w
Headlines
Home » ಶೆಟ್ಟಿಬೀಡು ಬಳಿ ಭೀಕರ ಕಾರು ಅಪಘಾತ: ನಾಲ್ಕು ಪಲ್ಟಿಯಾದ ಕಾರು – ಮೂವರಿಗೆ ಗಂಭೀರ ಗಾಯ, ವೃದ್ದೆಯ ಸ್ಥಿತಿ ಚಿಂತಾಜನಕ

ಶೆಟ್ಟಿಬೀಡು ಬಳಿ ಭೀಕರ ಕಾರು ಅಪಘಾತ: ನಾಲ್ಕು ಪಲ್ಟಿಯಾದ ಕಾರು – ಮೂವರಿಗೆ ಗಂಭೀರ ಗಾಯ, ವೃದ್ದೆಯ ಸ್ಥಿತಿ ಚಿಂತಾಜನಕ

Screenshot 2026 07 16 22 08 45 917 com.picsart.studio edit

ಶೆಟ್ಟಿಬೀಡು ಬಳಿ ಭೀಕರ ಕಾರು ಅಪಘಾತ: ನಾಲ್ಕು ಪಲ್ಟಿಯಾದ ಕಾರು – ಮೂವರಿಗೆ ಗಂಭೀರ ಗಾಯ, ವೃದ್ದೆಯ ಸ್ಥಿತಿ ಚಿಂತಾಜನಕ

Three people were seriously injured after a car overturned multiple times near Shettibidu close to Ripponpet in Hosanagara taluk. An elderly woman remains in critical condition.

ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಶೆಟ್ಟಿಬೀಡು ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನಾಲ್ಕು ಬಾರಿ ಪಲ್ಟಿಯಾದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಕುಸುಗುಂಡಿ ಗ್ರಾಮದ ಗಿರಿಜಮ್ಮ (60), ದರ್ಶನ್ (22) ಹಾಗೂ ಹರ್ಷಿತಾ (22) ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅಪಘಾತದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಾಲ್ಕು ಬಾರಿ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ ಗಿರಿಜಮ್ಮ ಅವರಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಕಾರು ಚಾಲಕ ದರ್ಶನ್ ಅವರಿಗೆ ಎದೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಹರ್ಷಿತಾ ಅವರಿಗೆ ಸೊಂಟ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ.

ಅಪಘಾತದ ಬಳಿಕ ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ರಿಪ್ಪನ್‌ಪೇಟೆ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.