w
Headlines

ಅಂತರ್ ಜಿಲ್ಲಾ ಬೈಕ್ ಕಳ್ಳರ ಹೆಡೆಮುರಿ ಕಟ್ಟಿದ ಸಾಗರದ ಪೊಲೀಸರು : ಮೂವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಬೈಕ್ ಗಳು ವಶ

ಶಿವಮೊಗ್ಗ ಜಿಲ್ಲೆ ಸಾಗರ ಪೋಲಿಸರ ಚಾಣಾಕ್ಷತನದಿಂದ ಅಂತರ್ ಜಿಲ್ಲೆಗಳಲ್ಲಿ ಬೈಕ್  ಕಳ್ಳತನ ಮಾಡುತ್ತಿದ್ದ 3 ಜನ ಆರೋಪಿಗಳನ್ನು ಬಂಧಿಸಿ ಮೂವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ ಬೈಕ್ ಗಳನ್ನು ಸಾಗರದ ಚಾಣಾಕ್ಷ  ಪೊಲೀಸರು ವಶಪಡಿಸಿಕೊಂಡು ಕಳ್ಳರನ್ನು ಬಂಧಿಸಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಬೈಕ್ ಕಳ್ಳತನ ಆಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಯವರ ಸೂಚನೆ ಮೇರೆಗೆ ಸಾಗರ ಎಎಸ್ಪಿ ರೋಹನ್ ಜಗದೀಶ್ ರವರ ಮಾರ್ಗದರ್ಶನದಲ್ಲಿ ಸಾಗರ ಪೊಲೀಸರು  ಕಾರ್ಯಾಚರಣೆ…

Read Full News

ರಿಪ್ಪನ್ ಪೇಟೆ : ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ಪದವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ರಿಪ್ಪನ್ ಪೇಟೆ : 2021-22 ನೇ ಸಾಲಿನಲ್ಲಿ ನೂತನ  ರಾಷ್ಟ್ರೀಯ ಶಿಕ್ಷಣ ನೀತಿ 2022 ರ ಅಡಿಯಲ್ಲಿ ಪ್ರಥಮ ಬಿಎ, ಬಿಬಿಎ ಮತ್ತು ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ದಿಢೀರ್  ಏರಿಕೆ ಮಾಡಿರುವುದನ್ನು ಖಂಡಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಹಿಂದಿನ ವರ್ಷಗಳಲ್ಲಿ 700 ರೂ ಇದ್ದ ಪರೀಕ್ಷಾ ಶುಲ್ಕವನ್ನು 2020 ರೂ ಗೆ ಏರಿಸಿರುವುದು ಖಂಡನಾರ್ಹ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಕುಟುಂಬಕ್ಕೆ…

Read Full News

ಯಡಿಯೂರಪ್ಪ ಅವರ ಕಣ್ಣಲ್ಲಿ ನೀರು ಹಾಕಿಸಿದ್ದು ಈಶ್ವರಪ್ಪ: ಡಿಕೆಶಿ

ಶಿವಮೊಗ್ಗ: ಸಂಗಮೇಶ್ವರ್ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಸದಸ್ಯತ್ವ ಅಭಿಯಾನಕ್ಕೆ ಹಿನ್ನೆಡೆಯಾಗಿತ್ತು. ಹೀಗಾಗಿ ನಾನೇ ಭದ್ರಾವತಿಗೆ ಬಂದು ಸದಸ್ಯತ್ವ ಅಭಿಯಾನಕ್ಕೆ ಚುರುಕು ಮುಟ್ಟಿಸಿದ್ದೇನೆ. ನಾಯಕರ ಬಳಿ ಚರ್ಚೆ ಮಾಡುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ‌ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಭದ್ರಾವತಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಎಂದರೆ‌ ನನಗೆ ಪ್ರೀತಿ ಹಾಗೂ ಶಿವಮೊಗ್ಗ ಬರಬೇಕು ಎಂಬುದು ನನ್ನ ಆಸೆ. ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭ ಸದಸ್ಯರು. ಕಾಂಗ್ರೆಸ್ ಸದಸ್ಯರ ಸಂಖ್ಯೆಯನ್ನು ಹೆಚ್ಚಿನ‌ ಸಂಖ್ಯೆಯಲ್ಲಿ ಮಾಡಬೇಕಿದೆ. ಶಿವಮೊಗ್ಗದಿಂದ‌…

Read Full News

ಕಾಮಗಾರಿಗೆ ಮುನ್ನವೇ ಬಿಲ್ ಪಾವತಿ : ಇಂಜಿನಿಯರ್ ಶಿವಮೂರ್ತಿ ಅಮಾನತ್ತಿಗೆ ಮಾನವ ಹಕ್ಕುಗಳ ರಾಜ್ಯಾಧ್ಯಕ್ಷ ಒತ್ತಾಯ

 ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹುಂಚಾ ಗ್ರಾಮ ಪಂಚಾಯಿತಿ ಮಠದ (ಜಿಗಳ) ಕೆರೆ ದುರಸ್ತಿ ಕಾಮಗಾರಿ ಮಾಡದೆ ಗುತ್ತಿಗೆದಾರನಿಗೆ ಬಿಲ್ಲು ನೀಡಿ ಕರ್ತವ್ಯಲೋಪ ಮಾಡಿರುವ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ಯ ರಾಜ್ಯಾಧ್ಯಕ್ಷ ಯುವರಾಜ್ ಕೆ ಸಿ ಒತ್ತಾಯಿಸಿದ್ದಾರೆ.  ಹುಂಚಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ (ಜಿಗಳೆ) ಕೆರೆಗೆ 2021-2022 ನೇ ಸಾಲಿನ 2702 ಸಣ್ಣ ನೀರಾವರಿ ಕೆರೆಗಳ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿ ಯೋಜನೆಯಲ್ಲಿ ಕಾಮಗಾರಿಯನ್ನು ಗುತ್ತಿಗೆದಾರರ…

Read Full News

“ಹಳ್ಳಿ ಮಕ್ಕಳ ರಂಗ ಹಬ್ಬ” ಶಿಬಿರಕ್ಕೆ ಆಸಕ್ತ ಮಕ್ಕಳಿಂದ ಅರ್ಜಿ ಆಹ್ವಾನ :

ರಿಪ್ಪನ್‌ಪೇಟೆ: ದಿ || ಎಂ.ಕೆ.ರೇಣುಕಪ್ಪಗೌಡ ಪ್ರತಿಷ್ಠಾನ ಮಸರೂರು ಮತ್ತು ಮಲೆನಾಡು ಕಲಾ ತಂಡ ರಿಪ್ಪನ್‌ಪೇಟೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 13ರಿಂದ 15ದಿನಗಳ ಕಾಲ ರಿಪ್ಪನ್‌ಪೇಟೆಯ ಸರ್ಕಾರಿ ಮಾದರಿ ಹಿರಿಯ ಬಾಲಕರ ಪಾಠ ಶಾಲೆಯಲ್ಲಿ “ಹಳ್ಳಿ ಮಕ್ಕಳ ರಂಗ ಹಬ್ಬ” ರಂಗ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಮಲೆನಾಡು ಕಲಾ ತಂಡದ ಸಂಚಾಲಕ ಗಣೇಶ ಮಸರೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಿಪ್ಪನ್‌ಪೇಟೆಯ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ರಂಗ ಹಬ್ಬದಲ್ಲಿ 9 ವರ್ಷದಿಂದ…

Read Full News

ಕೆಂಚನಾಲ ಗ್ರಾಮದಲ್ಲಿ ಮತಾಂತರಗೊಳ್ಳುವಂತೆ ಮಹಿಳೆಗೆ ಜೀವ ಬೆದರಿಕೆ : ದೂರು ದಾಖಲು

ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಬಲವಂತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆಂಚನಾಳ ಗ್ರಾಮದಲ್ಲಿ ಸರ್ವೆ ನಂಬರ್ 38/1 ರಲ್ಲಿ ಜಯಲಕ್ಷ್ಮೀ ಎಂಬುವರು ತಮ್ಮ ಸ್ವಂತ ತೋಟದಲ್ಲಿ ಕೆಲಸ ಮಾಡುವ ವೇಳೆ ಸಂಬಂಧಿಕರಾದ ಮಂಜಪ್ಪ ಮತ್ತು ಸಂಗೀತ ಎಂಬುವರು ಏಕಾಏಕಿ ತೋಟಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಮಹಿಳೆಯನ್ನ ಅವ್ಯಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರೆ. ನಿನಗೆ ಯಾರೂ ಇಲ್ಲ ನಿನಗೆ ಜಮೀನು ಏನಕ್ಕಾಗಿ…..

Read Full News

ರೈತನ ಹೊಟ್ಟೆಗೆ ತಿವಿದ ಕಾಡುಕೋಣ..!!! ಚಿಂತಾಜನಕ ಸ್ಥಿತಿಯಲ್ಲಿರುವ ರೈತ ಮಣಿಪಾಲ್ ಆಸ್ಪತ್ರೆಗೆ ದಾಖಲು

ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಅರಣ್ಯ ವಲಯದ  ಆಗುಂಬೆ ಗ್ರಾಮ ಪಂಚಾಯಿತಿಯ ಹೊಸೂರು ಬಳಿಯ ಅಸಿಮನೆಯಲ್ಲಿ ಕಾಡುಕೋಣವೊಂದು ರೈತರೊಬ್ಬರಿಗೆ ತಿವಿದ ಘಟನೆ ಸೋಮವಾರ ಸಂಜೆ ನಡೆದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕಳುಹಿಸಲಾಗಿದೆ. ಅಸಿಮನೆ ರಾಘವೇಂದ್ರ ಭಟ್ ಎಂಬುವರ ತೋಟಕ್ಕೆ ಬಂದಿದ್ದ ಕಾಡು ಕೋಣಗಳನ್ನು ರಾಘವೇಂದ್ರ ಭಟ್ ಮತ್ತು ಅವರ ಪತ್ನಿ ತೋಟದಿಂದ ಬೆರೆಸಲು ಹೋಗಿದ್ದಾಗ ಏಕಾಏಕಿ ಹೊಟ್ಟೆಗೆ ಇರಿದಿದೆ. ಗಂಭೀರ ಗಾಯಗೊಂಡ ರಾಘವೇಂದ್ರ ಭಟ್ ಅವರನ್ನು ಆಗುಂಬೆ ಭಾಗದ ಪ್ರಮುಖ ನಾಯಕ ಹಸಿರುಮನೆ ನಂದನ್ ಮತ್ತು ಸ್ನೇಹಿತರು ತಮ್ಮ…

Read Full News

ರಿಪ್ಪನ್‌ಪೇಟೆ ಪದವಿ ಕಾಲೇಜಿನ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ರಿಪ್ಪನ್‌ಪೇಟೆ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿ ಪ್ರಜ್ವಲ್ ಎನ್ ಎಮ್ ಉತ್ತರಾಖಂಡ ರಾಜ್ಯದ ರುದ್ರಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ 23ನೇ ಯುವ ವಾಲಿಬಾಲ್ ಚಾಂಪಿಯನ್‌ ಶಿಪ್ ಗೆ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಾಷ್ಟೀಯ ಮಟ್ಟದ  ವಾಲಿಬಾಲ್ (21ವರ್ಷದೊಳಗಿನ ವಯೋಮಿತಿ) ಪಂದ್ಯವು ಇದೇ ತಿಂಗಳ 11 ರಿಂದ 16 ರವರೆಗೆ ಉತ್ತರಾಖಂಡ ರಾಜ್ಯದ ರುದ್ರಪುರದಲ್ಲಿ ನಡೆಯಲಿದೆ. ರಿಪ್ಪನ್ ಪೇಟೆಯ ವಿದ್ಯಾ ನಗರ ನಿವಾಸಿಗಳಾದ ಶಿಕ್ಷಕರಾದ ಮಹೇಶ್ವರ ಆಚಾರಿ ಹಾಗೂ ಮೀನಾಕ್ಷಿ ದಂಪತಿಗಳ…

Read Full News

ಶಿಕ್ಷಣದಿಂದಲೇ ಮಾತ್ರ ಜಗತ್ತಿನ ಪರಿವರ್ತನೆ ಸಾಧ್ಯ :ಶ್ರೀ ರೇಣುಕಾನಂದ ಸ್ವಾಮೀಜಿ

ರಿಪ್ಪನ್ ಪೇಟೆ : ಮಾನವನ ಬದುಕಿನಲ್ಲಿ ಶಿಕ್ಷಣ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಪೋಷಕರು  ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಶಿಕ್ಷಣದಿಂದಲೇ ಮಾತ್ರ ಜಗತ್ತಿನ ಪರಿವರ್ತನೆ ಸಾಧ್ಯ ಎಂದು ನಿಟ್ಟೂರಿನ ಶ್ರೀನಾರಾಯಣಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿಗಳು ಹೇಳಿದರು.  ಹಾರಂಬಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಹಾಗೂ ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು….

Read Full News

ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಬಗ್ಗೆ ಮುಸ್ಲಿಂ ಮುಖಂಡರೇ ನಿರ್ಧರಿಸಲಿ: ಸಚಿವ ಕೆ ಎಸ್ ಈಶ್ವರಪ್ಪ

ಮಸೀದಿಯಲ್ಲಿ ಧ್ವನಿವರ್ಧಕ ತೆಗೆಸದಿದ್ದರೆ ನಾವೂ ಹನುಮಾನ್ ಚಾಳೀಸ್ ಕೇಳಿಸುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ.  ಹೀಗೆ ಬೇಕಾ ಬಿಟ್ಟಿ ಹೇಳುವದರಿಂದ ಕೋಮು ಸಂಘರ್ಷವಾಗಬಹುದು. ಧ್ವನಿವರ್ಧಕ ಬಳಸುವ ಬಗ್ಗೆ ಮುಸ್ಲಿಂ ಮುಖಂಡರೇ ನಿರ್ಧರಿಸಬೇಕು. ದೇವಸ್ಥಾನಗಳಲ್ಲಿ, ಚರ್ಚ್‌ಗಳಲ್ಲಿ ನಡೆಯುವ ರೀತಿ ಬೇರೆಯವರಿಗೆ ತೊಂದರೆಯಾಗದಂತೆ ಮಸೀದಿಯೊಳಗೇ ಧ್ವನಿವರ್ಧಕ ಬಳಸುವುದು ಸೂಕ್ತ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಕಾಂಗ್ರೆಸ್ ನವರು ಅಲ್ಲಾಹುವನ್ನು ಮರೆತರು. ಏಸುಕ್ರಿಸ್ತನನ್ನೂ ಮರೆತರು. ಬುದ್ಧ, ಬಸವ, ಅಂಬೇಡ್ಕರ್ ನೆಪ ಶುರು ಮಾಡಿದ್ದಾರೆ. ಭಗವಂತ ಅವರಿಗೆ ಒಳ್ಳೆಯದು…

Read Full News

ಬಿದರಹಳ್ಳಿ ಕುಮಧ್ವತಿ ನದಿಯಲ್ಲಿ ಮೀನುಗಳ ಮಾರಣಹೋಮ : ನದಿಯ ಒಡಲಿಗೆ ವಿಷ ಬೆರೆಸಿದ ಪಾಪಿಗಳು

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಬಿದರಹಳ್ಳಿ ಗ್ರಾಮದ ಕುಮದ್ವತಿ ನದಿಯಲ್ಲಿ ಕಿಡಿಗೇಡಿಗಳು ವಿಷ ಬೆರೆಸಿ ಮೀನು ಸೇರಿದಂತೆ ಪ್ರಾಣಿ ಪ್ರಭೇದಗಳ ಮಾರಣಹೋಮ ನಡೆಸಿರುವ ಘಟನೆ ನಡೆದಿದೆ. ಹೌದು ಬಿದರಹಳ್ಳಿ ಕುಮದ್ವತಿ ನದಿಯಲ್ಲಿ ಕಿಡಿಗೇಡಿಗಳು ನದಿಯ ನೀರಿಗೆ  ಮೈಲುತುತ್ತ ವಿಷ ಬೆರೆಸಿ ಪ್ರಾಣಿ ಪ್ರಭೇದಗಳ ಮಾರಣಹೋಮ ನಡೆಸಿದ್ದಾರೆ.ಕುಮದ್ವತಿ ನದಿಯಲ್ಲಿ ಬೇಸಿಗೆ ಕಾರಣದಿಂದ ನೀರು ಇಂಗಿ ಹೋಗಿದ್ದು ಅಲ್ಲಲ್ಲಿ ಕೆಲ ಹೊಂಡದಲ್ಲಿ ಪ್ರಾಣಿ ಪ್ರಭೇದಗಳು ಜೀವಿಸುತ್ತವೆ.ಇದನ್ನೇ ಗುರಿಯಾಗಿಸಿಕೊಂಡು ಕಿಡಿಗೇಡಿಗಳು ವಿಷಯುಕ್ತ “ಮೈಲುತುತ್ತ” ವನ್ನು ಆ ನೀರಿಗೆ ಬೆರೆಸಿ ಲಕ್ಷಾಂತರ…

Read Full News

ಆನಂದಪುರ ಸಮೀಪ ಅಕ್ರಮ ಗೋಮಾಂಸ ಮಾರುತ್ತಿದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು :

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಸಮೀಪದ ಗೌತಮಪುರ ಗ್ರಾಮದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಸಂಜೆ ನಡೆದಿದೆ. ಹಬೀಬ್ ( 35 ) ಶಿಕಾರಿಪುರ ಮೂಲದ ವ್ಯಕ್ತಿ ಗೋಮಾಂಸ ಮಾರುತ್ತಿದ್ದ ವ್ಯಕ್ತಿ ಎಂದು ತಿಳಿದುಬಂದಿದೆ. ಬಜಾಜ್ ಪ್ಲಾಟಿನಾ ಕೆ ಎ 15 ಈಎಪ್ 2782  ಬೈಕ್ ನ ಬ್ಯಾಗ್ ನಲ್ಲಿ ಅಂದಾಜು ಹತ್ತು ಕೆಜಿ ಯಷ್ಟು ಗೋಮಾಂಸವನ್ನು ಗೌತಮಪುರದ ಗ್ರಾಮದ ಕೆಲವು ಮನೆಗಳಿಗೆ ಅಕ್ರಮವಾಗಿ ಮಾರಾಟ…

Read Full News

ಹಲಾಲ್ – ಜಟ್ಕಾ ಹೆಸರಿನಲ್ಲಿ ಸಮಾಜ ಒಡೆಯುವ ಕುತಂತ್ರ ನಡೆಯುತ್ತಿದೆ : ಸಚಿವ ಕೆ ಎಸ್ ಈಶ್ವರಪ್ಪ

ಹಲಾಲ್‌ ಅಥವಾ ಜಟ್ಕಾ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕುತಂತ್ರ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಭಾನುವಾರ ಕಾರ್ಕಳ ತಾಲ್ಲೂಕಿನ ನಿಟ್ಟೆಯಲ್ಲಿ ಎಂಆರ್‌ಎಫ್‌ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಚಿವರು, ‘ಹಲಾಲ್ ಹಾಗೂ ಜಟ್ಕಾ ವಿವಾದ ಸೃಷ್ಟಿಸಿರುವುದು ಕೆಲವು ವ್ಯಕ್ತಿಗಳು ಹಾಗೂ ಪಕ್ಷಗಳು. ಯಾರು ಯಾವ ಪದ್ಧತಿಯನ್ನು ಅನುಸರಿಸುತ್ತಿದ್ದಾರೋ ಅದನ್ನೇ ಮುಂದುವಸಿಕೊಂಡು ಹೋಗಲಿ’ ಎಂದು ಹೇಳಿದರು. ‘ಹಲಾಲ್‌ ಹಾಗೂ ಜಟ್ಕಾ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಚುನಾವಣೆಯಲ್ಲಿ ತೊಡೆ ತಟ್ಟಿ, ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗೋಣ’…

Read Full News

ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ : ಸಮಾಜದಲ್ಲಿನ ಪ್ರತಿಯೊಬ್ಬರನ್ನು ಗೌರವಿಸಿ :ನಾಗರಾಜ ಪರಿಸರ.

ರಿಪ್ಪನ್ ಪೇಟೆ : ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ  ಶಿಕ್ಷಣ  ಪಡೆಯುತ್ತಿರುವ ಯುವ ಸಮೂಹ  ಪ್ರತಿಯೊಬ್ಬರನ್ನು  ಗೌರವಿಸುವ  ಮನೋಭಾವನೆಯನ್ನು ಬೆಳೆಸಿಕೊಂಡರೆ  ಉತ್ತಮ ಸಮಾಜ  ನಿರ್ಮಾಣ ಮಾಡಬಹುದು ಎಂದು ಕುವೆಂಪು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ  ಸಂಯೋಜನೆ ಅಧಿಕಾರಿ  ಡಾ. ನಾಗರಾಜ  ಪರಿಸರ  ಹೇಳಿದರು.  ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಇಂದಿನ ಯುವ ಸಮೂಹ ಸಮಾಜದಲ್ಲಿನ ಪ್ರತಿಯೊಬ್ಬರನ್ನು ಗೌರವಿಸುವಂತಾಗಬೇಕು. ಅಂತ ಮನೋಭಾವನೆಯನ್ನು…

Read Full News

ಶರಾವತಿ ಹಿನ್ನಿರಿನಲ್ಲಿ ಸರಾಗವಾಗಿ ಈಜುತ್ತಿದ್ದ ಯುವಕ ಸ್ವಿಮ್ಮಿಂಗ್ ಫೂಲ್ ನಲ್ಲಿ ಮುಳುಗಿ ಸಾವು :

ಶಿವಮೊಗ್ಗದ ಸಿಂಹಧಾಮದ ಬಳಿ ಇರುವ ಖಾಸಗಿ  ಈಜುಕೊಳದಲ್ಲಿ ಈಜಲು ಹೋದ ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ.  ಸ್ನೇಹಿತರೊಂದಿದೆ ಈಜಲು ಹೋಗಿದ್ದ ಅನಿಲ್ ಕುಮಾರ್ ಎಂಬ ಯುವಕ ಶವವಾಗಿ ಪತ್ತೆಯಾಗಿದ್ದಾನೆ.  ಈತನ ಸಾವಿನ ಬಗ್ಗೆ ಆತನ ಕುಟುಂಬ ವರ್ಗದಿಂದ ಅನುಮಾನ ವ್ಯಕ್ತವಾಗಿದೆ. ಹೊಸನಗರದ ಶರಾವತಿ ಹಿನ್ನೀರಿನಲ್ಲಿ ಸರಾಗವಾಗಿ ಈಜುಹೊಡೆಯುವ ಅನಿಲ್ ಕುಮಾರ್ ಈಜುಕೊಳದಲ್ಲಿ ಶವವಾಗಿ ಪತ್ತೆಯಾಗಿರುವುದಕ್ಕೆ ಕುಟುಂಬ ಅನುಮಾನ ವ್ಯಕ್ತಪಡಿಸಿದೆ. ಶಿವಮೊಗ್ಗದ ಸಿಂಹಧಾಮದ ಹಿಂಭಾಗದಲ್ಲಿ ಬರುವ ಕರಣ್ ಸ್ವಿಮ್ಮಿಂಗ್ ಫೂಲ್ ನಲ್ಲಿ ಅನಿಲ್ ಕುಮಾರ್ ನಿನ್ನೆ ಸ್ವಿಮ್ಮಿಂಗ್ ಫೂಲ್ ನಲ್ಲಿ…

Read Full News

ವರದಕ್ಷಿಣೆ ಕಿರುಕುಳ, ವಿಷಸೇವಿಸಿ ಗೃಹಿಣಿ ಆತ್ಮಹತ್ಯೆ : ಗಂಡನ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲು

 ವರದಕ್ಷಿಣೆ ಕಿರುಕುಳ ತಾಳದೇ ವಿಷಸೇವಿಸಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದಲ್ಲಿ ನಡೆದಿದೆ. ವಿಷ ಸೇವಿಸಿ ಗಾನವಿ(27) ಎಂಬ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆಂದು ಪತಿಯ ಕುಟುಂಬಸ್ಥರ ವಿರುದ್ಧ ಗಾನವಿ ಪೋಷಕರು ಆರೋಪಿಸಿದ್ದಾರೆ.ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಯುಗಾದಿ ಹಬ್ಬ. ಹೊಸ ವರ್ಷದ ಸಂಭ್ರದಲ್ಲಿರಬೇಕಿದ್ದ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಯುಗಾದಿ ದಿನದಂದೇ ವರದಕ್ಷಿಣೆ ಕಿರುಕುಳಕ್ಕೆ ನೊಂದ ನವವಿವಾಹಿತೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ….

Read Full News

ಕೋಡೂರು ಸಮೀಪದ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ :

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಸಿದ್ದಗಿರಿ ಸಮೀಪದ ಕ್ವಾರೆ ಕ್ರಾಸ್ ಗ್ರಾಮದಲ್ಲಿ ಸುಮಾರು 50 ರ ಪ್ರಾಯದ ಆಸುಪಾಸಿನ ವ್ಯಕ್ತಿಯ ಶವ  ದೊರೆತಿದೆ. ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇನ್ನೂ ಗುರುತು ಪತ್ತೆಯಾಗಿಲ್ಲ.ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಸ್ಥಳಕ್ಕೆ ರಿಪ್ಪನ್ ಪೇಟೆ ಪೊಲೀಸರು ದೌಡಾಯಿಸಿದ್ದು ತನಿಖೆ ಪ್ರಾರಂಭಿಸಿದ್ದಾರೆ. ಮೃತ ವ್ಯಕ್ತಿಯ ಬಗ್ಗೆಗಿನ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.

Read Full News

ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಹಿನ್ನಲೆ ವೈಯಕ್ತಿಕ ದ್ವೇಷ, ಹಳೆಯ ಗಲಾಟೆ ವಿಚಾರ ಅಲ್ಲ : NIA ದಾಖಲು ಮಾಡಿರುವ ಪ್ರಥಮ ವರದಿಯಲ್ಲಿ ಅಘಾತಕಾರಿ ಅಂಶ!!!!

ಶಿವಮೊಗ್ಗದಲ್ಲಿ ಇತ್ತೀಚೆಗೆ ಬಜರಂಗದಳ ಕಾರ್ಯಕರ್ತ ಹರ್ಷ ಎಂಬ ಯುವಕನ ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳವು ತನ್ನ ಪ್ರಾಥಮಿಕ ವರದಿಯಲ್ಲಿ ಹರ್ಷ ಕೊಲೆ ಹಿಂದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹುನ್ನಾರ ಅಡಗಿತ್ತು. ತನ್ಮೂಲಕ ಕೋಮುಗಲಭೆ ಎಬ್ಬಿಸುವ ಉದ್ದೇಶವಿತ್ತು ಎಂಬ ಆತಂಕಕಾರಿ ಅಂಶ ಬಹಿರಂಗಪಡಿಸಿದೆ. NIA ದಾಖಲು ಮಾಡಿರುವ ಎಫ್‌ಐಆರ್‌ನಲ್ಲಿ ಏನೇನು ಉಲ್ಲೇಖವಾಗಿದೆ ಎಂಬುದರ ವಿವರ ಟಿವಿ9 ಗೆ ಲಭ್ಯವಾಗಿದೆ. ಹರ್ಷ ಕೊಲೆ ಪ್ರಕರಣದಲ್ಲಿ 10 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಸಮಾಜಯದಲ್ಲಿ ಭಯ ಹುಟ್ಟಿಸುವ…

Read Full News

“ಸ್ವಧರ್ಮದಲ್ಲಿ ನಿಷ್ಠೆ, ಪರ ಧರ್ಮದಲ್ಲಿ ಸಹಿಷ್ಣುತಾ “: ಭಾವವನ್ನು ಹೊಂದಿರುವ ದೇಶ ನಮ್ಮದು : ಮಳಲಿ ಶ್ರೀ

 ರಿಪ್ಪನ್ ಪೇಟೆ : ನಮ್ಮ ದೇಶವು ಅನೇಕ ಧರ್ಮಗಳ ಮಹಾಸಾಗರ ವಾಗಿದ್ದು ಅನೇಕತೆಯಲ್ಲಿ ಏಕತೆಯನ್ನು ಹೊಂದಿ ಸ್ವಧರ್ಮದಲ್ಲಿ ನಿಷ್ಠೆ ಪರಧರ್ಮ ದಲ್ಲಿ ಸಹಿಷ್ಣುತಾ ಭಾವವನ್ನು ಹೊಂದಿರುವ ದೇಶವಾಗಿದೆ ಎಂದು ಮಳಲಿ ಮಠದ  ಶ್ರೀ ಡಾ.  ಗುರು ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.  ರಿಪ್ಪನ್ ಪೇಟೆ ಪಟ್ಟಣದ ವಿನಾಯಕ ವೃತ್ತದಲ್ಲಿ ಇಂದು ಹಿಂದೂ ಮಹಾಸಭಾ ವತಿಯಿಂದ ಆಯೋಜಿಸಲಾಗಿದ್ದ ಹೊಸವರ್ಷದ ಧ್ವಜಾರೋಹಣದ  ಯುಗಾದಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ  ಸ್ವಾಮೀಜಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.  ವಿಶ್ವದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭಾರತವು…

Read Full News

ಕಾಗೋಡು ಪುತ್ರಿ ರಾಜನಂದಿನಿ ಸಿಡಿಸಿದ ಹೊಸ ಬಾಂಬ್ : ಜಿಕೆಬಿ ಗೆ ಟಿಕೆಟ್ ತಪ್ಪಿಸಲು ಉರುಳಿಸಿದ ಹೊಸ ಅಸ್ತ್ರವೇ ????

ಕರ್ನಾಟಕ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದೆ  ಪ್ರಬಲ ಆಕಾಂಕ್ಷಿಗಳು ಕೂಡ ತಮಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಸಾಕಷ್ಟು ಜನ ಇದ್ದಾರೆ. ಸಾಗರದಿಂದಲೂ ಹಲವಾರು ಆಕಾಂಕ್ಷಿಗಳು ಕಾಂಗ್ರೆಸ್ ನಿಂದ ಟಿಕೆಟ್ ಪಡೆದುಕೊಳ್ಳಲು ಜೋರು ತಯಾರಿ ಕೂಡಾ  ನಡೆಸುತ್ತಿದ್ದಾರೆ. ಆದರೆ ಇವತ್ತು ಸಾಗರದಲ್ಲಿ  ಮಾತನಾಡಿದ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಾಗೋಡು ತಿಮ್ಮಪ್ಪನವರು ಸ್ಪರ್ಧಿಸಲಿದ್ದಾರೆ ಅವರಿಗೆ ಟಿಕೆಟ್ ಸಿಗಲಿದೆ ಹಾಗೂ ಅವರು ಇನ್ನೂ ಜನಸೇವೆ ಮಾಡುವ…

Read Full News

ಬಡಮಕ್ಕಳ ಶಿಕ್ಷಣದಿಂದ ಸಮಾಜ ಸುಶಿಕ್ಷಿತ : ಕೋಣಂದೂರು ಶ್ರೀ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ರಿಪ್ಪನ್‌ಪೇಟೆ: ಬಡಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಸುಶಿಕ್ಷಿತ ಸಮಾಜ ನಿರ್ಮಾಣವಾಗುತ್ತದೆ. ಎಂಬ ಕಲ್ಪನೆಯಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೊಂದಿದ್ದರು ಎಂದು ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಿದ್ಧಗಂಗಾ ಶ್ರೀಗಳ ಭಕ್ತವೃಂದದವತಿಯಿಂದ ಇಂದು ಶ್ರೀ ಡಾ. ಶಿವಕುಮಾರಸ್ವಾಮೀಜಿಯವರ ೧೧೫ನೇ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಆರ್ಥಿಕ ಸಬಲರಲ್ಲದ ಗ್ರಾಮೀಣ ಭಾಗದ  ಮಕ್ಕಳಿಗೆ ಶಿಕ್ಷಣ ದುರ್ಲಬವಾಗಿದ್ದ ಸಂದರ್ಭದಲ್ಲಿ ಸ್ವಾಮೀಜಗೆ ಶ್ರೀಮಠದಲ್ಲಿ ವಿದ್ಯಾ ಕೇಂದ್ರವನ್ನು ತೆರೆದು ತನ್ಮೂಲಕ, ಅನ್ನ, ಅಕ್ಷರ…

Read Full News

ಹೊಸನಗರದಲ್ಲಿ ವೀರಶೈವ ಸಮಾಜಕ್ಕೆ ಜಾಗ ಮಂಜೂರು ಮಾಡುವಂತೆ ಒತ್ತಾಯಿಸಿ ವೀರಶೈವ-ಲಿಂಗಾಯಿತ ಪರಿಷತ್ ನಿಂದ ತಹಶೀಲ್ದಾರರಿಗೆ ಮನವಿ:

ಹೊಸನಗರ : ತಾಲೂಕು ವೀರಶೈವ-ಲಿಂಗಾಯಿತ ಪರಿಷತ್ ನಿಂದ ಹೊಸನಗರ ವೀರಶೈವ ಸಮಾಜಕ್ಕೆ ಹೊಸನಗರದಲ್ಲಿ  ಜಾಗವನ್ನು ಮಂಜೂರು ಮಾಡಿ ಕೊಡಬೇಕೆಂದು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು. ತಾಲೂಕ್ ವ್ಯಾಪ್ತಿಯಲ್ಲಿ ವೀರಶೈವ ಸಮಾಜಕ್ಕೆ ಜಾಗವನ್ನು ಮಂಜೂರು ಮಾಡುವುದರ ಮೂಲಕ ಸಮಾಜದ ಬೆಳವಣಿಗೆಗೆ ಅನುಕೂಲ ಮಾಡಿಕೊಡಬೇಕೆಂದು ತಾಲೂಕ್ ವೀರಶೈವ-ಲಿಂಗಾಯಿತ ಪರಿಷತ್ ನ ಅಧ್ಯಕ್ಷರಾದ ಮೆಣಸೆ ಆನಂದ್ ರವರ ನೇತೃತ್ವದಲ್ಲಿ ಹೊಸನಗರ ತಹಶೀಲ್ದಾರ್ ವಿ ಎಸ್ ರಾಜೀವ್ ರವರಿಗೆ ಮನವಿ ಸಲ್ಲಿಸಿದರು ಈ ಸಂಧರ್ಭದಲ್ಲಿ ಹೊಸನಗರ ತಾ ಪಂ ಮಾಜಿ ಅಧ್ಯಕ್ಷರಾದ ವೀರೇಶ್…

Read Full News

ಶಾಲೆಗಳಲ್ಲಿನ ಬಿಸಿಯೂಟ ಕಾರ್ಯಕ್ರಮಕ್ಕೆ ಡಾ| ಶಿವಕುಮಾರ ಸ್ವಾಮೀಜಿ ಹೆಸರು: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

ಶಾಲೆಗಳಲ್ಲಿ ನಡೆಯುತ್ತಿರುವ ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ತುಮಕೂರಿನ  ಸಿದ್ಧಗಂಗಾ ಮಠದಲ್ಲಿ ಶುಕ್ರವಾರ ನಡೆದ ಶಿವಕುಮಾರ ಸ್ವಾಮೀಜಿ ಅವರ   115ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ. ಮಠದಲ್ಲಿ ಬೆಳಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಗದ್ದುಗೆ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ…

Read Full News

ಹಲಾಲ್ ಮಾಂಸ ಮಾರಾಟಗಾರನ ಮೇಲೆ ಬಜರಂಗದಳದವರಿಂದ ಹಲ್ಲೆ: ಪ್ರಕರಣ ದಾಖಲು

ಹಲಾಲ್ ಮಾಂಸ ಮಾರಾಟಗಾರನ ಮೇಲೆ ಬಜರಂಗದಳದ ಸದಸ್ಯರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಧಾರ್ಮಿಕ ವಿಭಜನೆ ಬಿಕ್ಕಟ್ಟು ದಿನಕಳೆದಂತೆ ಹೆಚ್ಚಾಗುತ್ತಿದೆ. ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಭಹಿಷ್ಕಾರ, ಹಲಾಲ್ ಕಟ್-ಜಟ್ಕಾ ಕಟ್ ವಿವಾದಗಳು ಒಂದಾದ ಮೇಲೊಂದರಂತೆ ಸಮಾಜದಲ್ಲಿ ಶಾಂತಿಯನ್ನು ಕದಡುತ್ತಿವೆ. ಇದರ ಬೆನ್ನಲ್ಲೆ ಹಲಾಲ್ ಮಾಂಸ ಮಾರಾಟಗಾರನ ಮೇಲೆ ಹಲ್ಲೆ ಮಾಡಿರುವುದು ಹಿಂಸಾಚಾರವನ್ನು ಭುಗಿಲೇಳಲಿದೆ. ಇದಕ್ಕೆ ಬಿಜೆಪಿ ಪ್ರಚೋದನೆ ನೀಡುತ್ತಿದೆ ಎನ್ನುವ ಆರೋಪಗಳನ್ನು ವಿಪಕ್ಷಗಳು ಮಾಡುತ್ತಿವೆ. ಹೀಗಾಗಿ ರಾಜ್ಯದಲ್ಲಿ ಧಾರ್ಮಿಕ…

Read Full News

ಹರ್ಷ ಹತ್ಯೆ ಪ್ರಕರಣ : ಪ್ರಚೋದನಕಾರಿ ಹೇಳಿಕೆ ಆರೋಪ, ಸಚಿವ ಈಶ್ವರಪ್ಪ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

 ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಸಚಿವ ಈಶ್ವರಪ್ಪ ವಿರುದ್ಧ ತನಿಖೆ ನಡೆಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ ಆದೇಶ ನೀಡಿದೆ. ಶಿವಮೊಗ್ಗದಲ್ಲಿ ಕಳೆದ ತಿಂಗಳ 20ರಂದು ನಡೆದಿದ್ದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಈ ಸಂಬಂಧ ಪ್ರಚೋದನಕಾರಿ, ಸಾರ್ವಜನಿಕ ಹೇಳಿಕೆ ನೀಡಿ ಹಿಂದೂ-ಮುಸ್ಲಿಂ ಸಮುದಾಯದ ನಡುವೆ ವೈರತ್ವ ಉಂಟಾಗುವಂತೆ ಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಬಿಜೆಪಿ ಮುಖಂಡ ಚನ್ನಬಸಪ್ಪ…

Read Full News

ಎಸಿಬಿ ಬಲೆಗೆ ಬಿದ್ದ ಪಿಡಿಒ ವಿರುದ್ದ ದೂರು ಕೊಟ್ಟ ವ್ಯಕ್ತಿಗೆ ಬೆದರಿಕೆ ಹಾಕಿದ ಗ್ರಾಪಂ ಸದಸ್ಯ

ಹೊಸನಗರ  ತಾಲೂಕಿನ ಕೋಡೂರಿನ ಕುಸಗುಂಡಿಯ ಸಿದ್ದಗಿರಿ ನಿವಾಸಿ ಸತೀಶ್ ರವರ ಬಳಿ ಎಂ ಗುಡ್ಡೆಕೊಪ್ಪದ ಪಿಡಿಒ ಮುರುಗೇಶ್ 30 ಸಾವಿರ ರೂ ಲಂಚ ಪಡೆಯುವಾಗ ಎಸಿಬಿ ಬಲೆಗೆ‌ಬಿದ್ದಿದರು. ಸತೀಶ್ ರವರು ತಮ್ಮ ಭೂ ಪರಿವರ್ತನೆಗೊಂಡ 10 ಗುಂಟೆ ಜಾಗಕ್ಕೆ ಪ್ಲಾನ್ ಅಪ್ರೂವಲ್, ಮುಟೇಷನ್ ಮತ್ತು‌ 9  ಮತ್ತು 11 ಅರ್ಜಿ ಅನುಮತಿ ಮಾಡಿಕೊಡಲು ಎಂ.ಗುಡ್ಡೇಕೊಪ್ಪಕ್ಕೆ ಅರ್ಜಿ ಸಲ್ಲಿಸಿದ್ದರು. ಸತೀಶ್ ಕೆಲಸಕ್ಕೆ ಪಿಡಿಒ ಮುರುಗೇಶ್ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು ಈ ಸಂಬಂಧ ಎಸಿಬಿ ಮೊರೆ…

Read Full News

ಪರೀಕ್ಷಾ ಶುಲ್ಕ ಕಡಿತಗೊಳಿಸುವಂತೆ ಒತ್ತಾಯಿಸಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ :

ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಪದವಿಯ ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಪರೀಕ್ಷ ಶುಲ್ಕ ಕಟ್ಟಲು ಸೂಚಿಸಿರುವ ಹಿನ್ನೆಲೆಯಲ್ಲಿ ಪರೀಕ್ಷ ವಿಭಾಗದ ಮುಂಭಾಗದಲ್ಲಿ ವಿದ್ಯಾರ್ಥಿನಿಯರು ಭರ್ಜರಿ ಪ್ರತಿಭಟನೆಗೆ ಇಳಿದಿದ್ದಾರೆ. ಪರೀಕ್ಷಾ ಶುಲ್ಕವನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಹಿಂದಿನ ಸೆಮಿಸ್ಟರ್ ನಲ್ಲಿ ಸಂಪೂರ್ಣ ಪರೀಕ್ಷಾ ಶುಲ್ಕ ಪಾವತಿಸಿದ್ದು ಕೋವಿಡ್  ಕಾರಣ ಪರೀಕ್ಷೆ ನಡೆದಿರುವುದಿಲ್ಲ, ಕೇವಲ ಅಂಕ ಪಟ್ಟಿಯನ್ನು ಮಾತ್ರ ನಿಂತಿರುತ್ತಾರೆ ಈ ಕಾರಣದಿಂದ ಈ ಬಾರಿ ಪರೀಕ್ಷಾ ಶುಲ್ಕದ ಬಾಕಿಯನ್ನು ಕಳೆದ ಬಾರಿ ಕಟ್ಟಿರುವ ಶುಲ್ಕಕ್ಕೆ ಜಮಾ ಮಾಡಿಕೊಂಡು ವಿದ್ಯಾರ್ಥಿಗಳ…

Read Full News

ತರಕಾರಿ ಸಾಗಾಣಿಕೆ ವಾಹನ ಬೈಕ್ ಗೆ ಢಿಕ್ಕಿ: ಇಬ್ಬರು ಸಾವು

ಸೊರಬ: ತರಕಾರಿ ಸಾಗಾಣಿಕೆ ವಾಹನ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕರ್ಜಿಕೊಪ್ಪ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಶಿಕಾರಿಪುರ ತಾಲೂಕಿನ ಕರ್ನಲ್ಲಿ ಗ್ರಾಮದ ರುದ್ರಗೌಡ ಮಲ್ಲೇಶಗೌಡ(50) ಹಾಗೂ ಭರಮಗೌಡ ಚಂದ್ರಪ್ಪ ( 35) ಮೃತ ದುರ್ದೈವಿಗಳು. ಶಿರಾಳಕೊಪ್ಪ ಮಾರ್ಗವಾಗಿ ಸಾಗರದೆಡೆಗೆ ತೆರಳಿತ್ತಿದ್ದ ತರಕಾರಿ ಸಾಗಾಣಿಕೆ ವಾಹನ ಎದುರಿಗೆ ಬರದುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ…

Read Full News

ಜನಮನ್ನಣೆ ಗಳಿಸಿರುವ ತೀರ್ಥಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಸುಧಾಕರ್ ರವರಿಗೆ ಎರಡನೆ ಬಾರಿ ಒಲಿದ ಮುಖ್ಯಮಂತ್ರಿ ಪದಕ

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್  ಸೇವೆ ಸಲ್ಲಿಸುತ್ತಿರುವ ಸುಧಾಕರ್ ಅವರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಮುಖ್ಯಮಂತ್ರಿಗಳ ಪದಕದ ಗೌರವ ಲಭಿಸಿದೆ .ಈ ಪದಕ ಅವರಿಗೆ ಎರಡನೇ ಬಾರಿ ಲಭಿಸುತ್ತಿರುವುದು  ಹೆಮ್ಮೆಯ ವಿಚಾರವಾಗಿದೆ . ಸುಧಾಕರ್ ರವರು ತೀರ್ಥಹಳ್ಳಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಅನೇಕ ಪ್ರಕರಣಗಳಲ್ಲಿ ಕ್ರಿಮಿನಲ್  ಆರೋಪಿಗಳನ್ನು ಪತ್ತೆ ಹಚ್ಚಲು  ಹೆಚ್ಚಿನ ಶ್ರಮವಹಿಸಿದವರಾಗಿದ್ದಾರೆ .ತೀರ್ಥಹಳ್ಳಿಯ  ವ್ಯಾಪ್ತಿಯ ಹತ್ತಾರು ಗಂಭೀರವಾದ ಕ್ರೈಮ್  ಪ್ರಕರಣಗಳಲ್ಲಿ ಕ್ಷಣಮಾತ್ರದಲ್ಲಿ ವಿಷಯವನ್ನು ಸಂಗ್ರಹಿಸಿ ತನಿಖೆಗೆ ಸಹಕರಿಸುವ ವಂತಾಗಲು ,ಆರೋಪಿಗಳನ್ನು…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.