ಮಳೆ ಬಂದಾಗ ಕೆಸರು ಗದ್ದೆಯಂತಾಗುವ ಬೆನವಳ್ಳಿ – ಮಸರೂರು ರಸ್ತೆ : ಜನಪ್ರತಿನಿಧಿಗಳೇ ಇನ್ನಾದರೂ ಇತ್ತ ಗಮನಹರಿಸಿ!!!!!

ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆನವಳ್ಳಿ-ಮಸರೂರು-ಆಚಾಪುರ ಸಂಪರ್ಕದ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯ್ತಿ ರಸ್ತೆಮಳೆ ಬಂದಾಗ ಕೆಸರು ಗದ್ದೆಯಂತಾಗಿ ಸಾರ್ವಜನಿಕರು ಓಡಾಡದ ಸ್ಥಿತಿ ನಿರ್ಮಾಣವಾಗುತ್ತಿದೆ. 

ಬೆನವಳ್ಳಿಯಿಂದ ಮಸರೂರು, ಮಾಣಿಕರೆ, ಹಾಲಬಾವಿ, ಕೆಂಚನಾಲ, ಆಲುವಳ್ಳಿ, ಗಾಳಿಬೈಲು, ವಿರಕ್ತಮಠ, ಕಮದೂರು, ಮಾದಾಪುರ, ಕುರುಬರಜಡ್ಡು, ಲಕ್ಕವಳ್ಳಿ, ಕೆರೆಹಿತ್ತಲು, ಗಿಳಾಲಗುಂಡಿ, ಮುರುಘಾಮಠ ಆಚಾಪುರ ಇಸ್ಲಾಂಪುರ ಅಂದಾಸುರ ಹೀಗೆ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ಸಂಪರ್ಕದ ರಸ್ತೆಯಾಗಿದ್ದು ಈ ರಸ್ತೆಯನ್ನು ಕಳೆದ ಹಲವಾರು ವರ್ಷಗಳಿಂದ ಈ ಭಾಗದ ಜನಪ್ರತಿನಿಧಿಗಳಿಗೆ ಸಂಪರ್ಕದ ರಸ್ತೆಯ ದುರಸ್ತಿಗಾಗಿ ಮನವಿ ಮಾಡಲಾದರೂ ಕೂಡಾ ಯಾರು ಇತ್ತ ಗಮನ ವಹಿಸದೇ ನಿರ್ಲಕ್ಷ್ಯವಹಿಸಿರುವುದಕ್ಕೆ ಸಾಕ್ಷಿಯಾಗಿದೆ.

ಅರಸಾಳು ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಮಣ್ಣು ಜಲ್ಲಿ ಕಾಣದೇ ಎಷ್ಟೋ ವರ್ಷಗಳಾಗಿವೆ,ಸ್ವಾತಂತ್ರ್ಯ ಬಂದು ಎಂಟು ದಶಕಗಳಾದರು ಕೂಡಾ ಸರಿಯಾದ ಸಂಪರ್ಕ ರಸ್ತೆಗಳಿಲ್ಲದಿರುವುದು ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶದಿಂದ ಚಕ್ರ ವರಾಹಿ ಮಾಣಿ ಡ್ಯಾಂ ನಿರ್ಮಾಣಕ್ಕಾಗಿ ತಮ್ಮ ಮನೆ ಮಠವನ್ನು ಕಳೆದು ಕೊಂಡು ನಿರಾಶ್ರಿತರಾದ ಸಂತ್ರಸ್ಥ ಕುಟುಂಬಗಳೆ ಹೆಚ್ಚು ವಾಸಿಸುತ್ತಿರುವ ಇಲ್ಲಿನ ಗ್ರಾಮಗಳ ರೈತ ನಾಗರೀಕರ ಗೋಳು ಕೇಳೊರಿಲ್ಲದ ಸ್ಥಿತಿ ಎದುರಾಗಿದೆ.

 ಹಾಲಿ ಶಾಸಕ ಹರತಾಳು ಹಾಲಪ್ಪನವರು ಇನ್ನಾದರೂ ಈ ಸಂಪರ್ಕ ರಸ್ತೆಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಮುಂದಾಗುವರು ಎಂಬ ಆಶಾಭಾವನೆಯಲ್ಲಿ ಇಲ್ಲಿನ ಜನ ಸಾಮಾನ್ಯರಿದ್ದಾರೆ.

Leave a Reply

Your email address will not be published. Required fields are marked *