ತೀರ್ಥಹಳ್ಳಿ : ಪಟ್ಟಣದಲ್ಲಿ ಬಾಳೇಬೈಲಿನಿಂದ ಕುರುವಳ್ಳಿಯ ವಿಠಲನಗರದ ಮೂಲಕ ಕೊಪ್ಪಕ್ಕೆ ಹೋಗುವ ದಾರಿಗೆ ಹೊಸ ಸೇತುವೆ ಕಾರ್ಯ ಅತ್ಯಂತ ಭರದಿಂದ ಸಾಗುತ್ತಿದ್ದು ಈ ಸ್ಥಳಕ್ಕೆ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಕಾಮಗಾರಿ ಕಾರ್ಯಗಳನ್ನು ವೀಕ್ಷಿಸಿದರು.
ಕಾಮಗಾರಿ ವೀಕ್ಷಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರ ಇದೊಂದು ತೀರ್ಥಹಳ್ಳಿಯಲ್ಲೇ ಐತಿಹಾಸಿಕ ಸೇತುವೆಯಾಗಲಿದೆ. ಈ ಸೇತುವೆಗೆ 56 ಕೋಟಿ ರೂ ಮೊತ್ತದಲ್ಲಿ ಹಣ ಮಂಜೂರಾಗಿದೆ. ತೀರ್ಥಹಳ್ಳಿಯ ಪ್ರಸಿದ್ಧ ಸೇತುವೆಯಾದ ಜಯಚಾಮರಾಜೇಂದ್ರ ಸೇತುವೆಯ ವರ್ಷ ( ಕಾಲಾವಧಿ ) ಮುಗಿಯುತ್ತ ಬಂದಿದ್ದರಿಂದ ಹೊಸ ಸೇತುವೆ ಆಗಬೇಕಿತ್ತು ಆದ ಕಾರಣ ಈ ಸೇತುವೆ ಮಾಡಬೇಕಾಯಿತು ಎಂದು ತಿಳಿಸಿದರು. ಅತೀ ಕಡಿಮೆಯ ಅವಧಿಯಲ್ಲಿ ಈ ಸೇತುವೆಗೆ ಹಣ ಮಂಜೂರಾಗಿದೆ ಅದು ಸಂತೋಷದ ವಿಚಾರ. ಇನ್ನು ಮೇಗರವಳ್ಳಿಯಿಂದ ಆಗುಂಬೆಯ ರಸ್ತೆಗೆ 96 ಕೋಟಿ ರೂ ಮಂಜೂರಾಗಿದೆ ಎಂದು ತಿಳಿಸಿದರು.
ಇನ್ನು ಕಾಂಟ್ರಾಕ್ಟರ್ ನಾಗರಾಜ್ ನಾಯಕ್ ಮಾತನಾಡಿ ಈ ಸೇತುವೆಯ ಉದ್ದ 210 ಮೀ ಅಗಲ 16 ಮೀ ಇರಲಿದೆ. ಹೊಸ ಸೇತುವೆಯಲ್ಲಿ ಯಾವುದೇ ರೀತಿಯ ಹೊಸ ವಿನ್ಯಾಸ ಇರುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಗರಾಜ್ ನಾಯಕ್, ಗುತ್ತಿಗೆದಾರರು ಇಬ್ರಾಹಿಂ ಶರೀಫ್, ಹೆದ್ದೂರ್ ನವೀನ್, ಬಾಳೆಬೈಲು ರಾಘವೇಂದ್ರ ಸೊಪ್ಪುಗುಡ್ಡೆ ರಾಘವೇಂದ್ರ, ಸಂದೇಶ್ ಜವಳಿ ಸೇರಿ ಹಲವರು ಉಪಸ್ಥಿತರಿದ್ದರು
ವರದಿ : ಅಕ್ಷಯ್ ಕುಮಾರ್