Headlines

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಂದಾಗಿ ಬಾಳೋಣ ಸಿನಿಮಾ ರಿಲೀಸ್ !!!!???? ಸಿನಿಮಾ ಹಿಟ್ ಆಗುತ್ತೋ??? ಪ್ಲಾಪ್ ಆಗುತ್ತೋ ????

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಂದಾಗಿ ಬಾಳೋಣ ಸಿನಿಮಾ ರಿಲೀಸ್ ಆಗಿದ್ದು ಇದು ಹಿಟ್ ಆಗುತ್ತೋ???? ಪ್ಲಾಪ್ ಆಗುತ್ತೋ ??? ಎಂಬುವುದನ್ನು ಕಾದುನೋಡಬೇಕಾಗಿದೆ.

ಹೌದು…. ಕಾಂಗ್ರೆಸ್ ನಾಯಕರು ಒಂದಾದ್ರ ?  ಹೀಗೊಂದು ಪ್ರೆಶ್ನೆ ಈಗ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ತೀರ್ಥಹಳ್ಳಿಯ ಕಾಂಗ್ರೆಸ್ ನಾಯಕರು ಎಂದರೆ ಅದು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್. ಇದು ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವ ವಿಷಯ. ಆದರೆ ಇತ್ತೀಚಿನ ಕೆಲವು  ತಿಂಗಳುಗಳ  ಹಿಂದೆ ಡಿಸಿಸಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ ಗೌಡರು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರೆ. ಅಲ್ಲಿಂದ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ನಾಯಕರ ಮುನಿಸು ಮತ್ತು ಮುಸುಕಿನ ಗುದ್ದಾಟ  ಸಾರ್ವಜನಿಕವಾಗಿಯೇ ಕಾಣುತ್ತಿತ್ತು. ಯಾವುದಾದರು ಕಾರ್ಯಕ್ರಮದಲ್ಲಿ ಕಿಮ್ಮನೆ ರತ್ನಾಕರ್ ಇದ್ದರೆ ಮಂಜುನಾಥ ಗೌಡರು ಇರುತ್ತಿರಲಿಲ್ಲ. ಮಂಜುನಾಥ ಗೌಡರು ಇದ್ದರೆ ಕಿಮ್ಮನೆ ರತ್ನಾಕರ್ ಇರುತ್ತಿರಲಿಲ್ಲ.  ಯಾವುದೇ ಕಾರ್ಯಕ್ರಮದ ವೇದಿಕೆಯಲ್ಲಿ ನಾಯಕರುಗಳು ಹೆಸರು ಹೇಳಲಿಚ್ಛಿಸದೆ ಒಬ್ಬರಿಗೊಬ್ಬರು ಗುರಿ ಮಾಡಿ ಮಾತನಾಡುತ್ತಿದ್ದರು. ಹಾಗೂ ಒಬ್ಬರಿಗೊಬ್ಬರು ಒಟ್ಟಿಗೆ  ವೇದಿಕೆ ಸಹ ಹಂಚಿಕೊಳ್ಳುತ್ತಿರಲಿಲ್ಲ. ಅನೇಕ ಬಾರಿ ಕಾಂಗ್ರೆಸ್ ನಲ್ಲಿ ಗೊಂದಲವನ್ನು ಸರಿ ಮಾಡಲು ಕಾಂಗ್ರೆಸ್ ನಾಯಕರು ಸಮಯ ನಿಗದಿ ಮಾಡಿದರು ಇಬ್ಬರು ನಾಯಕರಲ್ಲಿ  ಯಾರಾದರೂ ಒಬ್ಬರು ತಪ್ಪಿಸಿಕೊಳ್ಳುತ್ತಿದ್ದರು. 

ಇತ್ತೀಚಿಗೆ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆಯ ಕಾಂಗ್ರೆಸ್ ಗೆಲುವಿನಲ್ಲಿ ಇಬ್ಬರು ಒಂದಾದ್ರು ಎಂದೇ ಹೇಳಲಾಗಿತ್ತಾದರು ಮತ್ತೆ ಎಲ್ಲೂ ಇಬ್ಬರು ಕಂಡಿರಲಿಲ್ಲ. ಆದರೆ ಇಂದು ಪಟ್ಟಣದ ಬೆಟ್ಟಮಕ್ಕಿಯಲ್ಲಿ ನೆಡದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರು ಒಟ್ಟಿಗೆ ಕುಳಿತು ಮಾತುಕತೆ ನೆಡೆಸಿ ನಂತರ ಒಟ್ಟಿಗೆ ಸನ್ಮಾನ ಕೂಡ ಸ್ವೀಕರಿಸಿದ್ದಾರೆ. ಇಲ್ಲಿಯವರೆಗೆ ಎಲ್ಲಿಯೂ ಸಹ ಒಟ್ಟಿಗೆ ಕಾಣಿಸಿಕೊಳ್ಳದೆ ಇದ್ದ ನಾಯಕರು ಚುನಾವಣೆ ಸಮೀಪಿಸುತ್ತಿರುವ  ಕಾರಣಕ್ಕೆ  ತೀರ್ಥಹಳ್ಳಿಯ ಕಾಂಗ್ರೆಸ್ ನಾಯಕರು ಒಂದಾದ್ರ?  ಎನ್ನುವ ಮಾತು ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಮುಗಿದ ನಂತರ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.



Leave a Reply

Your email address will not be published. Required fields are marked *