ಪೆಟ್ರೋಲ್ ಬಂಕ್ನ ಶೆಡ್ನಲ್ಲಿ ನೇಣು ಬಿಗಿದುಕೊಂಡು 22 ವರ್ಷದ ಯುವಕ ಸಾವು | A 22-year-old petrol bunk employee, Shankar Naik, was found dead in a storage shed near Mahalakshmi Petrol Bunk on Airport Road in Shivamogga. Police investigation is underway.
ಶಿವಮೊಗ್ಗ: ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವಕನೊಬ್ಬ ಪೆಟ್ರೋಲ್ ಬಂಕ್ನ ಪಕ್ಕದಲ್ಲಿರುವ ಶೆಡ್ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಏರ್ಪೋರ್ಟ್ ರಸ್ತೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಭದ್ರಾವತಿ ತಾಲೂಕಿನ ಸೋಮಿನಹಳ್ಳಿ ಸಮೀಪದ ಸೋಮಿನಕೊಪ್ಪ ಗ್ರಾಮದ ಶಂಕರ್ ನಾಯ್ಕ್ (22) ಎಂದು ಗುರುತಿಸಲಾಗಿದೆ.
ಶಂಕರ್ ನಾಯ್ಕ್ ಅವರು ಸಂತೇಕಡೂರಿನಿಂದ ಮುಂದಿರುವ ದುಗ್ಗಪ್ಪಗೌಡರ ಮಹಾಲಕ್ಷ್ಮಿ ಪೆಟ್ರೋಲ್ ಬಂಕ್ನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ನವೆಂಬರ್ 16ರಂದು ರಾತ್ರಿ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದ ಅವರು, ಪೆಟ್ರೋಲ್ ಬಂಕ್ನ ಪಕ್ಕದಲ್ಲಿರುವ ಸಾಮಗ್ರಿಗಳ ಸಂಗ್ರಹಣಾ ಶೆಡ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಈ ಶೆಡ್ನಲ್ಲಿ ವಿದ್ಯುತ್ ಉಪಕರಣಗಳು, ಯುಪಿಎಸ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಮೃತ ಶಂಕರ್ ನಾಯ್ಕ್ ಈ ಹಿಂದೆ ಹಗಲಿನ ವೇಳೆಯಲ್ಲಿ ಸಿಟಿ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಹಗಲಿನಲ್ಲಿ ಸಿಟಿ ಸೆಂಟರ್ ಹಾಗೂ ರಾತ್ರಿ ವೇಳೆ ಮಹಾಲಕ್ಷ್ಮಿ ಪೆಟ್ರೋಲ್ ಬಂಕ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಯುವಕನ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ವೈಯಕ್ತಿಕ ಕಾರಣಗಳೇನಾದರೂ ಇದ್ದವೇ ಎಂಬ ಬಗ್ಗೆಯೂ ಸ್ಪಷ್ಟತೆ ಲಭ್ಯವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ತನಿಖೆಯ ಬಳಿಕವಷ್ಟೇ ಸಾವಿನ ಹಿಂದಿನ ನಿಖರ ಕಾರಣ ತಿಳಿದುಬರಬೇಕಿದೆ.
