ವಿಜ್ರಂಭಣೆಯಿಂದ ಜರುಗಿದ ಶ್ರೀ ಸಿದ್ಧಿವಿನಾಯಕಸ್ವಾಮಿ ಪ್ರತಿಷ್ಠವರ್ಧಂತ್ಯೋತ್ಸವ : ವಿನಯ್ ಗುರೂಜಿಯವರಿಂದ ಆಶೀರ್ವಚನ

ರಿಪ್ಪನ್‌ಪೇಟೆ: ಪಟ್ಟಣದ ಆರಾಧ್ಯ ದೈವ ಶ್ರೀಸಿದ್ಧಿವಿನಾಯಕ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ೫ನೇ ವರ್ಷದ ಪ್ರತಿಷ್ಠಾವರ್ಧಂತ್ಯೋತ್ಸವವು ವಿಜ್ರಂಭಣೆಯಿಂದ ಜರುಗಿತು.

ಶನಿವಾರ ಮುಂಜಾನೆ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿಪುಣ್ಯಾಃ ವಾಚನ, ನಾಂದಿ ಸಮಾರಾಧನೆ, ಮಹಾಸಂಕಲ್ಪ, ಋತ್ವಿಗ್ವರಣ, ಸಮೂಹಿಕ ಷಣ್‌ನಾರಿಕೇಳ ಗಣಹೋಮ, ನವಗ್ರಹ ಹೋಮದೊಂದಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.

 ಸ್ವಾಮಿಯ ಸನ್ನಿಧಿಯಲ್ಲಿ ಮಂಡಲ ರಚನೆ, ಬ್ರಹ್ಮಕಲಶ ಸ್ಥಾಪನೆ, ಮತ್ತು ಕಲಶಾಧಿವಾಸ ಹೋಮ, ದೇವಿ ಸನ್ನಿಧಿಯಲ್ಲಿ ಪಂಚವಿಂಶತಿ ದ್ರವ್ಯ ಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ ಪೂಜಾದಿಗಳು ನಡೆದವು, ಭಾನುವಾರ ಬೆಳಿಗ್ಗೆ ಶಿವಮೊಗ್ಗ ಆಗಮಿಕ ವೇದಮೂರ್ತಿ ಬ್ರಹ್ಮಶ್ರೀ ವಸಂತ ಭಟ್ಟ ಹಾಗೂ ಚಂದ್ರಶೇಖರ ಭಟ್ಟ, ಗುರುರಾಜ ಭಟ್ಟರವರ ನೇತೃತ್ವದಲ್ಲಿ ಕಲಾವೃದ್ಧಿ ಹೋಮ, ಕಲಾಷಾಭೀಷೇಕ
ಮಹಾಪೂಜೆ, ಕನಕಾಭಿಷೇಕ, ವಿಶೇಷ ರಂಗಪೂಜೆ, ದಿಂಡಿದೀಪೋತ್ಸವ, ಉಯ್ಯಾಲೆ ಸೇವೆ, ವಿಶೇಷ ರಥೋತ್ಸವದ ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ಜರುಗಿದವು.

ಈ ಸಂಧರ್ಭದಲ್ಲಿ ರಿಪ್ಪನ್‌ಪೇಟೆ ಪಿಗ್ಮಿ ಸಂಗ್ರಹ ಒಕ್ಕೂಟದವರಿಂದ ಭಕ್ತಾಧಿಗಳಿಗೆ ಮಜ್ಜಿಗೆ ವಿತರಿಸಲಾಯಿತು.


ಸಂಜೆ ಧಾರ್ಮಿಕ ಕಾರ್ಯಕ್ರದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಟ್ಟೆಹಕ್ಲು ಸುಧಾಕರ, ಕು|| ಪ್ರಣತಿ ಅಣ್ಣಪ್ಪ, ಕು|| ಶ್ರದ್ಧಾಸುಧಾಕರ ಇವರಿಂದ ಗಾಯನ ಕಾರ್ಯಕ್ರಮ, ನಂತರ ಶಿವಮೊಗ್ಗದ ಯಕ್ಷಕಲಾ ಬಳಗದಿಂದ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶನ ನಡೆಯಿತು.

ಸಂಜೆ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಮಹಾ ಮಗಳಾರತಿಯಲ್ಲಿ ಪಾಲ್ಗೊಂಡರು ನಂತರ ಭಕ್ತಾಧಿಗಳಿಗೆ ಆಶೀರ್ವಚನ ನೀಡಿದರು.


ವರ್ಧಂತ್ಯೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ಹರತಾಳು ಹಾಲಪ್ಪ ಭಾಗವಹಿಸಿ, ಕುಂಭಾಭಿಷೇಕದಲ್ಲಿ ಪಾಲ್ಗೊಂಡರು. ವ್ಯವಸ್ಥಪನಾ ಸಮಿತಿಯ ಗಣೇಶ ಕಾಮತ್, ಸೇವಾ  ಸಂಸ್ಥೆಯ ಎನ್. ಸತೀಶ್,ಎಂ ಬಿ ಮಂಜುನಾಥ್, ಸುಧೀಂದ್ರ ಪೂಜಾರಿ,ಉದ್ಯಮಿ ನಾಗರಾಜಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇

Leave a Reply

Your email address will not be published. Required fields are marked *