ರಿಪ್ಪನ್ ಪೇಟೆ ಮೆಸ್ಕಾಂ ಕಛೇರಿ ಎದುರು ಧರೆಗುರುಳಿದ ಮರ : ವಿದ್ಯುತ್ ಕಂಬ, ಟ್ರಾನ್ಸ್ ಫಾರಂ ಪುಡಿಪುಡಿ : ಪ್ರಾಣಾಪಾಯದಿಂದ ಪಾರಾದ ವಾಹನ ಚಾಲಕ

ಇಂದು ಸಂಜೆ ಸುರಿದ ಧಾರಾಕಾರ ಮಳೆ ಗಾಳಿಗೆ ಇಲ್ಲಿನ ಸಾಗರ ರಸ್ತೆಯ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಬೃಹದಾಕಾರದ ಮರವೊಂದು  ರಸ್ತೆ ಮೇಲೆ ಬಿದ್ದು ವಿದ್ಯುತ್ ಟ್ರಾನ್ಸ್ ಫಾರಂ ವಿದ್ಯುತ್ ಕಂಬ ತುಂಡಾಗಿ ಧರೆಗೆ ಉರುಳಿದ ಘಟನೆ ನಡೆದಿದೆ.

ಈ ಘಟನೆ ನಡೆಯುವ ಸಂದರ್ಭದಲ್ಲಿ ಸಾಗರ ಕಡೆಯಿಂದ ಬರುತ್ತಿದ್ದ ಸರಕು ಸಾಗಾಣಿಕೆ ವಾಹನದ ಮೇಲೆ ವಿದ್ಯುತ್ ತಂತಿ ಬಿದ್ದಿದ್ದು , ಗಾಳಿ ಮಳೆಗೆ ಹೆದರಿ ವಾಹನ ನಿಲ್ಲಿಸಿ ಇಳಿದು ಹೊರ ಹೋದಾಗ ಈ ಘಟನೆ ನಡೆದಿದೆ.


ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇಂದು ಸೋಮವಾರ ಆಗಿದ್ದರಿಂದ ಸೋಮವಾರದ ಸಂತೆ ಯ ಜನರ ದಟ್ಟಣೆ ಈ ರಸ್ತೆಯಲ್ಲಿ ಜಾಸ್ತಿ ಇತ್ತು.ಮಳೆ ಬರುತ್ತಿದ್ದ ಕಾರಣ ಸಾರ್ವಜನಿಕರು ಅಂಗಡಿ ಮುಂಗಟ್ಟುಗಳಲ್ಲಿ ಜನರು ನಿಂತಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಈ ಘಟನೆಗೆ  ವಿದ್ಯುತ್ ಇಲಾಖೆಯವರು ನಿರ್ಲಕ್ಷವೇ ಕಾರಣ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.ಪ್ರತಿ ವರ್ಷ ವಿದ್ಯುತ್ ಲೈನ್ ಗೆ ಯಾವುದೇ ಮರದ ಕೊಂಬೆಗಳು ತಾಗದಂತೆ ಕಡಿತಲೆ ಮಾಡುವುದಕ್ಕೆ ಲಕ್ಷಾಂತರ ವೆಚ್ಚ ಮಾಡುತ್ತಿದ್ದರೂ ಕಚೇರಿಯ ಮುಂಭಾಗದಲ್ಲಿ ಇದ್ದ ಮರವನ್ನು ತೆರವುಗೊಳಿಸದೇ ಇರುವುದು ಮೆಸ್ಕಾಂ ಇಲಾಖೆಯವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ. 

ಈ ಘಟನೆಯಿಂದ  ಇಂದು ರಿಪ್ಪನ್ ಪೇಟೆ ಕತ್ತಲೆಯಲ್ಲಿ ಇರಬೇಕಾದ ಸನ್ನಿವೇಶ ಒದಗಿಬಂದಿದೆ. 

ಇನ್ನಾದರೂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಇಂತಹ ಅನಾಹುತ ಆಗದಂತೆ ತಡೆಯ ಬೇಕಾಗುವುದು ಅನಿವಾರ್ಯವಾಗಿದೆ.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇



Leave a Reply

Your email address will not be published. Required fields are marked *