Headlines

ಬಜರಂಗದಳ ಕಾರ್ಯಕರ್ತನಿಗೆ ಕೊಲೆ ಬೆದರಿಕೆ : ಮೂವರ ಬಂಧನ

ಬಜರಂಗದಳದ ಕಾರ್ಯಕರ್ತನ ಹತ್ಯೆಗೆ ಸಂಚು ಮಾಡಿ ಮೂವರು ಅನ್ಯ ಕೋಮಿನ ಯುವಕರು ಬಂಧನಕ್ಕೊಳಗಾಗಿದ್ದಾರೆ. ಇಲ್ಲೂ ಸಹ ದೊಡ್ಡಪೇಟೆ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಸಂಚು ಹಾಕಿದ  ಮೂವರನ್ನ ಬಂಧಿಸಿ ಹೆಡೆಮುರಿಕಟ್ಟಿದ್ದಾರೆ.

ಬಜರಂಗದಳ ಕಾರ್ಯಕರ್ತನನ್ನ ಅನೇಕ ದಿನಗಳಿಂದ ಹಿಂಬಾಲಿಸಿದ ಮೂವರು ಯುವಕರು ಮೊನ್ನೆ ನ್ಯೂ ಮಂಡ್ಲಿಯ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ಕಾರ್ಯಕರ್ತನ ಸಹೋದರನನ್ನ ಮೂವರು ಯುವಕರು ಅಡ್ಡಹಾಕಿ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ. ನಿನ್ನ ಜೊತೆ ಬೈಕ್ ನಲ್ಲಿ ಓಡಾಡುತ್ತಿದ್ದ ಕಾರ್ಯಕರ್ತ ಎಲ್ಲಿ ಹೇಳು ಎಂದು ಮಾರಕಾಸ್ತ್ರಗಳನ್ನು ತೋರಿಸಿದ್ದಾರೆ.

ಲಾಂಗು ಬರ್ಜಿ ತೋರಿಸಿ ಆತನಿಗೆ ಹೇಳು ಸಂಜೆಯ ಒಳಗೆ ಆತನನ್ನ ಎಷ್ಟು ಹೊತ್ತು ಆದರೂ ಸಾಯಿಸದೆ ಬಿಡುವುದಿಲ್ಲವೆಂದು ಬೆದರಿಸಿಕೆ ಹಾಕಿದ್ದಾರೆ. ಅನೇಕ ದಿನಗಳಿಂದ ಫಾಲೋ ಮಾಡಿ ಬಜರಂಗದಳದ ಕಾರ್ಯಕರ್ತನೆಂದು ಗುರುತಿಸಿ ಕೊಲೆ ಬೆದರಿಕೆ ಹಾಕಿದ ನಾಲ್ವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೂವರನ್ನ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸಲ್ಮಾನ್, ಅಬ್ಬಾಸ್ ಮತ್ತು ಉಸ್ಮಾನ್ ಎಂಬುವರನ್ನ ಬಂಧಿಸಲಾಗಿದೆ. ಇನ್ನೋರ್ವನ ಪತ್ತೆಗೆ ಬಲೆ ಬೀಸಲಾಗಿದೆ. ಈ ಮೂವರು 25 ವರ್ಷದ ಒಳಗಿನ ಯುವಕರಾಗಿದ್ದಾರೆ.

ಹರ್ಷನ ಕೊಲೆಯಾದ ನಂತರ ಶಿವಮೊಗ್ಗದಲ್ಲಿ ಕೋಮು ಸಂಘರ್ಷ ನಿಲ್ಲುವ ಹಾಗೆ ಕಾಣುತ್ತಿಲ್ಲ. ಮತ್ತೊಂದು ಹೆಣಕ್ಕಾಗಿ ಸಂಚು ನಡೆಯುತ್ತಲೇ ಇದ್ದಂಗೆ ಕಾಣುತ್ತಿದೆ. ಈ ಅನುಮಾನಕ್ಕೆ ಈ ಪ್ರಕರಣ ಪುಷ್ಠಿ ನೀಡುತ್ತಿದೆ.

ಹರ್ಷನ ಕೊಲೆಗೆ ಪ್ರತಿಕಾರವಾಗಿ ಒಂದು ಕೋಮು ಇನ್ನೊಂದು ಕೋಮಿನ ಸದಸ್ಯರ ಹತ್ಯೆಗೆ ಸಂಚುಮಾಡಿ ಈಗಾಗಲೇ ಜೈಲು ಸೇರಿದ್ದಾಗಿದೆ. ಮೊನ್ನೆ ಸಾಗರ ರಸ್ತೆಯಲ್ಲಿ ಆಟೋದಲ್ಲಿ ಬಂದವ ಸರ್ಕಾರಿ ನೌಕರನಿಗೆ ಚಾಕುವಿನಿಂದ ಇರಿಯುವ ಪ್ರಯತ್ನ ನಡೆಸಲಾಗಿತ್ತು.

ಆದರೆ ಇದರ ಹಿಂದೆ ಅಂತಹ ದೊಡ್ಡಮಟ್ಟದ ಸಂಚು ಕಂಡುಬಂದಂತೆ ಕಾಣಲಿಲ್ಲವಾದರೂ ಹೆಚ್ಚುಕಮ್ಮಿಯಾಗಿದ್ದರೆ ಇದು ಸಹ ಕೋಮು ದಳ್ಳುರಿಗೆ ಕಾರಣವಾಗಿಬಿಡುತ್ತಿತ್ತು. ಇಲ್ಲಿ ದೊಡ್ಡಪೇಟೆ ಠಾಣೆಯ ಪೊಲೀಸರ ಮಿಂಚಿನ ಕಾರ್ಯ ಶ್ಲಾಘನೀಯವಾದುದ್ದು.

Leave a Reply

Your email address will not be published. Required fields are marked *