಿರಿಯರ, ಜನಪ್ರತಿನಿಧಿಗಳ ಹಾಗೂ ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪನವರ ಆಶೀರ್ವಾದದೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಕಳೆದ 16 ವರ್ಷಗಳಿಂದ ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ…

Read Full News

ಜಿಲ್ಲೆಯಲ್ಲಿ ಚುರುಕುಗೊಂಡ ಮತದಾನ : ಸಂಜೆಯೇ ಫಲಿತಾಂಶ ಘೋಷಣೆ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇವತ್ತು ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಇವತ್ತು ಸಂಜೆ ವೇಳೆಗೆ ಕಸಾಪ ಶಿವಮೊಗ್ಗ ಘಟಕದ ನೂತನ ಸಾರಥಿ ಯಾರು ಅನ್ನುವುದು ಗೊತ್ತಾಗಲಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ 12 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಶಿಕಾರಿಪುರದಲ್ಲಿ 4, ಶಿವಮೊಗ್ಗದಲ್ಲಿ 3, ಉಳಿದ ತಾಲೂಕುಗಳಲ್ಲಿ ತಲಾ ಒಂದು ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. 9,143 ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ 2811 ಮತದಾರರಿದ್ದಾರೆ. ಭದ್ರಾವತಿಯಲ್ಲಿ 1202, ತೀರ್ಥಹಳ್ಳಿಯಲ್ಲಿ 730,…

Read Full News

ಸೈಕಲ್‌ಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿ :ಬಾಲಕ ಸ್ಥಳದಲ್ಲಿಯೇ ಸಾವು

ಸೊರಬ : ಸೈಕಲ್ ಗೆ ಯಮಸ್ವರೂಪಿ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬಾಲಕನೊಬ್ಬ ಸ್ಥಳದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಚಂದ್ರಗುತ್ತಿ ಸಮೀಪದ ತೋರಗೊಂಡನಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದಿದೆ. ಕಾನುಗೋಡು ಗ್ರಾಮದ ಜೀವ (13) ಮೃತ ದುರ್ದೈವಿ. ಸಿದ್ದಾಪುರದಿಂದ ಚಂದ್ರಗುತ್ತಿಯಡೆಗೆ ತೆರಳುತ್ತಿದ್ದ ಯಮ ಸ್ವರೂಪಿ ಟಿಪ್ಪರ್ ಸೈಕಲ್ ಗೆ ಡಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಸೈಕಲ್ ನಲ್ಲಿದ್ದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸೈಕಲ್ ಸವಾರ ಕಾನುಗೋಡು ಗ್ರಾಮದ ಸಂದೀಪ (32) ಎಂಬ ವ್ಯಕ್ತಿಯು ತೀವ್ರವಾಗಿ ಗಾಯಗೊಂಡಿದ್ದು, ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ….

Read Full News

ತೀರ್ಥಹಳ್ಳಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಇಬ್ಬರು ಯುವಕರ ಬಂಧನ :

ತೀರ್ಥಹಳ್ಳಿ: ಮಾರಿಕಾಂಬ ದೇವಸ್ಥಾನದ ಎಡಭಾಗದ ಓಣಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಪ್ರಕರಣದಲ್ಲಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು ಇಬ್ಬರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಕುಶಾವತಿಯ ಅನುಜಿತ್ ಮತ್ತು ಬೆಟ್ಟಮಕ್ಕಿಯ ಸುಮಂತ್ ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ. ತೀರ್ಥಹಳ್ಳಿ ಪೊಲೀಸರು ಗಸ್ತು ತಿರುಗುವಾಗ ಅನುಜಿತ್, ಸುಮಂತ್ ಮತ್ತು ಸೊಪ್ಪುಗುಡ್ಡೆಯ ಮಂಜುನಾಥ ಅನುಚಿತವಾಗಿ ವರ್ತಿಸುತ್ತಿದ್ದರು. ಮೂವರನ್ನು ವಶಕ್ಕೆ ಪಡೆದು ಮೆಗ್ಗಾನ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದು ಇಬ್ಬರದ್ದು ಪಾಸಿಟಿವ್ ಬಂದಿದೆ.  ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full News

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಶ್ರೀಕಾಂತ್ ಪುನರಾಯ್ಕೆ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸು ಹುಟ್ಟಿಸಿದೆ : ಆರ್ ಎನ್ ಮಂಜುನಾಥ್

ಶಿವಮೊಗ್ಗ: ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಎಂ ಶ್ರೀಕಾಂತ್   ರವರು ಪುನರ್ ಆಯ್ಕೆಯಾಗಿರುವುದಕ್ಕೆ ಹೊಸನಗರ ತಾಲೂಕಿನ ಜೆಡಿಎಸ್ ಮುಖಂಡರಾದ ಆರ್ ಎನ್ ಮಂಜುನಾಥ್ ಹರ್ಷ ವ್ಯಕ್ತ ಪಡಿಸಿದ್ದಾರೆ.  ಯುವಕರ ಕಣ್ಮಣಿ, ಬಡವರ ಬಂಧುವಾದ ಎಂ ಶ್ರೀಕಾಂತ್  ನಾಯಕರನ್ನು ಸೃಷ್ಟಿಮಾಡುವ ನಾಯಕತ್ವದ ಗುಣವನ್ನು ಹೊಂದಿರುವ ಉನ್ನತ ಹೃದಯವಂತ ವ್ಯಕ್ತಿ. ಜಿಲ್ಲೆಯ ಯುವಕರ ಪಾಲಿಗೆ ಅಣ್ಣನ ಸ್ಥಾನದಲ್ಲಿದ್ದು, ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಪುನರ್ ಆಯ್ಕೆಯಾಗಿರುವುದು ಅಭಿನಂದನೀಯ ಅವರಿಗೆ ಹೊಸನಗರ ಕಾರ್ಯಕರ್ತರ ಪರವಾಗಿ ಹಾರ್ದಿಕ ಅಭಿನಂದನೆಗಳು…

Read Full News

ಕುಸಿದು ಬಿದ್ದ ಮನೆ ಗೋಡೆ : ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ ಸದಸ್ಯರು!!!!

ಶಿವಮೊಗ್ಗ, ನ.20: ಮಳೆಯಿಂದ ಮನೆಯೊಂದರ ಗೋಡೆ ಕುಸಿದು ಬಿದ್ದ ಘಟನೆ, ಶಿವಮೊಗ್ಗ ತಾಲೂಕು ಕೂಡಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಚಿಕ್ಕ ಕೂಡ್ಲಿ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ. ಪಾರ್ವತಮ್ಮ ಎಂಬುವವರ ಮನೆಯೇ ಕುಸಿದು ಬಿದ್ದಿದ್ದಾಗಿದೆ. ಮುಂಜಾನೆ ಸವಿ ನಿದ್ರೆಯಲ್ಲಿದ್ದ ಕುಟುಂಬ ಸದಸ್ಯರು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯರಾದ ಸುನಿಲ್ ಹಾಗೂ ವಿಜಯ್ ಭೇಟಿ ನೀಡಿ ಪರಿಶೀಲಿಸಿದರು. ‘ಸ್ಥಳಕ್ಕೆ ಇಲ್ಲಿಯವರೆಗೂ ಯಾವುದೆ ಅಧಿಕಾರಿ – ಸಿಬ್ಬಂದಿ ಭೇಟಿ ನೀಡಿಲ್ಲ. ಕುಟುಂಬಕ್ಕೆ ಗ್ರಾಮದ…

Read Full News

ದ್ವಿಚಕ್ರ ವಾಹನ ತಪ್ಪಿಸಲು ಹೋಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಮೇಲೆ ಹರಿಹಾಯ್ದ ಲಗೇಜ್ ಆಟೋ :

ಸಾಗರ: ದ್ವಿಚಕ್ರ ವಾಹನವನ್ನು ಬಚಾವ್ ಮಾಡಲು ಹೋಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರೂ ಯುವತಿಯರಿಗೆ ಲಗೇಜ್ ಆಟೋ ಡಿಕ್ಕಿ ಹೊಡೆದು ಅಪಘಾತವಾಗಿರುವ ಘಟನೆ ಸಾಗರದಲ್ಲಿ ಸಂಜೆ ನಡೆದಿದೆ. ಸಾಗರ ನಗರ ಬಿಹೆಚ್ ರಸ್ತೆಯಲ್ಲಿ ಇರುವ ಸುಜುಕಿ ಶೋರೂಮ್ ಎದುರು ಶುಕ್ರವಾರ ಸಂಜೆ ಲಗೇಜ್ ಆಟೋ ಒಂದು ಅಚಾನಕ್ಕಾಗಿ ರಸ್ತೆಯ ಮಧ್ಯ ಬಂದ ದ್ವಿಚಕ್ರ ವಾಹನಕ್ಕೆ ಬಚಾವ್ ಮಾಡಲು ಹೋಗಿ ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಎಸ್ಎನ್ ನಗರದ ನಾಲ್ಕನೇ ತಿರುವಿನ ವಾಸಿಗಳಾದ ಆಫ಼್ರೀನ್ ಹಾಗೂ ಶಮ್ರೀನ್ ಎಂಬ …

Read Full News

ರಿಪ್ಪನ್ ಪೇಟೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಪುನೀತ್ ರಾಜ್​ಕುಮಾರ್‌ಗೆ ಶ್ರದ್ಧಾಂಜಲಿ

ರಿಪ್ಪನ್ ಪೇಟೆ: ಇಲ್ಲಿನ ಸಮೀಪದ ನೇರಲೆಮನೆ – ಕ್ವಾಡ್ರಿಗೆ ಗ್ರಾಮದಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗ ಮತ್ತು ರೋಟರಿ ಕ್ಲಬ್ ರಿಪ್ಪನ್ ಪೇಟೆ ಸಂಯುಕ್ತ ಆಶ್ರಯದಲ್ಲಿ ಪುನೀತ್ ರಾಜ್​ಕುಮಾರ್​ ಪುಣ್ಯ ಸ್ಮರಣೆ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಗುರುವಾರ ಬೆಳಗ್ಗೆ ಆರಂಭವಾದ ರಕ್ತದಾನ ಶಿಬಿರದಲ್ಲಿ ಹತ್ತಾರು ಅಪ್ಪು ಅಭಿಮಾನಿಗಳು ರಕ್ತದಾನ ಮಾಡಿದರು. ಪುನೀತ್‌ ಅಗಲಿಕೆ ಹಿನ್ನೆಲೆ ಮೌನಾಚರಣೆ ಬಳಿಕ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುನೀತ್ ರಾಜ್​ಕುಮಾರ್ ಸಾಮಾಜಿಕ ಕಾಳಜಿಯನ್ನ ಶ್ಲಾಘಿಸಲಾಯಿತು. ಮತ್ತು ಅಪ್ಪು ಶಿವಮೊಗ್ಗಕ್ಕೆ…

Read Full News

ಸಿನಿಮೀಯ ರಿತಿಯಲ್ಲಿ ದನಗಳ್ಳರನ್ನು ಮಟ್ಟ ಹಾಕಿದ ಹೊಸನಗರ ತಹಶೀಲ್ದಾರ್ ವಿ ಎಸ್ ರಾಜೀವ್ : ರಿಪ್ಪನ್ ಪೇಟೆ ಪೊಲೀಸರು ಬದುಕುಳಿದಿದ್ದೆ ಹೆಚ್ಚು

ಹೊಸನಗರ :  ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ದನಗಳ್ಳರು ಗ್ರಾಮದ ಹಸುಗಳನ್ನು ಕದ್ದು ಸಾಗಿಸುತ್ತಿದ್ದ ಎಂಟು ಗೋವುಗಳನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಘಟನೆ ನಡೆದಿದೆ.  ಬುಧವಾರ ರಾತ್ರಿ ಮೇಲಿನಬೆಸಿಗೆಯ ಗ್ರಾಮಸ್ಥರು ಅಕ್ರಮ ದನಗಳ್ಳರ ವಾಹನವನ್ನು ಅಡ್ಡಗಟ್ಟಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ದನಕಳ್ಳರು ಮಾರಕಾಸ್ತ್ರಗಳಿಂದ ಬೆದರಿಸಿ ವಾಹನ ಚಲಾಯಿಸಿದ್ದಾರೆ.ಕೂಡಲೇ ಗ್ರಾಮಸ್ಥರು ತಹಸಿಲ್ದಾರ್ ವಿ.ಎಸ್. ರಾಜೀವ್‌ ಮತ್ತು ಸಿಬ್ಬಂದಿಗಳ ತಂಡಕ್ಕೆ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತರಾದ ರಾಜೀವ್ ದನಗಳ್ಳರ ವಾಹನ ಹೊಸನಗರದಿಂದ ರಿಪ್ಪನ್ ಪೇಟೆ…

Read Full News

ದೀಪ ಶ್ರೀಮಂತನ ಮನೆಯಲ್ಲಿ ಎಷ್ಟು ಬೆಳಕನ್ನು ಕೊಡುತ್ತದೆಯೋ ಅಷ್ಟೇ ಬೆಳಕನ್ನು ಬಡವನ ಮನೆಯಲ್ಲೂ ಕೊಡುತ್ತದೆ : ಶ್ರೀ ರಂಭಾಪುರಿ ಜಗದ್ಗುರುಗಳು : ಅದ್ದೂರಿಯಾಗಿ ಜರುಗಿದ ಮಳಲಿ ಮಠದ ಕಾರ್ತಿಕ ದೀಪೋತ್ಸವ

ರಿಪ್ಪನ್‌ಪೇಟೆ: ಕತ್ತಲೆ ಅಜ್ಞಾನದ ಸಂಕೇತವಾದರೆ ಬೆಳಕು ಜ್ಞಾನದ ಸಂಕೇತ. ಬಾಹ್ಯ ಕತ್ತಲೆ ಕಳೆಯಲು ದೀಪ ಬೇಕು. ಮನದ ಅಜ್ಞಾನ ದೂರ ಮಾಡಲು ಜ್ಞಾನ ಬೋಧಾಮೃತ ಬೆಳಕಿನ ಕಿರಣ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶ್ರೀಮದ್ರಂಭಾಪುರಿ ಖಾಸಾ ಶಾಖಾ ಮಳಲಿ ಸಂಸ್ಥಾನ ಮಠದಲ್ಲಿ ಜರುಗಿದ ಕಾರ್ತೀಕ ದೀಪೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ದೀಪ ಶ್ರೀಮಂತನ ಮನೆಯಲ್ಲಿ ಎಷ್ಟು ಬೆಳಕನ್ನು ಕೊಡುತ್ತದೆಯೋ ಅಷ್ಟೇ ಬೆಳಕನ್ನು ಬಡವನ ಮನೆಯಲ್ಲೂ ಕೊಡುತ್ತದೆ. ಮನುಷ್ಯನ…

Read Full News

ಅಕ್ರಮ ಗೋಮಾಂಸ ಸಾಗಿಸುತ್ತಿದ್ದವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು

ಮೂಡಿಗೆರೆ : ಗೋಮಾಂಸ ಸಾಗಾಟ ನಡೆಸುತ್ತಿದ್ದ ಆರೋಪಿಯನ್ನು ಭಜರಂಗದಳದ ಕಾರ್ಯಕರ್ತರು ಸೆರೆಹಿಡಿದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿಗೆ ಪ್ರತೀ ಶುಕ್ರವಾರದಂದು ಗೋಮಾಂಸ ಸಾಗಾಟ ನಡೆಸಿ ಮಾರಾಟ ಮಾಡುತ್ತಿದ್ದ ಮೊಹಮ್ಮದ್ ಅಲಿ ಎಂಬ 35 ವರ್ಷದವನ್ನು, ಮುತ್ತಿಗೆಪುರದ ಹಂಡಗುಳಿ ದಾರಿಯಲ್ಲಿ ಭಜರಂಗದಳದ ಕಾರ್ಯಕರ್ತರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.  ಈತನು ಈ ಹಿಂದೆ ಸಾಗಾಟ ನಡೆಸಿದ ಆರೋಪದ ಮೇರೆಗೆ ಭಜರಂಗದಳದ ಕಾರ್ಯಕರ್ತರು ಈತನನ್ನು ಬಹಳ ಸಮಯ ಕಾದು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಆರೋಪಿಯನ್ನು…

Read Full News

ರಿಪ್ಪನ್ ಪೇಟೆಯಲ್ಲಿ ಇದೇ 27 ಕ್ಕೆ ಅದ್ದೂರಿ ಕನ್ನಡ ರಾಜ್ಯೋತ್ಸವ : ಪದ್ಮಶ್ರಿ ಪುರಸ್ಕೃತ ಹರೇಕಾಳ ಹಾಜಬ್ಬ ಹಾಗೂ ಮಂಜಮ್ಮ ಜೋಗತಿಗೆ ಸನ್ಮಾನ ಕಾರ್ಯಕ್ರಮ

ರಿಪ್ಪನ್ ಪೇಟೆ : ನವೆಂಬರ್ 27 ರ ಶನಿವಾರ ರಿಪ್ಪನ್ ಪೇಟೆಯಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ ದಿಂದ  ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಆರ್ ಎ ಚಾಬುಸಾಬ್ ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು. ಇಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯತಿಯ ಕುವೆಂಪು ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನವಂಬರ್ 27 ರ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ…

Read Full News

ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಚರಣೆ : ಕಳ್ಳತನವಾಗಿದ್ದ ವಸ್ತುಗಳು ವಾರಸುದಾರರಿಗೆ ವಾಪಾಸ್

ಶಿವಮೊಗ್ಗ: 2021 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 518 ಸ್ವತ್ತು ಕಳವು ಪ್ರಕರಣ ವರದಿಯಾಗಿದ್ದು ಅಂದಾಜು ಮೌಲ್ಯ 6,23,91,2147 ರೂ. ಎಂದು ಅಂದಾಜಿಸಲಾಗಿದೆ. ಅದರಲ್ಲಿ 3,03,59,176 ರೂ. ಮೌಲ್ಯದ ಮಾಲುಗಳನ್ನು ಪತ್ತೆ ಮಾಡಲಾಗಿದ್ದು, ಸದರಿ ಮಾಲಿನ ವಾರಸುದಾರರಿಗೆ ಬಿಟ್ಟು ಕೊಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ. ಅವರು ಇಂದು ಡಿಎಆರ್ ಸಭಾಂಗಣದಲ್ಲಿ ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲ್ ಗಳನ್ನು ವಾರಸುದಾರರಿಗೆ ಬಿಟ್ಟುಕೊಡುವ ಸಮಾರಂಭದ ಸುದ್ದಿಗಾರರೊಂದಿಗೆ ಮಾತನಾಡಿದರು….

Read Full News

ಆನಂದಪುರದಲ್ಲಿ ಮನೆಯ ಬಾತ್ ರೂಂನಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ!!

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದ ಹಳೆ ಸಂತೆ ಮಾರ್ಕೆಟ್ ರಸ್ತೆಯ ನಿವಾಸಿ ಮಹೇಶ್ (31)  ವರ್ಷ ಇಂದು ಮಧ್ಯಾಹ್ನ ಮನೆಯ ಬಾತ್ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   ಮಹೇಶ್ ಕೊರೋನಾ ಲಾಕ್ ಡೌನ್  ಸಂದರ್ಭದಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು. ಹಾಗೂ ಕೊರೋನಾ ಸಂದರ್ಭದಲ್ಲಿ ಅವರ ತಾಯಿಯವರು ಕೂಡ ಕರೋನಾಗೆ ಬಲಿಯಾಗಿದ್ದರು ಇದರಿಂದಲೂ ತೀವ್ರ ಮಾನಸಿಕ ಜಿಗುಪ್ಸೆಯನ್ನು ಹೊಂದಿದ್ದರ ಪರಿಣಾಮ ಹಾಗೂ ಇತ್ತೀಚೆಗೆ ಕೆನರಾ ಬ್ಯಾಂಕ್ ನಲ್ಲಿ ತರಕಾರಿ ಅಂಗಡಿಗೆ ಸಾಲವನ್ನು…

Read Full News

ರಿಪ್ಪನ್ ಪೇಟೆಯ ಕುಕ್ಕಳಲೇ ವೃತ್ತಕ್ಕೆ ಪುನೀತ್ ರಾಜ್ ಕುಮಾರ್ ನಗರವೆಂದು ನಾಮಕರಣ ಮಾಡಿ ಗೌರವ ಸಲ್ಲಿಸಿದ ಗ್ರಾಮಸ್ಥರು !!!

ರಿಪ್ಪನ್ ಪೇಟೆ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ರಿಪ್ಪನ್ ಪೇಟೆಯ ಸಾಗರ ಮುಖ್ಯ ರಸ್ತೆಯಿಂದ ಕುಕ್ಕಳಲೆ ಗ್ರಾಮಕ್ಕೆ ಹೋಗುವ ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ನಗರ ಎಂದು ನಾಮಕರಣ ಮಾಡಲಾಗಿದೆ.ಸ್ವಯಂ ಸಾರ್ವಜನಿಕರೇ ವೃತ್ತಕ್ಕೆ ಪುನೀತ್ ರಾಜಕುಮಾರ್ ನಗರ ಎಂದು ಹೆಸರು ಹಾಕಿ ನಾಮಪಲಕ ಪ್ರತಿಷ್ಟಾಪಿಸಿದ್ದಾರೆ. ರಿಪ್ಪನ್ ಪೇಟೆಯ ಸಾಗರ ಮುಖ್ಯ ರಸ್ತೆಯಿಂದ ಕುಕ್ಕಳಲೆ ಗ್ರಾಮಕ್ಕೆ ಹೋಗುವ ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ನಗರ ಎಂಬ ಹೆಸರನ್ನು ಅಧಿಕೃತಗೊಳಿಸುವಂತೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್…

Read Full News

ಶಿವಮೊಗ್ಗದಲ್ಲಿ ಪೌರಕಾರ್ಮಿಕರ ಮೇಲೆ ಹಲ್ಲೆ ವಿಚಾರ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಖುದ್ದು ಎಸ್ಪಿಗೆ ಕರೆ ಮಾಡಿದ್ದೇಕೆ !!! ದೂರವಾಣಿಯಲ್ಲಿ ಹೇಳಿದ್ದಾದರೂ ಏನು ???

ಶಿವಮೊಗ್ಗ : ನಗರದಲ್ಲಿ ಇತ್ತೀಚೆಗೆ ಪೌರ ಕಾರ್ಮಿಕರ ಮೇಲೆ ಕೆಲವು ಕಿಡಿಗೇಡಿಗಳು ಕಸ ವಿಲೇವಾರಿಗೆ ಸಂಬಂಧಿಸಿದಂತೆ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಪೌರ ಕಾರ್ಮಿಕರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಸಚಿವ ಕೆ.ಎಸ್. ಈಶ್ವರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಕಸ ವಿಲೇವಾರಿ ಮಾಡುವವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪೌರ ಕಾರ್ಮಿಕರು ಜನರ ಸೇವೆ ಮಾಡುತ್ತಾರೆ. ಅವರ ಮೇಲೆ ಹಲ್ಲೆ ಮಾಡುವಷ್ಟರಮಟ್ಟಿಗೆ…

Read Full News

ಬೀದಿ ಕಾಮಣ್ಣರೇ ಹುಷಾರು !! ಸಾಗರಕ್ಕೆ ಬಂದಿದ್ದಾರೆ ಸ್ಮಾರ್ಟ್ ಐಪಿಎಸ್ ಅಧಿಕಾರಿ ರೋಹನ್ ಜಗದೀಶ್

ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಇದೀಗ ನೂತನ  ಎ ಎಸ್ ಪಿ ಯಾಗಿ ಐಪಿಎಸ್ ಅಧಿಕಾರಿಯಾದ ರೋಹನ್ ಜಗದೀಶ್ ಚಾರ್ಜ್ ಪಡೆದಿದ್ದಾರೆ.  ಅಧಿಕಾರ ಸ್ವೀಕರಿಸಿ ಇನ್ನೂ 1 ವಾರವಾಗಿದೆ ಅಷ್ಟೆ, ಇದೀಗ ಸ್ಮಾರ್ಟ್ ಐಪಿಎಸ್ ಅಧಿಕಾರಿಯವರು  ಸಾಗರವನ್ನು  ಅಪರಾಧ ಮುಕ್ತವನ್ನಾಗಿಸಲು ಪಣ ತೊಟ್ಟಿದ್ದಾರೆ. ಅಂತೆಯೇ ಇಂದು ಸಾಗರದ ಸುತ್ತಮುತ್ತ ಬೀದಿ ಕಾಮಣ್ಣರ ಮೇಲೆ ಕಣ್ಣಿಟ್ಟು ಹುಡುಗಿಯರ ವಿಚಾರಕ್ಕೆ ಹೋಗದಿರುವಂತೆ ಬಿಸಿ ಮುಟ್ಟಿಸಿದ್ದಾರೆ. ಬುಲೆಟ್ ಬೈಕ್ ಗಳಲ್ಲಿ ಕರ್ಕಶ ಸೈಲೆನ್ಸರ್ ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ಬೈಕ್…

Read Full News

ದೀಪಾವಳಿ ಸಂಭ್ರಮಕ್ಕೆ ಬೀಗರ ಮನೆಗೆ ಹೊರಟಿದ್ದ ಕುಟುಂಬದವರ ಮೇಲೆ ಜವರಾಯನ ಅಟ್ಟಹಾಸ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣ ಸಾವು!!!

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಬಳಿ ಬೈಕ್ ಹಾಗೂ 407 ಟೆಂಪೋ  ವಾಹನದ ನಡುವೆ ಮುಖಾಮುಖಿ ಅಪಘಾತ ವಾಗಿದ್ದು ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ತಂದೆ ಕೂಡ ಸಾವನ್ನಪ್ಪಿರುವ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ವರು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಎದುರು ಭಾಗದಿಂದ ಬಂದ 407  ಟೆಂಪೋ ವಾಹನ ಡಿಕ್ಕಿ ಹೊಡೆದಿದ್ದು ರಾಮಚಂದ್ರ ವೀರಪ್ಪ ( 42) ಪುಟಾಣಿ ಮಕ್ಕಳಾದ ಶಶಾಂಕ್( 11) ಆದರ್ಶ( 5)ಸ್ಥಳದಲ್ಲೇ ಅಸುನೀಗಿದ್ದಾರೆ. ಇನ್ನೂ ಪತ್ನಿ ಭಾಗ್ಯಮ್ಮನಿಗೂ ಕೂಡ…

Read Full News

ಮಳಲಿ ಮಠದಲ್ಲಿ ಕಾರ್ತಿಕ ದೀಪೋತ್ಸವ : ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆಗೆ ಸಕಲ ಸಿದ್ದತೆ :

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಸಹಸ್ರಾರು ವರುಷಗಳ ಇತಿಹಾಸ ಪ್ರಸಿದ್ದ ಶ್ರೀ ಜಗದ್ಗುರು ರಂಭಾಪುರಿ ಖಾಸಾ ಶಾಖಾ  ಶ್ರೀಮಾನ್ ಮಹಾಸಂಸ್ಥಾನ ಮಳಿಲಿಮಠ ಕೋಣಂದೂರು ಇಲ್ಲಿ ದಿನಾಂಕ 18.11.2021 ರಂದು ಕಾರ್ತಿಕ ದೀಪೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭವನ್ನು ಏರ್ಪಡಿಸಲಾಗಿದೆ.  ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ರಂಭಾಪುರಿ ಪೀಠ ಬಾಳೆಹೊನ್ನೂರು ಇವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.  ಈ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.