ರಿಪ್ಪನ್ ಪೇಟೆ:ಅರಸಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವಾಪುರ ಗ್ರಾಮದ ವಸಂತ (34) ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ
ಕಳೆದ ಐದು ವರ್ಷದಿಂದ ಜಾಗ ಬಾಡಿಗೆ ಪಡೆದು ಶುಂಠಿ ಬೆಳೆ ಹಾಕಿದ್ದು, ಸತತ ಮೂರು ವರ್ಷಗಳಿಂದ ಶುಂಠಿ ಧಾರಣೆ ಕುಸಿತ ಕಂಡು ನಷ್ಟ ಅನುಭವಿಸಿ ದ ಈತ ಸಂಘ ಸಂಸ್ಥೆ ಹಾಗೂ ಇತರೆ ಕೈಗಡ ಸೇರಿದಂತೆ ಸುಮಾರು 10 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದು ಸಾಲಗಾರರ ಕಾಟಕ್ಕೆ ಹೆದರಿ ಈತ ಚಿಕ್ಕ ಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಟೆತಾರಿಗಾ ಗ್ರಾಮದ ಹಿಂಡ್ಲೆಮನೆ ರಸ್ತೆಯ ಪಕ್ಕದ ಕಾಡಿನಲ್ಲಿ ಶುಕ್ರವಾರ ಸಂಜೆ ಕಳೆನಾಶಕ ಕುಡಿದು ಸಾವನ್ನಪ್ಪಿದ್ದಾನೆ. ದಾರಿಹೋಕರು ಕಾಡಿನ ಮಧ್ಯೆ ಬೈಕ್ ನಿಂತಿದ್ದು ಗಮನಿಸಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮೃತರಿಗೆ ಪತ್ನಿ ಹಾಗೂ ಒಂದು ವರ್ಷದ ಹೆಣ್ಣುಮಗು ಇದೆ.ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.
ಈ ಕುರಿತು ರಿಪ್ಪನ್ ಪೇಟೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ